ಹೊಳಲ್ಕೆರೆ | ಅಡಿಕೆ ಗೋದಾಮಿಗೆ ಕನ್ನ : 16 ಲಕ್ಷ ಹಣ ದೋಚಿ ಪರಾರಿಯಾದ ಕಳ್ಳರು
03:36 PM Aug 16, 2024 IST
|
suddionenews
Advertisement
ಸುದ್ದಿಒನ್, ಹೊಳಲ್ಕೆರೆ, ಆಗಸ್ಟ್.16 : ಅಡಿಕೆ ಗೋದಾಮಿಗೆ ಗುರುವಾರ ರಾತ್ರಿ ಕಳ್ಳರು ನುಗ್ಗಿ ಬೀಗ ಮುರಿದು ಕನ್ನ ಹಾಕಿ ಗೋದಾಮಿನಲ್ಲಿದ್ದ 16 ಲಕ್ಷ ನಗದು ದೋಚಿ ಪರಾರಿಯಾದ ಘಟನೆ ಅರೇಹಳ್ಳಿ ಗ್ರಾಮದ ವಿನಾಯಕ ಅಡಿಕೆ ಗೋದಾಮಿನಲ್ಲಿ ಜರುಗಿದೆ.
Advertisement
ಶುಕ್ರವಾರ ಬೆಳಿಗ್ಗೆ ಅಡಿಕೆ ಗೋದಾಮಿನ ಸಿಬ್ಬಂದಿ ಬಾಗಿಲು ತೆರೆಯಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮಾಲೀಕರಿಗೆ ವಿಷಯ ತಿಳಿಸಿದ ನಂತರ ಅವರು ಹೊಳಲ್ಕೆರೆ ಪೊಲೀಸ್ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಥಳಕ್ಕೆ ಚಿತ್ರದುರ್ಗ ಡಿವೈಎಸ್ಪಿ ದಿನಕರ್ ಭೇಟಿ, ಪರಿಶೀಲನೆ ಪರಿಶೀಲನೆ ಮಾಡಿ, ಬೆರಳಚ್ಚು ತಜ್ಞರು ಮತ್ತು ಶ್ವಾನ ದಳದವರು ಕೂಡಾ ಪರಿಶೀಲನೆ ನಡೆಸಿದರು. ಹೊಳಲ್ಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Advertisement
Advertisement
Next Article