Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗದ ಖ್ಯಾತ ವೈದ್ಯರಿಗೆ ಸೈಬರ್ ವಂಚಕರಿಂದ ಮೋಸ : 1.27 ಕೋಟಿ ವಂಚನೆ...!

09:11 AM Aug 26, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಸೈಬರ್ ವಂಚಕರು ದಿನೇ‌ ದಿನೇ ಹೊಸ ಹೊಸ ಮಾರ್ಗಗಳನ್ನು ಹುಡುಕಿಕೊಳ್ಳುತ್ತಾ ಇರುತ್ತಾರೆ. ಹಳೆಯ ಐಡಿಯಾದಲ್ಲಿ ಜನ ಅಲರ್ಟ್ ಆದರೆ ಅವರ ಬಳಿ ಇನ್ನಷ್ಟು ಐಡಿಯಾಗಳು ರೆಡಿ ಇರುತ್ತವೆ. ಆದರೆ ವಿಚಿತ್ರವೆಂದರೆ ಸೈಬರ್ ಕಳ್ಳರ ಬಗ್ಗೆ ಓದಿ, ತಿಳಿದುಕೊಂಡ ವಿದ್ಯಾವಂತರೆ ಮೋಸ ಹೋಗುತ್ತಾರೆ. ಕೆಲಸದ ಒತ್ತಡವೋ ಏನೋ ಸೈಬರ್ ವಂಚಕರು ಹೇಳಿದ ಮಾತನ್ನು ಬೇಗ ನಂಬಿ ಮೋಸ ಹೋಗುವ ಜನರೇ ಹೆಚ್ಚು. ಇದೀಗ ಚಿತ್ರದುರ್ಗದಲ್ಲೂ ಅಂತದ್ದೇ ಘಟನೆ ನಡೆದಿದೆ. ಆದರೆ ಒಂದೆರಡು ಸಾವಿರ ಅಲ್ಲ ಬರೋಬ್ಬರಿ ಕೋಟಿ ಲೆಕ್ಕದಲ್ಲಿ ಹಣ ವಂಚಿಸಿದ್ದಾರೆ.

Advertisement

ಚಿತ್ರದುರ್ಗದ ಖ್ಯಾತ ಹಾಗೂ ಹಿರಿಯ ವೈದ್ಯರಾದ  ಡಾ. ಶ್ರೀನಿವಾಸ್ ಶೆಟ್ಟಿ ವಂಚನೆಗೊಳಗಾದವರು. ಇವರಿಗೆ ಬಂದ ಒಂದೇ ಒಂದು ಕರೆಯಿಂದ 1 ಕೋಟಿ 27ಲಕ್ಷ ರೂಪಾಯಿ ಕಳೆದುಕೊಳ್ಳುವಂತಾಗಿದೆ.

ಆ ವಂಚಕರು ನಾವು TRAI & ಮುಂಬೈ ಪೊಲೀಸರು ಎಂದು ಹೇಳಿ, ನಿಮ್ಮ ಬ್ಯಾಂಕ್ ಖಾತೆ ಬಳಸಿ ಮನಿ ಲ್ಯಾಂಡರಿಂಗ್ ವಂಚನೆ ಆಗಿದೆ. ನಿಮ್ಮ ಖಾತೆಯ ಹಣದ ಆಡಿಟ್ ಮಾಡಬೇಕಿದೆ ಎಂದು ನಂಬಿಸಿದ್ದರು. ವಾಟ್ಸಪ್ ಕಾಲ್ & ನಾರ್ಮಲ್ ಕಾಲ್ ಮಾಡಿ ನಂಬಿಸಿದ್ದರು. ವೈದ್ಯರು ಅವರೇಳಿದ ನಿಯಮಗಳನ್ನು ಪಾಲನೆ ಮಾಡುತ್ತಾ ಹೋದರು. ಇದರಿಂದ ಡಾ.ಶೆಟ್ಟಿ ಅವರ ಖಾತೆಯಿಂದ ವಂಚಕರ ಖಾತೆಗೆ 1ಕೋಟಿ 27ಲಕ್ಷ ಹಣ ವರ್ಗಾವಣೆಯಾಗಿತ್ತು. ಆಮೇಲೆ ತಾವೂ ಮೋಸ ಹೋಗಿರುವುದು ಡಾ. ಶ್ರೀನಿವಾಸ ಶೆಟ್ಟಿ ಅವರಿಗೆ ತಿಳಿದಿದೆ. ಈ ಘಟನೆ ಶುಕ್ರವಾರ ನಡೆದಿದ್ದು ಈ ಸಂಬಂಧ ಅವರು ಶನಿವಾರ ಚಿತ್ರದುರ್ಗದ CEN ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಿಸಿದ್ದಾರೆ.

Advertisement

Advertisement
Tags :
bengalurucheatedchitradurgacyber crooksdoctorFamousfraudsuddionesuddione newsಖ್ಯಾತ ವೈದ್ಯಚಿತ್ರದುರ್ಗಬೆಂಗಳೂರುಮೋಸಸುದ್ದಿಒನ್ಸುದ್ದಿಒನ್ ನ್ಯೂಸ್ಸೈಬರ್ ವಂಚಕಸೈಬರ್ ವಂಚನೆ
Advertisement
Next Article