Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆ ಸರ್ಕಾರ ಮುಂದಾಗಲಿ : ನ್ಯಾಯವಾದಿ ಸಿ.ಶಿವುಯಾದವ್

06:12 PM Dec 23, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 23 : ಜಾನಪದ ಸಂಗೀತವನ್ನು ಮುಂದಿನ ಪೀಳಿಗೆಗೆ ಹರಡುವ ಕೆಲಸವನ್ನು ಆಯಿತೋಳು ವಿರುಪಾಕ್ಷಪ್ಪ ಕುಟುಂಬ ನಿರ್ವಹಿಸಿಕೊಂಡು ಬರುತ್ತಿದೆ ಎಂದು ನ್ಯಾಯವಾದಿ ಸಿ.ಶಿವುಯಾದವ್ ಹೇಳಿದರು.

Advertisement

ಮಾರುತಿ ಸಾಂಸ್ಕøತಿಕ ಕಲಾ ಸಂಘ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ತ.ರಾ.ಸು.ರಂಗಮಂದಿರದಲ್ಲಿ ಸೋಮವಾರ ನಡೆದ ಸಂಗೀತ ಸಂಭ್ರಮವನ್ನು ತಬಲ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಮೂರನೇ ತಲಮಾರಿನ ಆಯಿತೋಳು ವಿರುಪಾಕ್ಷಪ್ಪ ಕುಟುಂಬ ಕಲೆಯನ್ನು ಪೋಷಿಸಿ ಬೆಳೆಸಿಕೊಂಡು ಬರುತ್ತಿದೆ. ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಸರ್ಕಾರ ಇಂತಹ ಕಲಾವಿದರಿಗೆ ನೆರವು ನೀಡುವಲ್ಲಿ ಮುಂದಾಗಬೇಕೆಂದು ಒತ್ತಾಯಿಸಿದರು.

ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಪ್ರೊ.ಗುರುನಾಥ್ ಮಾತನಾಡಿ ವಿದ್ಯಾರ್ಥಿಗಳು ಪಠ್ಯದಲ್ಲಿ ಮತ್ತು ಸಹ ಪಠ್ಯದಲ್ಲಿ ಕಲಿಯುವ ವಿಷಯಗಳಿಗೆ ಭಿನ್ನತೆಯಿಲ್ಲ. ಶಿಕ್ಷಣದ ಜೊತೆ ಸಂಸ್ಕಾರವಂತರಾದರೆ ಒಳ್ಳೆಯ ಸಮಾಜ ನಿರ್ಮಾಣವಾಗುತ್ತದೆ. ಸಂಗೀತದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಏಕೆಂದರೆ ಎಲ್ಲರನ್ನು ತಲೆದೂಗಿಸುವ ಶಕ್ತಿ ಸಂಗೀತಕ್ಕಿದೆ. ಸಂಗೀತ ಸಂಭ್ರಮದಂತ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ನಡೆಸಿ ಮಕ್ಕಳಿಗೆ ಮುಟ್ಟಿಸುವ ಕೆಲಸವಾಗಬೇಕೆಂದು ಸಲಹೆ ನೀಡಿದರು.

ಹಿರಿಯ ರಂಗಭೂಮಿ ಕಲಾವಿದ ತಿಪ್ಪೇಸ್ವಾಮಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಕರ್ನಾಟಕ ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಆಯಿತೋಳು ವಿರುಪಾಕ್ಷಪ್ಪ, ರಂಗಭೂಮಿ ಕಲಾವಿದ ತಬಲ ವಾದಕ ಜಿ.ಎನ್.ಚಂದ್ರಪ್ಪ ವೇದಿಕೆಯಲ್ಲಿದ್ದರು.
ಸಂಗೀತ ಸಂಭ್ರಮದಲ್ಲಿ ಸೋಬಾನೆ ಪದ, ಸಂಗೀತ ಹಾಡಲಾಯಿತು.

Advertisement
Tags :
Advocate C. ShivayadavbengaluruchitradurgaGovernmentkannadaKannadaNewssuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಕಲಾವಿದರುಚಿತ್ರದುರ್ಗನ್ಯಾಯವಾದಿ ಸಿ.ಶಿವುಯಾದವ್ಬೆಂಗಳೂರುಸರ್ಕಾರಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article