Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಪ್ರಕೃತಿ ಶಾಲೆಯಲ್ಲಿ ಗಣಿತ ಹಾಗೂ ವಿಜ್ಞಾನ ವಸ್ತು ಪ್ರದರ್ಶನ

04:07 PM Nov 15, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 15 : ನಗರದ ತುರುವನೂರು ರಸ್ತೆಯ ಬಿ.ಎಲ್. ಗೌಡ ಲೇಔಟ್ ನಲ್ಲಿರುವ ಪ್ರಕೃತಿ ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣಿತ ಹಾಗೂ ವಿಜ್ಞಾನ ವಸ್ತು ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿತ್ತು.

Advertisement

ಈ ಕಾರ್ಯಕ್ರಮವನ್ನು ಎಚ್ ಎಸ್ ಟಿ ಸ್ವಾಮಿ ಯವರು ಉದ್ಘಾಟಿಸಿದರು. ಉಮೇಶ್.ವಿ.ತುಪ್ಪದ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಮಕ್ಕಳು ಮಾಡಿದಂತಹ ಮಾದರಿಗಳಾದ ತ್ಯಾಜ್ಯ ನೀರಿನ ಸಂರಕ್ಷಣೆ, ಜಲವಿದ್ಯುತ್ ಸ್ಥಾವರ, ಎ ಟಿ.ಎಂ ಮಾದರಿ, ಭಾಗಾಕಾರ ಮಾದರಿ, ನವಿಕರಿಸಬಹುದಾದ ಮತ್ತು ನವೀಕರಿಸಲಾಗದ ಸಂಪನ್ಮೂಲಗಳು, ಚಂದ್ರಯಾನ-3, ಮಾದರಿ ಮೂತ್ರಪಿಂಡದ ಮಾದರಿ ಸೌರ ವ್ಯೂಹದ ಮಾದರಿ, ಹೈಡ್ರಾಲಿಕ್ ಒತ್ತಡ, ಆರೋಹಣ ಮತ್ತು ಅವರೋಹಣ ಕ್ರಮ, ಕೋಷ್ಟಕಗಳು, ಮೋಟಾರ್ ಕಾರು, ಸೇರ್ಪಡೆ ಸಸ್ಯದ ಖಾದ್ಯ ಭಾಗಗಳು, ವಿವಿದ ರೀತಿಯ ಸಾರಿಗೆ, ಸಕ್ಕರೆ ಮಳೆಬಿಲ್ಲು, ವಿವಿಧ ರೀತಿಯ ಭೂ ರೂಪಗಳು, ಭಿನ್ನರಾಶಿಗಳು,ವಲಯಗಳು, ಕೋನಗಳು ಇತ್ಯಾದಿಗಳನ್ನು ನೋಡಿ ಮಕ್ಕಳಿಗೆ ಪುಟಾಣಿ ವಿಜ್ಞಾನಿಗಳೆಂದು ಹೆಚ್ಚಿನ ಪ್ರೇರಣೆಯನ್ನು ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಉಮೇಶ್ ವಿ ತುಪ್ಪದ ಅವರು ಮಾತನಾಡಿ, ಶಿಕ್ಷಕರು ಕೊಟ್ಟಂತಹ ಪಾಠಗಳನ್ನು ಹೇಗೆ ಮನದಟ್ಟು ಮಾಡಿಕೊಳ್ಳಬೇಕೆಂದು ಹೇಳಿಕೊಟ್ಟರು. ಕಾರ್ಯವನ್ನು ನಿರ್ವಹಿಸಿದಂತ ಎಲ್ಲಾ ಶಿಕ್ಷಕರಿಗೂ ಧನ್ಯವಾದಗಳನ್ನು ತಿಳಿಸಿದರು.
ಮಕ್ಕಳಿಗೆ ಮಾದರಿಯನ್ನು ಮಾಡಲು ಸಹಾಯ ಮಾಡಿದ ಶಿಕ್ಷಕಿ ತೇಜಸ್ವಿನಿ ಜೆ.ಬಿ, ಇಂದುಶ್ರೀ, ಅನಿಸ್ ಫತಿಮಾ, ರೇಣುಕಾ ಹಾಗೂ ಮಾಮಾ ಜಿಗಿಣಿ ರವರಿಗೆ ಧನ್ಯವಾದಗಳು ಹೇಳಿದರು.

Advertisement

ಈ ಕಾರ್ಯಕ್ರಮವನ್ನು ನಮ್ಮ ಶಾಲೆಯ ಕಾರ್ಯದರ್ಶಿಗಳಾದ ಕಾರ್ತಿಕ್ ಸರ್ ಅವರು ಎಲ್ಲರಿಗೂ ಧನ್ಯವಾದಗಳು ಕೋರಿದರು
ಎಲ್ಲಾ ಮಕ್ಕಳು ಮಾಡಿದಂತಹ ಮಾದರಿಗಳ ಬಗ್ಗೆ ಸವಿಸ್ತಾರವಾಗಿ ವಿಶ್ಲೇಷಣೆ ನೀಡಿದರು.

Advertisement
Tags :
bengaluruchitradurgakannadaKannadaNewsmaterial displaymathsPrakruti SchoolSciencesuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಪ್ರಕೃತಿ ಶಾಲೆಬೆಂಗಳೂರುವಸ್ತು ಪ್ರದರ್ಶನಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article