Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗಕ್ಕೆ ಆಗಮಿಸಿದ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಾಥ

06:39 PM Dec 05, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 05 :  ಏಳನೆ ವೇತನ ಆಯೋಗದ ಪರಿಷ್ಕøತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು ನೀಡದಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಬೆಳಗಾಂನಿಂದ ಹೊರಟು ಬೆಂಗಳೂರು ತಲುಪಲಿರುವ ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ಜಾಥ ಗುರುವಾರ ಚಿತ್ರದುರ್ಗಕ್ಕೆ ಆಗಮಿಸಿತು.

Advertisement

ಒನಕೆ ಓವವ್ವ ವೃತ್ತಕ್ಕೆ ಆಗಮಿಸಿದ ಜಾಥದಲ್ಲಿ ದಿನಾಂಕ : 1-7-2022 ರಿಂದ 31-7-2024 ರ ಅವಧಿಯಲ್ಲಿ ನಿವೃತ್ತರಾದ ಅಧಿಕಾರಿ/ನೌಕರರಿಗೆ ಪರಿಷ್ಕøತ ವೇತನ ಶ್ರೇಣಿಯನ್ವಯ ಸೌಲಭ್ಯ ನೀಡದೆ ನಿವೃತ್ತರನ್ನು ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿರುವುದನ್ನು ವಿರೋಧಿಸಿ ಧಿಕ್ಕಾರಗಳನ್ನು ಕೂಗಿದರು.

ವೇತನ ಶ್ರೇಣಿಗಳ ಪರಿಷ್ಕರಣೆಯ ಕಾರಣದಿಂದಾಗಿ ವೇತನ ಮತ್ತು ಭತ್ಯೆಗಳ ಹೆಚ್ಚಳವನ್ನು 1-8-2024 ರಿಂದ ನಗದಾಗಿ ಪಾವತಿ ಮಾಡತಕ್ಕದ್ದು, ಸೇವೆಯಿಂದ ನಿವೃತ್ತರಾದ ಅಥವಾ ಸೇವೆಯಲ್ಲಿರುವಾಗಲೆ ಮರಣ ಹೊಂದಿದ/ಸೇವೆಯಲ್ಲಿರುವುದು ಸಮಾಪ್ತಿಗೊಂಡ ಸರ್ಕಾರಿ ಪ್ರಕರಣಗಳಲ್ಲಿ ಪರಿಷ್ಕøತ ವೇತನ ಶ್ರೇಣಿಯಲ್ಲಿ ನಿಗಧಿಪಡಿಸಲಾದ ಕಾಲ್ಪನಿಕ ವೇತನ ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನವನ್ನು ಲೆಕ್ಕಚಾರವಾಗಿ ಪರಿಗಣಿಸಬೇಕೆಂದು ಹೊರಟಿರುವ ಜಾಥ ಬೆಂಗಳೂರು ತಲುಪಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಿದೆ.

ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಜ್ಯ ಸಂಚಾಲಕರಾದ ಹೆಚ್.ಗೋವಿಂದಯ್ಯ, ಜಿಲ್ಲಾ ಪ್ರಧಾನ ಸಂಚಾಲಕರಾದ ಟಿ.ಡಿ.ಜಗನ್ನಾಥ್, ರಮೇಶ್ ಮದರಿ, ಸಂಚಾಲಕರುಗಳಾದ ಹನುಮಂತಪ್ಪ ಬಿ.ಕೆ. ಲಕ್ಷ್ಮಯ್ಯ ಆರ್. ಪಂಚಾಕ್ಷರಯ್ಯ ಜಿ.ಬಿ. ದಯಾನಂದ ಡಿ. ರಾಮಚಂದ್ರಪ್ಪ ಕೆ. ಗುರುಮೂರ್ತಿ ಎಂ. ಸೈಯದ್ ಸಿರಾಜುದ್ದಿನ್, ತಿಪ್ಪೇಸ್ವಾಮಿ, ಜಿಲ್ಲೆಯ ಆರು ತಾಲ್ಲೂಕುಗಳ ಸಂಚಾಲಕರು, ಗೌರವ ಸಂಚಾಲಕರಾದ ಸುಗೇಂದ್ರ ಹೆಚ್. ಈ ಸಂದರ್ಭದಲ್ಲಿದ್ದರು.

Advertisement
Tags :
bengaluruchitradurgakannadaKannadaNewsKarnataka Retired Employees Forumsuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಕರ್ನಾಟಕ ನಿವೃತ್ತ ನೌಕರರ ವೇದಿಕೆಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article