ಸ್ವಾತಂತ್ರ್ಯ ಹೋರಾಟಗಾರ ಸಣ್ಣರಾಮಪ್ಪ ನಿಧನ
06:46 PM Dec 21, 2024 IST
|
suddionenews
Advertisement
Advertisement
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 21 : ಸ್ವಾತಂತ್ರ್ಯ ಹೋರಾಟಗಾರ ಸಣ್ಣರಾಮಪ್ಪ(96) ಶನಿವಾರ ಮಧ್ಯಾಹ್ನ 1 ಗಂಟೆಗೆ ಚಳ್ಳಕೆರೆ ತಾಲ್ಲೂಕು ಚಿತ್ರನಾಯಕನಹಳ್ಳಿಯಲ್ಲಿರುವ ನಿವಾಸದಲ್ಲಿ ನಿಧನರಾದರು.
ಬಿಜೆಪಿ. ಜಿಲ್ಲಾ ಎಸ್ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಾಂಡುರಂಗ ಸೇರಿದಂತೆ ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿರುವ ಮೃತ ಸಣ್ಣರಾಮಪ್ಪನವರ ಅಂತ್ಯಕ್ರಿಯೆ ಭಾನುವಾರ ಬೆಳಿಗ್ಗೆ ಸುಮಾರು 10-30 ಕ್ಕೆ ಸ್ವಗ್ರಾಮ ಚಿತ್ರನಾಯಕನಹಳ್ಳಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
Advertisement
Advertisement
Next Article