Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ ನಗರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ : ಸದಸ್ಯರಿಂದ ನಾಮಪತ್ರ ಸಲ್ಲಿಕೆ

12:06 PM Aug 26, 2024 IST | suddionenews
Advertisement

ಚಿತ್ರದುರ್ಗ. ಆಗಸ್ಟ್.26: ಚಿತ್ರದುರ್ಗ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಆಯ್ಕೆಗೆ ಇಂದು(ಆ.26) ಸೋಮವಾರ ಚುನಾವಣೆ ನಡೆಯುತ್ತಿದ್ದು, ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯವರೆಗೆ ನಾಮಪತ್ರಗಳ ಸಲ್ಲಿಕೆ ಕಾರ್ಯ ನಡೆಯಿತು.

Advertisement

ಅಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂ 29 ಸದಸ್ಯೆ ಸುನೀತಾ.ಬಿ.ಎಂ ಹಾಗೂ ವಾರ್ಡ್ ನಂ 32 ಸದಸ್ಯೆ ಎಸ್.ಸಿ.ತಾರಕೇಶ್ವರಿ ನಾಮಪತ್ರ ಸಲ್ಲಿಸಿದರು.

Advertisement

ಉಪಾಧ್ಯಕ್ಷ ಸ್ಥಾನಕ್ಕೆ ವಾರ್ಡ್ ನಂಬರ್ 33 ಸದಸ್ಯೆ ಶ್ರೀದೇವಿ.ಜಿ.ಎಸ್ ಹಾಗೂ ವಾರ್ಡ್ ನಂ.22 ರ ಸದಸ್ಯೆ ಬಿ.ಎಸ್.ರೋಹಿಣಿ ನಾಮಪತ್ರ ಸಲ್ಲಿಸಿದರು.

ಚುನಾವಣಾ ಅಧಿಕಾರಿಯಾಗರುವ ಉಪವಿಭಾಗಾಧಿಕಾರಿ ಎಂ.ಕಾರ್ತಿಕ್ ನಾಮಪತ್ರ ಸ್ವೀಕರಿಸಿದರು.

ಮಧ್ಯಾಹ್ನ 1 ಗಂಟೆಯಿಂದ 1 ಗಂಟೆ 5 ನಿಮಿಷದವರೆಗೆ ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದೆ. ನಂತರ 1 ಗಂಟೆ 5 ನಿಮಿಷದಿಂದ 1 ಗಂಟೆ15 ನಿಮಿಷದವರೆಗೆ ನಾಮಪತ್ರ ಹಿಂಪಡೆಯಲು ಅವಕಾಶವಿದೆ. ನಾಮಪತ್ರ ಹಿಂಪಡೆಯದೆ ಇದ್ದರೆ ಮಧ್ಯಾಹ್ನ 1 ಗಂಟೆ 20 ನಿಮಿಷಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ನಾಮಪತ್ರ ಸಲ್ಲಿಕೆ ವೇಳೆ ತಹಶೀಲ್ದಾರ್ ಡಾ.ನಾಗವೇಣಿ ಹಾಗೂ ನಗರ ಸಭೆ ಆಯುಕ್ತೆ ರೇಣುಕಾ.ಎಂ ಉಪಸ್ಥಿತರಿದ್ದರು.

Advertisement
Tags :
bengaluruchitradurgaChitradurga Municipal CouncilelectionPresident and Vice PresidentSubmission of nomination paperssuddionesuddione newsಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಚಿತ್ರದುರ್ಗಚಿತ್ರದುರ್ಗ ನಗರಸಭೆನಾಮಪತ್ರ ಸಲ್ಲಿಕೆಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article