Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೋಕಾಯುಕ್ತ ದಾಳಿ : ಎಸಿಎಫ್ ಸುರೇಶ್ ಮನೆಯಲ್ಲಿ ಸಿಕ್ಕ ಚಿನ್ನಾಭರಣ ಮತ್ತು ನಗದು ಎಷ್ಟು ?

03:12 PM Dec 10, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 10 : ಇಂದು ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.‌ ಅದರಲ್ಲೂ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಎಸಿಎಫ್ ಸುರೇಶ್ ಅವರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. ಈ ವೇಳೆ ಸುರೇಶ್ ಮನೆಯಲ್ಲಿ ಚಿನ್ನಾಭರಣ ಹಾಗೂ ನಗದು ಸಿಕ್ಕಿದೆ.

 

Advertisement

ಸುರೇಶ್ ಅವರು ಚಿತ್ರದುರ್ಗ ಜಿಲ್ಲೆ ಹಿರಿಯೂರು ವಿಭಾಗದ ಎಸಿಎಫ್ ಆಗಿದ್ದಾರೆ. ಚಳ್ಳಕೆರೆ ಪಟ್ಟಣದಲ್ಲಿ ಅವರ ಮನೆ ಇದ್ದು, ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದಾಗ, ಸುರೇಶ್ ಮನೆಯಲ್ಲಿ 1 ಕೆಜಿ ಚಿನ್ನಾಭರಣ, 5 ಲಕ್ಷ ರೂ.‌ನಗದು ಪತ್ತೆ ಆಗಿದೆ. ಜೊತೆಗೆ 9 ಎಕರೆ ಜಮೀನು, 3 ನಿವೇಶನ ಸೇರಿ ಅಪಾರ ಆಸ್ತಿಪತ್ರ ಪತ್ತೆಯಾಗಿದೆ.

ಸುರೇಶ್ ಮೇಲೆ ಆದಾಯ ಮೀರಿದ ಆಸ್ತಿ ಗಳಿಕೆ ಆರೋಪವಿತ್ತು. ಈ ಹಿನ್ನೆಲೆ ದಾಳಿ ನಡೆಸಿದ್ದು, ದಾಳಿ ವೇಳೆ ಸಿಕ್ಕ ಆಸ್ತಿ ಪತ್ರದ ದಾಖಲೆಗಳನ್ನಿ ಲೋಕಾಯುಕ್ತರು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್, ಡಿವೈಎಸ್ಪಿ ಮೃತ್ಯುಂಜಯ ನೇತೃತ್ವದಲ್ಲಿ ಈ ದಾಳಿ ನಡೆದಿದ್ದು, ಪರಿಶೀಲನೆ ನಡೆಸಿದ್ದಾರೆ. ಸುರೇಶ್ ಅವರಿಗೆ ಸೇರಿವೆ ಎನ್ನಲಾದ ಚಳ್ಳಕೆರೆಯಲ್ಲಿರುವ 2 ಮನೆ ಮತ್ತು ಬೆಂಗಳೂರಿನಲ್ಲಿರುವ 1 ಮನೆ ಮೇಲೆ‌ ದಾಳಿ ನಡೆಸಲಾಗಿದೆ. ಒಂದಷ್ಟು ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಸುರೇಶ್ ಅವರು ಎಲ್ಲಾ ದಾಖಲೆಗೂ ಸರಿಯಾದ ದಾಖಲೆಗಳನ್ನು ನೀಡಿದರೆ ಅಧಿಕಾರಿಗಳು ಜಪ್ತಿ ಮಾಡಿದ ಅಷ್ಟು ವಸ್ತುಗಳನ್ನು ವಾಪಾಸ್ ಮಾಡಲಿದ್ದಾರೆ. ಸದ್ಯ ಸುರೇಶ್ ಅವರಿಗೆ ಸಂಬಂಧಿಸಿದ ಮನೆಗಳಲ್ಲಿ ಕೆಜಿಗಟ್ಟಲೆ ಚಿನ್ನ, ಲಕ್ಷಾಂತರ ರೂಪಾಯಿ ಹಣ ಸಿಕ್ಕಿದೆ.

Advertisement
Tags :
ACF SureshbengaluruchitradurgakannadaKannadaNewsLokayukta Raidsuddionesuddionenewsಎಸಿಎಫ್ ಸುರೇಶ್ಕನ್ನಡಕನ್ನಡವಾರ್ತೆಕನ್ನಡಸುದ್ದಿಚಿತ್ರದುರ್ಗಚಿನ್ನಾಭರಣದಾಳಿಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್ಹಿರಿಯೂರು
Advertisement
Next Article