For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಜಿಲ್ಲಾ ಹಾಪ್‍ಕಾಮ್ಸ್ : ನಗರದ ಹಲವೆಡೆ ಹಣ್ಣು, ತರಕಾರಿ ಮಾರಾಟಕ್ಕೆ ಮಳಿಗೆ ಲಭ್ಯ

07:48 PM Dec 23, 2024 IST | suddionenews
ಚಿತ್ರದುರ್ಗ ಜಿಲ್ಲಾ ಹಾಪ್‍ಕಾಮ್ಸ್   ನಗರದ ಹಲವೆಡೆ ಹಣ್ಣು  ತರಕಾರಿ ಮಾರಾಟಕ್ಕೆ ಮಳಿಗೆ ಲಭ್ಯ
Advertisement

ಚಿತ್ರದುರ್ಗ. ಡಿ.23: ಜಿಲ್ಲಾ ತೋಟದ ಉತ್ಪನ್ನಗಳ ಬೆಳೆಗಾರರ ಸಹಕಾರ ಮಾರಾಟ ಮತ್ತು ಸಂಸ್ಕರಣ ಸಂಘ (ಜಿಲ್ಲಾ ಹಾಪ್‍ಕಾಮ್ಸ್) ಸರ್ಕಾರದ ಅಂಗ ಸಂಸ್ಥೆಯಾಗಿದ್ದು, ನೇರವಾಗಿ ರೈತರಿಂದ ಖರೀದಿಸಿದ ತಾಜಾ ಹಣ್ಣು ಮತ್ತು ತರಕಾರಿಗಳನ್ನು ಸೂಕ್ತ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ವ್ಯವಸ್ಥೆಯನ್ನು ಸಂಘವು ನಿರ್ವಹಿಸುತ್ತಿದೆ. ನಗರದ ಬ್ಯಾಂಕ್ ಕಾಲೋನಿ, ವಿದ್ಯಾನಗರ ಬಡಾವಣೆ, ತರಳಬಾಳು ನಗರ ಮತ್ತು ಸರಸ್ವತಿಪುರಂ ಬಡಾವಣೆ ಸೇರಿದಂತೆ ಒಟ್ಟು ನಾಲ್ಕು ಮಳಿಗೆಗಳು ಲಭ್ಯವಿವೆ.

Advertisement

ಸಂಘದ ನಿಬಂಧನೆಗೆ ಒಳಪಟ್ಟು, ಈ ಮಾರಾಟ ಮಳಿಗೆಗಳಲ್ಲಿ ಹಣ್ಣು ತರಕಾರಿಗಳನ್ನು ಮಾರಾಟ ಮಾಡಲು ಆಸಕ್ತಿಯುಳ್ಳವರು ನಗರದ ತುರುವನೂರು ರಸ್ತೆ, ಎಸ್.ಪಿ.ಆಫೀಸ್ ಹತ್ತಿರದ ಜಿಲ್ಲಾ ಹಾಪ್‍ಕಾಮ್ಸ್ ಕಚೇರಿಗೆ ಅಥವಾ ಜಿಲ್ಲಾ ಹಾಪ್‍ಕಾಮ್ಸ್ ಅಧ್ಯಕ್ಷರ ದೂರವಾಣಿ ಸಂಖ್ಯೆ 8197824949, ವ್ಯವಸ್ಥಾಪಕ ನಿರ್ದೇಶಕರು- 9900054307, ಕಾರ್ಯದರ್ಶಿ 7892174640 ಗೆ ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಜಿಲ್ಲಾ ಹಾಪ್ ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.

Advertisement
Advertisement
Tags :
Advertisement