Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪಿಳ್ಳೇಕೆರೆನಹಳ್ಳಿ | ಡಿಸೆಂಬರ್ 27 ರಂದು ಗೌರಸಮುದ್ರ ಮಾರಮ್ಮದೇವಿ ದೇವಸ್ಥಾನದಲ್ಲಿ 13ನೇ ವರ್ಷದ ಕಾರ್ತಿಕ ಮಹೋತ್ಸವ

04:19 PM Dec 23, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ನಗರದ ಹೊರವಲಯದ ಪಿಳ್ಳೇಕೆರೆನಹಳ್ಳಿ ಗ್ರಾಮದ ಶಕ್ತಿ ದೇವತೆಯಾದ ಶ್ರೀ ಶ್ರೀ ಶ್ರೀ ಗೌರಸಮುದ್ರದೇವಿಯ ಸನ್ನಿಧಿಯಲ್ಲಿ ಡಿಸೆಂಬರ್ 27 ರಂದು ಕಾರ್ತಿಕ ಮಹೋತ್ಸವ ನಡೆಯಲಿದೆ.

Advertisement

ಅಂದು ಅಮ್ಮನವರಿಗೆ ಬೆಳಗ್ಗೆ 8.50 ನಿಮಿಷಕ್ಕೆ ಗಂಗೆಪೂಜೆ, ಆದ ನಂತರ ಕುಂಭ ಮೇಳದಲ್ಲಿ ಭಾಗವಹಿಸುವ ಎಲ್ಲಾ ಸಹೃದಯ ಭಕ್ತಾದಿಗಳು ಸಣ್ಣದಾದ ಸ್ಟೀಲ್‌ ಕೊಡಪಾನ, ಒಂದು ತೆಂಗಿನಕಾಯಿ,ಮತ್ತು ಒಂದು ಹಸಿರು ಬಣ್ಣದ ಜಾಕಿಟ್ ಪೀಸ್ ತರಲು ಕೋರಿದೆ. ಗ್ರಾಮದ ದೇವಸ್ಥಾನಗಳಿಗೆ ಹರಿಶಿನ ಕುಂಕುಮ ಅಕ್ಷತೆ ಸಮರ್ಪಣೆ, ಕುಂಭ ಹೊತ್ತ ಭಕ್ತಾಧಿಗಳವರಿಂದ ಶ್ರೀಮತಿ ಭೋರಮ್ಮ ಶ್ರೀ ಬೋರಪ್ಪ ಮತ್ತು ಮಕ್ಕಳು ಸೊಸೆಯಂದಿರು, ಮೊಮ್ಮಕ್ಕಳ ಭಕ್ತಿಯ ಕೊಡುಗೆಯಾದ 52.1 ಕೆ.ಜಿ. ತೂಕದ ಓಂಕಾರ ನಾದದ ಗಂಟೆಯ ಮೆರವಣಿಗೆ ಮತ್ತು ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ.

ಮಹಾಪಂಚಾಮೃತಾಭಿಶೇಕ, ಮಹಾಮಂಗಳಾರತಿ ಹಾಗೂ ಸಂಜೆ ಸರಿಯಾಗಿ 6.49 ಗಂಟೆಗೆ ದೀಪೋತ್ಸವ ಕಾರ್ಯಕ್ರಮ,ಸಂಜೆ 7.30 ಗಂಟೆಗೆ ಅನ್ನ ಸಂತರ್ಪಣೆ‌ ನೆರವೇರಲಿದೆ.

Advertisement

ಅನ್ನ ಸಂತಾರ್ಪಣೆ ದಾನಿಗಳು:

ಶ್ರೀಮತಿ ವೀಣಾ ಶ್ರೀ ಎಂ.ಆರ್. ಮಂಜುನಾಥ್, ಡಿ.ಡಿ.ಪಿ.ಐ., ಶಿಕ್ಷಣ ಇಲಾಖೆ, ಚಿತ್ರದುರ್ಗ

ಅಧ್ಯಕ್ಷರು, ಎಸ್.ಆರ್.ಎಸ್. ಸಮೂಹ ಶಿಕ್ಷಣ ಸಂಸ್ಥೆಗಳು, ಪಿಳ್ಳೇಕೆರೆನಹಳ್ಳಿ ಗ್ರಾಮ, ಚಿತ್ರದುರ್ಗ

ಶ್ರೀಮತಿ ಭಾಗ್ಯಮ್ಮ ಪೂಜಾರಿ ಗುತ್ಯಪ್ಪ ಮತ್ತು ಮಕ್ಕಳು ಈಚಲನಾಗೇನಹಳ್ಳಿ

ಶ್ರೀಮತಿ ನಿರ್ಮಲ ಮತ್ತು ಶ್ರೀ ನಾಗರಾಜ ಮತ್ತು ಮಕ್ಕಳು, ಈಚಲನಾಗೇನಹಳ್ಳಿ

ಶ್ರೀಮತಿ ಜಯಲಕ್ಷ್ಮಮ ಶ್ರೀ ಮಲ್ಲಿಕಾರ್ಜುನಯ್ಯ, ನಿವೃತ್ತ ಶಿಕ್ಷಕರು,
ಶ್ರೀ ರಂಗ ಗ್ರಾನೈಟ್, ಚಿತ್ರದುರ್ಗ
ಶ್ರೀಮತಿ ಕೆ. ಶೃತಿ ಕೋಂ ಶ್ರೀ ಎ.ಎನ್. ಶಂಕರ, ಜೆ.ಎಂ. . ರಸ್ತೆ, ಚಿತ್ರದುರ್ಗ
ಶ್ರೀಮತಿ ವಿಜಯಲಕ್ಷ್ಮೀ ಕೋಂ ಶ್ರೀ ಪರಮೇಶ್ವರಪ್ಪ ಮತ್ತು ಪಿ.
ಅಚ್ಚುತರಾವ್, ಕೆಳಗೋಟೆ, ಚಿತ್ರದುರ್ಗ

ಪುಷ್ಪಾಲಂಕಾರ ದಾನಿಗಳು: ಶೈಲಾಜಾ, ಕೆ. ದಯಾನಂದ ಬಿನ್ ಕಲ್ಲಪ್ಪ ಮತ್ತು ಜೆ.ಕೆ. ಫ್ಯಾಮಿಲಿ, ಬ್ಯಾಂಕ್ ಕಾಲೋನಿ, ಚಿತ್ರದುರ್ಗ

ಸತತ 13 ವರ್ಷಗಳಿಂದ ಕಾರ್ತೀಕ ಮಹೋತ್ಸವಕ್ಕೆ ದೀಪಾಲಂಕಾರ ಎಸ್.ಎಲ್.ಎನ್.ಎಸ್. ಶಾಮಿಯಾನ ಸಪ್ಲೇಯ‌ರ್ಸ್ ಚಿತ್ರದುರ್ಗ ಹಾಗೂ ಆರ್.ಆರ್. ಕ್ಯಾಟರಿಂಗ್ ವತಿಯಿಂದ ಅಡುಗೆ ತಯಾರಿಸಿ ಭಕ್ತರಿಗೆ ಅನ್ನ ಸಂತರ್ಪಣೆ ಮಾಡಲಾಗುತ್ತದೆ. ಸಮಸ್ತ ಗ್ರಾಮಸ್ಥರು, ಸರ್ವಭಕ್ತಾಧಿಗಳು ತನು-ಮನ-ಧನದೊಂದಿಗೆ ಸಹಕರಿಸಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಶ್ರೀ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಗೌರಸಮುದ್ರ ಮಾರಮ್ಮ ದೇವಾಲಯದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :

9886800003, 8618416841, 9901151427, 7353424042

Advertisement
Tags :
13th year Kartika Mahotsav13ನೇ ವರ್ಷದ ಕಾರ್ತಿಕ ಮಹೋತ್ಸವbengaluruchitradurgaGaurasamudra Marammadevi templekannadaKannadaNewsPillekerenahallisuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಗೌರಸಮುದ್ರ ಮಾರಮ್ಮದೇವಿ ದೇವಸ್ಥಾನಚಿತ್ರದುರ್ಗಪಿಳ್ಳೇಕೆರೆನಹಳ್ಳಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article