ಡಿಸೆಂಬರ್ 26 ರಿಂದ 29 ರವರೆಗೆ ಯಳಗೋಡಿನಲ್ಲಿ ಮಾರಿಕಾಂಭ ದೇವಸ್ಥಾನದ ಬ್ರಹ್ಮಕಳಶೋತ್ಸವ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.23 : ತಾಲ್ಲೂಕಿನ ಯಳಗೋಡಿನಲ್ಲಿ ಮಾರಿಕಾಂಭ ದೇವಸ್ಥಾನದ ಗರ್ಭಗುಡಿ ಹಾಗೂ ನೂತನ ದೇವಸ್ಥಾನ ನಿರ್ಮಾಣದ ಪ್ರತಿಷ್ಠಾ ಬ್ರಹ್ಮಕಳಶೋತ್ಸವ ಡಿ.26 ರಿಂದ 29 ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿದೆ.
ಕಿರಣ್‍ಶರ್ಮ ಋಗ್ವೇದಿ, ರಾಜೇಶ್ ಪುರೋಹಿತ್, ಪ್ರಕಾಶ್ ಪುರೋಹಿತ್, ಭರತ್ ಶರ್ಮ, ಕಾಳಾಚಾರ್ಯ ಇವರುಗಳು ಪ್ರತಿಷ್ಠಾ ಬ್ರಹ್ಮಕಳಶಾಭಿಷೇಕ ಚಂಡಿಕಾಯಾಗ ನೆರವೇರಿಸಲಿದ್ದಾರೆ.
ಡಿ.26 ರಂದು ಸಂಜೆ 5 ಗಂಟೆಗೆ ಮಾರಿಕಾಂಭದೇವಿ ಗಂಗಾ ಪೂಜೆ, ರಾತ್ರಿ 8 ಗಂಟೆಗೆ ಯಜ್ಞಶಾಲೆಗೆ ಅಮ್ಮನವರ ಆಗಮನ, ಋತ್ವಿಜರಿಗೆ ಸ್ವಾಗತ, ಉಗ್ರಾಣ ಮುಹೂರ್ತ. 77 ರಂದು ಬೆಳಿಗ್ಗೆ 8-30 ಕ್ಕೆ ದೇವಿಯ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಗುರು ಗಣಪತಿ ಪೂಜೆ, ಪುಣ್ಯಾವಾಚನ, ತೋರಣ ಪ್ರತಿಷ್ಠೆ, ದೇವನಾಂದಿ, ಮಹಾಸಂಕಲ್ಪ, ಋತ್ವಿಗ್‍ವರಣೆ, ವೇದ ಪಾರಾಯಣ, ಗಣಹೋಮ, ಹಂಸಗಾಯತ್ರಿ ಹೋಮ, ಪ್ರಸನ್ನ ಪೂಜೆ, ಶಿಲ್ಪಿಪೂಜೆ, ಮಹಾಪೂಜೆ.
ಸಂಜೆ ನಾಲ್ಕು ಗಂಟೆಯಿಂದ ದೇವಿ ಸನ್ನಿಧಿಯಲ್ಲಿ ಭೇರಿತಾಡನ, ಪ್ರಾಸಾದ ಶುದ್ದಿ, ರಾಕ್ಷೋಘ್ನಹೋಮ, ವಾಸ್ತು ಹೋಮಾಧಿಗಳು, ಯಜ್ಞ ಮಂಟಪ ಸಂಸ್ಕಾರ, ಅಂಕುರಾರ್ಪಣೆ, ಅಗ್ನಿ ಜನನ, ಕಲಶ ಪ್ರತಿಷ್ಠೆ, ಮಹಾಪೂಜೆ.
28 ರಂದು ಬೆಳಿಗ್ಗೆ 8-30 ಕ್ಕೆ ದೇವತಾ ಪೂಜೆ, ಪುಣ್ಯಾವಾಚನ, ಬಿಂಬ ಶುದ್ದಿ, ಪ್ರಕ್ರಿಯೆಗಳು, ನವಗ್ರಹ ಹೋಮ, ಮಹಾಮೃತ್ಯುಂಜಯ ಹೋಮ, ಪೂರ್ಣಾಹುತಿ, ದೇವ್ಯಾಥರ್ವ, ಶೀರ್ಷ ಹೋಮ, ನಾಗದೇವರ ಪ್ರತಿಷ್ಟೆ ಹಾಗೂ ಪ್ರತಿಷ್ಟಾ ಹೋಮಗಳು ನಡೆಯಲಿದೆ.
ಸಂಜೆ ನಾಲ್ಕು ಗಂಟೆಯಿಂದ ಸೂಕ್ತಹೋಮ, ರಾತ್ರಿ ಸೂಕ್ತ ಹೋಮ, ಸರಸ್ವತಿ ಸೂಕ್ತ ಹೋಮ, ಶಿಖರ ಕಲಶ ಪ್ರತಿಷ್ಠೆ, ಅಧಿವಾಸ ಹೋಮಾದಿಗಳು ನೆರವೇರಲಿವೆ.
29 ರಂದು ಬೆಳಿಗ್ಗೆ 10 ರಿಂದ 10-55 ರವರೆಗೆ ಕುಂಭ ಲಗ್ನ ಸುಮುಹೂರ್ತದಲ್ಲಿ ಮಾರಿಕಾಂಭೆ ದೇವಿಗೆ ಬ್ರಹ್ಮಕುಂಭಾಭಿಷೇಕ, ಚಂಡಿಕಾ ಹೋಮ, ಅವಸ್ರುತ ಬಲಿ, ನಿತ್ಯ ನೈಮಿತ್ತದ ಪ್ರಾರ್ಥನೆ, ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆಯಿರುತ್ತದೆ.
ಬೆಳಿಗ್ಗೆ 11-30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಮಾರಿಕಾಂಭ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಜಿ.ಕೆ.ಮುರಿಗೆಪ್ಪ, ಕಾರ್ಯದರ್ಶಿ ಬಿ.ಟಿ.ನಾರಾಯಣಸ್ವಾಮಿ, ಸದಸ್ಯ ಬಿ.ನಾಗರಾಜಯ್ಯ ಇವರುಗಳು ಮನವಿ ಮಾಡಿದ್ದಾರೆ.