Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕೃಷ್ಣಮೃಗ ಹಾಗೂ ಕಾಡುಮೊಲದ ಚರ್ಮ ಅಕ್ರಮ ಸಂಗ್ರಹ, ವ್ಯಕ್ತಿ ಬಂಧನ

08:14 PM Jan 19, 2024 IST | suddionenews
Advertisement

 

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಜನವರಿ.19 :  ವ್ಯಕ್ತಿಯೋರ್ವ ತೋಟದ ಮನೆಯಲ್ಲಿ ಅಕ್ರಮವಾಗಿ ಇಟ್ಟುಕೊಂಡಿದ್ದ ಕೃಷ್ಣಮೃಗ ಹಾಗೂ ಕಾಡು ಮೊಲದ ಚರ್ಮವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾನೆ  ಎನ್ನುವ ಖಚಿತ ಮಾಹಿತಿ ಮೇರೆಗೆ ವಲಯ ಅರಣ್ಯ ಅಧಿಕಾರಿ ಆರ್ ಬಹುಗುಣ ಇವರ ನೇತೃತ್ವದಲ್ಲಿ ದಾಳಿ ಮಾಡಿ ಅಕ್ರಮವಾಗಿ ಸಂಗ್ರಹಿಸಿದ್ದ ಕೃಷ್ಣಮೃಗ ಹಾಗೂ ಕಾಡುಮೊಲದ ಚರ್ಮವನ್ನು ವಶಕ್ಕೆ ಪಡೆದು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Advertisement

ಚಳ್ಳಕೆರೆ ತಾಲೂಕಿನ ಜಾಜೂರು ಗ್ರಾಮದ ಭೀಮಪ್ಪ ಎನ್ನುವ  ವ್ಯಕ್ತಿ ತಮ್ಮ ತೋಟದ ಮನೆಯಲ್ಲಿ ಕಾಡು ಪ್ರಾಣಿಗಳಾದ ಕೃಷ್ಣಮೃಗ ಹಾಗೂ ಕಾಡು ಮೊಲದ ಸಂಗ್ರಹಿಸಿದ್ದು ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ಬಹುಗುಣ ಹಾಗೂ ಸಿಬ್ಬಂದಿಗಳು ದಾಳಿ ನಡೆಸಿ ಅಕ್ರಮವಾಗಿ ಮನೆಯಲ್ಲಿ ಸಂಗಹಿಸಿಟ್ಟಿದ್ದ ಕೃಷ್ಣ ಮೃಗ ಹಾಗೂ ಕಾಡು ಮೊಲದ ಚರ್ಮವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಾಳಿಯಲ್ಲಿ ವಲಯ ಅರಣ್ಯಾಧಿಕಾರಿ ಬಹುಗುಣ. ಅರಣ್ಯಾಧಿಕಾರಿ ವಸಂತ್ ಗುರು ಶಾಂತಪ್ಪ ಸೇರಿದಂತೆ ಸಿಬ್ಬಂದಿಗಳು ಇತರರಿದ್ದರು.

Advertisement
Tags :
chitradurgaIllegal collectionperson arrestedskins of blackbuckwild hareಕಾಡುಮೊಲಕೃಷ್ಣಮೃಗಚರ್ಮ ಅಕ್ರಮ ಸಂಗ್ರಹಚಿತ್ರದುರ್ಗವ್ಯಕ್ತಿ ಬಂಧನ
Advertisement
Next Article