For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ನನಗೇ ಟಿಕೆಟ್ ನೀಡಿ : ಡಿ.ಬಸವರಾಜು ಆಗ್ರಹ

05:06 PM Feb 12, 2024 IST | suddionenews
ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ನನಗೇ ಟಿಕೆಟ್ ನೀಡಿ   ಡಿ ಬಸವರಾಜು ಆಗ್ರಹ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಫೆ. 12 :  ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಈ ಬಾರಿ ಭೋವಿ ಜನಾಂಗದವರಿಗೆ ಟೀಕೆಟ್‍ ನೀಡಬೇಕು ಅದರಲ್ಲೂ ಪಕ್ಷದಲ್ಲಿ ನಿಷ್ಠಾವಂತರಾಗಿ ಕೆಲಸ ಮಾಡಿದವರನ್ನು ಗುರುತಿಸಿ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠರಿಗೆ ಕೆಪಿಸಿಸಿ ವಕ್ತಾರ, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಮಾಜಿ ಅಧ್ಯಕ್ಷರಾದ ಡಿ.ಬಸವರಾಜು ಆಗ್ರಹಿಸಿದ್ದಾರೆ.

Advertisement

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಾನು ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ವಿವಿಧ ರೀತಿಯ ಹುದ್ದೆಗಳಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ, ಅವಿಭಾಜಿತ ಚಿತ್ರದುರ್ಗ ಜಿಲ್ಲೆಯಲ್ಲಿಯೂ 1984ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎನ್.ಎಸ್.ಯು.ಐನ ಅಧ್ಯಕ್ಷನಾಗಿ, ರಾಜ್ಯ ವಿದ್ಯಾರ್ಥಿ ಕಾಂಗ್ರೆಸ್ ಉಪಾಧ್ಯಕ್ಷನಾಗಿ, ಅಖಂಡ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ, ದಾವಣಗೆರೆ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಎರಡು ಜಿಲ್ಲೆಯಲ್ಲಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೇನೆ, ಇದರೊಂದಿಗೆ ದಾವಣಗೆರೆ ಜಿಲ್ಲೆ ಕಾಂಗ್ರೆಸ್ ಸೇವಾದಳದ ಅಧ್ಯಕ್ಷನಾಗಿ, ರಾಜ್ಯದ ಪ್ರಧಾನ ಸಂಘಟಕರಾಗಿ ಸೇವೆಯನ್ನು ಸಲ್ಲಿಸಿದ್ದೇನೆ ಎಂದರು.

ಕೆಪಿಸಿಸಿ ಸದಸ್ಯನಾಗಿ ಕಾರ್ಯದರ್ಶಿಯಾಗಿ ಸಂಯೋಜಕರಾಗಿ ಮಾದ್ಯಮ ವಿಶ್ಲೇಷಕನಾಗಿ ಪ್ರಸ್ತತ ವಕ್ತರರಾಗಿ ಕೆಲಸವನ್ನು ಮಾಡುತ್ತಿದ್ದೇನೆ, 2014ರಲ್ಲಿ ಹಾವೇರಿಯಲ್ಲಿ ಸಲೀಂರವರು ಲೋಕಸಭಾ ಅಭ್ಯರ್ಥಿಯಾಗಿದ್ದಾಗ ವೀಕ್ಷಕನಾಗಿ ಕೆಲಸವನ್ನು ಮಾಡಿದ ಅನುಭವ ಇದೆ. ಇದರೊಂದಿಗೆ ಬೆಂಗಳೂರು ಬಿಬಿಎಂಪಿ, ಬೆಂಗಳೂರು ಆರು ವಿಧಾನಸಬಾ ಕ್ಷೇತ್ರಗಳಲ್ಲಿ ಪಕ್ಷದ ವೀಕ್ಷಕನಾಗಿ ಕೆಲಸ ಮಾಡಿದ್ದೇನೆ, ದಾವಣಗೆರೆ ನಗರಸಭೆಗೆ ಮೂರು ಬಾರಿ ಗೆಲುವನ್ನು ಸಾಧಿಸಿ ಒಂದು ಬಾರಿ ಅಧ್ಯಕ್ಷನಾಗಿ ಕೆಲಸವನ್ನು ಮಾಡಿದ್ದೇನೆ, ಅಲ್ಲದೆ ಈ ಸಮಯದಲ್ಲಿ ವಿವಿಧ ಮಠಾಧೀಶರಿಂದ ಆದರ್ಶ ನಗರಸಭಾ ಅಧ್ಯಕ್ಷ ಎಂಬ ಬಿರದನ್ನು ಪಡೆದಿದ್ದೆನೆ ಎಂದು ಬಸವರಾಜು ತಿಳಿಸಿದರು.

2014ರ ವಿಧಾನಸಭಾ ಸಮಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರದಲ್ಲಿ ರೇಷ್ಮೇ ಉದ್ಯಮಗಳ ನಿಗಮಕ್ಕೆ ಅಧ್ಯಕ್ಷನಾಗಿ ಸರ್ಕಾರದ 22 ಕೋಟಿ ಸಾಲದಲ್ಲಿದ್ದ ನಿಗಮವನ್ನು ಲಾಭದಲ್ಲಿ ತರಿಸಿ ಸರ್ಕಾರದ ಸಾಲವನ್ನು ವಾಪಾಸ್ಸು ಮಾಡಿ ಇದರೊಂದಿಗೆ 10 ಕೋಟಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದೇನೆ, ಸರ್ಕಾರದ ನೂರಾರು ನಿಗಮಗಳಲ್ಲಿ ನಮ್ಮ ನಿಗಮ ನಂಬರ್ ಒನ್ ನಿಗಮ ಎಂದು ಬಹುಮಾನವನ್ನು ಪಡೆದಿದೆ. ಕಳೆದ 40 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆಯನ್ನು ಮಾಡುತ್ತಾ ಬಂದಿದ್ದೇನೆ ಈಗಾಗಲೇ ಹಲವಾರು ವಿಧಾನಸಭೆ ಮತ್ತು ಲೋಕಸಭೆಗಳಿಗೆ ಟೀಕೆಟನ್ನು ಕೇಳಿದ್ದೇ ಅದರೆ ಪಕ್ಷ ನೀಡಿರಲಿಲ್ಲ.

ಈ ಬಾರಿಯಾದರೂ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭೋವಿ ಸಮಾಜದವನಾದ ನನಗೆ ಟೀಕೆಟ್‍ನ್ನು ನೀಡುವುದರ ಮೂಲಕ ಬೋವಿ ಸಮಾಜವನ್ನು ಗುರುತಿಸಬೇಕಿದೆ ಎಂದು ಪಕ್ಷದ ಮುಖಂಡರನ್ನು ಒತ್ತಾಯಿಸಿದ ಬಸವರಾಜು ಈ ಬಾರಿಯ ಲೋಕಸಭೆ ನಮ್ಮ ಜನಾಂಗಕ್ಕೆ ಟೀಕೇಟ್ ನೀಡಲು ಸಾಧ್ಯವಾಗದಿದ್ದರೆ ಮುಂಬರುವ ವಿಧಾನ ಪರಿಷತ್‍ನ 11 ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಭೋವಿ ಸಮಾಜಕ್ಕೆ ನೀಡುವುದರ ಮೂಲಕ ನಮ್ಮ ಸಮಾಜವನ್ನು ಮೇಲೆತ್ತಬೇಕಿದೆ ಎಂದು ಎಐಸಿಸಿಯ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‍ರವರನ್ನು ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ಅಂಜನಪ್ಪ,ಮ ರಾಮಣ್ಣ, ವೆಂಕಟೇಶ್, ರಾಜು ದಾದಾಪೀರ್, ವಿನಾಯಕ, ಶಿವಕುಮಾರ್, ತಿಪ್ಪೇಸ್ವಾಮಿ ವಿರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

Tags :
Advertisement