Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದಲ್ಲಿ ಅತಿಥಿ ಉಪನ್ಯಾಸಕರ ವಿನೂತನ ಪ್ರತಿಭಟನೆ

05:19 PM Dec 11, 2023 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.11 : ಸೇವೆ ಖಾಯಂಗಾಗಿ ಒತ್ತಾಯಿಸಿ ಕಳೆದ ಹತ್ತೊಂಬತ್ತು ದಿನಗಳಿಂದಲೂ ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಧರಣಿ ನಡೆಸುತ್ತಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರುಗಳು ಸೋಮವಾರ ತರಕಾರಿ ಮಾರುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು.

Advertisement

ಸಸ್ತಾ ಮಾಲ್ ಸೋವಿ ಮಾಲ್ ಎಂದು ರಸ್ತೆಯಲ್ಲಿ ಹೋಗುತ್ತಿದ್ದ ಜನತೆಯನ್ನು ಕೂಗಿ ಕರೆಯುತ್ತಿದ್ದ ಅತಿಥಿ ಉಪನ್ಯಾಸಕರುಗಳು ಅವರೆಕಾಯಿ, ಟೊಮೋಟೋ ಇನ್ನು ಮುಂತಾದ ತರಕಾರಿಗಳನ್ನು ಮಾರಾಟ ಮಾಡುವ ಮೂಲಕ ರಾಜ್ಯ ಸರ್ಕಾರದ ಗಮನ ಸೆಳೆದರು.

ಕರ್ನಾಟಕ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಯಶೋದರ ಜಿ.ಎನ್. ಮಂಜುನಾಥ ವಿ.ಎಸ್. ಡಾ.ಜಗದೀಶ್, ಡಾ.ಗುರುಸ್ವಾಮಿ, ದಾಕ್ಷಾಯಿಣಿ, ಡಾ.ನಂದಿನಿ, ಮಧು ಹೆಚ್. ಡಾ.ಆಶ, ದಯಾನಂದ, ಡಾ.ರಾಜಣ್ಣ, ಫಿರ್ದೋಸ್, ನಾಗರತ್ನ, ಭಾಗ್ಯಶ್ರಿ, ಚಂದನ ಡಿ.ಎಂ. ಸುವರ್ಣ, ನಿಹಾರಿಕ ಇನ್ನು ಮುಂತಾದವರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Advertisement
Tags :
chitradurgaguest lecturersInnovative protest guest lecturerಅತಿಥಿ ಉಪನ್ಯಾಸಕರಚಿತ್ರದುರ್ಗವಿನೂತನ ಪ್ರತಿಭಟನೆ
Advertisement
Next Article