For the best experience, open
https://m.suddione.com
on your mobile browser.
Advertisement

ಮಹಿಳೆಯರ ಅರ್ಥಿಕ ಸಬಲತೆ ನಮ್ಮ ಗುರಿ : ಡಾ.ಡಿ.ವಿರೇಂದ್ರ ಹೆಗ್ಗಡೆ

07:22 PM Dec 25, 2024 IST | suddionenews
ಮಹಿಳೆಯರ ಅರ್ಥಿಕ ಸಬಲತೆ ನಮ್ಮ ಗುರಿ   ಡಾ ಡಿ ವಿರೇಂದ್ರ ಹೆಗ್ಗಡೆ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 25 : ಮಹಿಳೆಯರು ಅರ್ಥಿಕವಾಗಿ ಸಬಲರನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ, ಇದನ್ನು ಮಾಡುವುದಕ್ಕಾಗಿ ಸಂಘಗಳನ್ನು ಸ್ಥಾಪನೆ ಮಾಡುವುದರ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ತಿಳಿಸಿದರು.

Advertisement
Advertisement

ಹೊಳಲ್ಕೆರೆ ನಗರದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭೀವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್‌ನ ವಿಕಾಸ ಸೌಧ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನ್ನು ತೃಪ್ತಿ ಪಡಿಸಲು ಅನ್ನದಿಂದ ಮಾತ್ರ ಸಾಧ್ಯವಿದೆ ಬೇರೆ ಏನನ್ನಾದರೂ ನೀಡದರು ಸಹಾ ಇನ್ನೂ ಬೇಕು ಎನ್ನಲಾಗುತ್ತದೆ, ನಮ್ಮ ಸಂಸ್ಥೆಯವತಿಯಿಂದ ಅನ್ನದಾನ ವಿದ್ಯಾದಾನ, ಆರೋಗ್ಯ ಹಾಗೂ ಆಭಯವನ್ನು ನೀಡುವಂತ ಕಾರ್ಯವನ್ನು ಮಾಡಲಾಗುತ್ತದೆ. ಜನತೆ ಸ್ವಯಂ ಉದ್ಯೋಗಿಗಳಾಗಲು ವಿವಿಧ ರೀತಿಯ ತರಬೇತಿಯನ್ನು ನೀಡುವುದರ ಮೂಲಕ ಆವರನ್ನು ಸ್ವಾವಲಂಬಿಗಳನ್ನಾಗಿ ಮಾಡಲಾಗುತ್ತಿದೆ. ಜನತೆ ಸ್ವಾವಲಂಬಿಗಳಾಗುವುದು ಮೂಲಕ ತಮ್ಮ ಬಡತವನ್ನು ನಿವಾರಣೆಯನ್ನು ಮಾಡಿಕೊಳ್ಳಬೇಕಿದೆ ಎಂದರು.

ಜನರಿಗೆ ಏನು ಬೇಕೆಂದರೆ ನಮಗೆ ಹಣವನ್ನು ನೀಡಿ ಸಾಕು ಎನ್ನುತ್ತಿದ್ದಾರೆ ಆದರೆ ಹಣದಿಂದ ಏನು ಮಾಡಲು ಸಾಧ್ಯವಿಲ್ಲ, ಇಂದಿನ ದಿನಮಾನದಲ್ಲಿ ನಮಗೆ ನೆಮ್ಮದಿ, ತೃಪ್ತಿ ಅಗತ್ಯವಾಗಿದೆ. ನಮ್ಮಲ್ಲಿನ ಸ್ವಸಹಾಯ ಸಂಘದ ಸದಸ್ಯರನ್ನು ತಮ್ಮ ಸಂಸ್ಥೆಯಲ್ಲಿ ಪಾಲುದಾರರನ್ನಾಗಿ ಮಾಡಿಕೊಳ್ಳಲಾಗಿದೆ ಯಾವ ಸಂಸ್ಥೆಯಲ್ಲಿಯೂ ಸಹಾ ಈ ರೀತಿ ಇಲ್ಲ, ನಾವು ಬಂಡವಾಳವನ್ನು ನೀಡುತ್ತೇವೆ ನೀವುಗಳು ಶ್ರಮವನ್ನು ಹಾಕುವುದರ ಮೂಲಕ ಉತ್ತಮವಾದ ಬದುಕನ್ನು ನಡೆಸಬೇಕಿದೆ, ಜನ ಈ ಮುಂಚೆ ಕೃಷಿಗೆ ಭೂಮಿ, ಜಾನುವಾರು, ಸಹಾಯವನ್ನು ಕೇಳುತ್ತಿದ್ದರು ಆದರೆ ಈಗ ಹಳ್ಳಿಗಳಲ್ಲಿಯೂ ಬೈಕ್‍ಗಳ ಷೊ ರೂಂ ಹಾಗೂ ಬಂಗಾರದ ಅಂಗಡಿಗಳು ಬಂದಿವೆ, ಇದರಿಂದ ತಿಳಿಯುತ್ತದೆ ನಮ್ಮ ಜನತೆ ಮುಂದುವರೆದಿದ್ಧಾರೆ ಎಂದು ಅವರು, ಇಂದು ಮಹಿಳೆಯರು ಜಾಗೃತರಾಗಿದ್ದಾತರೆ ಆವರು ಅರ್ಥಿಕವಾಗಿ ಸ್ವಾವಲಂಬಿಗಳಾಗಲು ನಮ್ಮ ಸಂಸ್ಥೆ ನೆರವಾಗಿದೆ. ಅವರನ್ನು ಮನೆಯ ಆರ್ಥಿಕ ಮಂತ್ರಯನ್ನಾಗಿ ಮಾಡಲಾಗುತ್ತಿದೆ ಎಂದರು.

ಮಹಿಳೆಯರ ಮೇಲೆ ಆಪಾರವಾದ ನಂಬಿಕೆ ಇದೆ ಅವರಿಗೆ ಸಾಲವನ್ನು ನೀಡಿದರೆ ವಾಪಾಸ್ಸು ಬರುತ್ತದೆ ಎಂಬ ನಂಬಿಕೆ ಇದೆ. ಅವರು ಪಡೆದ ಸಾಲವನ್ನು ಸರಿಯಾಗಿ ಉಪಯೋಗವನ್ನು ಮಾಡುತ್ತಾರೆ ಅದೇ ರೀತಿ ವಾಪಸ್ಸು ಮಾಡುತ್ತಾರೆ ಇದರಿಂದ ನಾವು ಅಲ್ಲದೆ ಬ್ಯಾಂಕ್‍ಗಳು ಸಹಾ ಮಹಿಳೆಯರಿಗೆ ಸಾಲವನ್ನು ನೀಡಲು ಮುಂದಾಗಿದೆ. ನಮ್ಮಲ್ಲಿ ಸ್ವಸಹಾಯ ಸಂಘಗಳಲ್ಲಿ ಪ್ರತಿ ವರ್ಷ ರೇಟಿಂಗ್ ನೀಡಲಾಗುತ್ತದೆ ಇದರಲ್ಲಿ ಉತ್ತಮವಾಗಿ ಕೆಲಸವನ್ನು ಮಾಡುವ ಸಂಘಗಳಿಗೆ ಲಾಭಾಂಶವನ್ನು ನೀಡಲಾಗುತ್ತದೆ ಹೊಳಲ್ಕೆರೆಯಲ್ಲಿ ಇರುವ 4000 ಸಂಘಗಳಲ್ಲಿ 50 ಸಂಘಗಳು ಪ್ರಗತಿ ಕಡಿಮೆಯಾಗಿದೆ ಇದನ್ನು ಸರಿಪಡಿಸಬೇಕಿದೆ ಎಂದು ವಿರೇಂದ್ರ ಹೆಗ್ಗಡೆ ಕರೆ ನೀಡಿದರು.

ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪುನಶ್ವೇತನಗೊಂಡ ಕೆರೆಯ ಹಸ್ತಾಂತರ ಪ್ರಮಾಣ ಪತ್ರ ವಿತರಣೆಯನ್ನು ಮಾಡಿದ ಸಂಸದರಾದ ಗೋವಿಂದ ಎಮ್ ಕಾರಜೋಳ ಮಾತನಾಡಿ, ಹೊಳಲ್ಕೆರೆಯಲ್ಲಿ 4500 ಸ್ವಸಹಾಯ ಸಂಗಳಿದ್ದು ಇದರಲ್ಲಿ 40 ಸಾವಿರ ಜನ ಸದಸ್ಯರಿದ್ದಾರೆ. ರಾಜ್ಯದಲ್ಲಿ ಈ ರೀತಿಯಾದ ಸ್ವಸಹಾಯ ಸಂಘಗಳು ಹೆಚ್ಚಾಗಿದ್ದು, ಇದರ ಪ್ರಯೋಜನವನ್ನು ಹಲವಾರು ಜನತೆ ಪಡೆಯುತ್ತಿದ್ದಾರೆ. ಹೊಳಲ್ಕೆರೆಯಲ್ಲಿ ಸಂಘದವರು ಉಳಿತಾಯದ ಇದುವರೆವಿಗೆ 24.46 ಕೋಟಿ ಆಗಿದೆ, ಉತ್ತಮವಾದ ನಿರ್ವಹಣೆಯನ್ನು ಮಾಡಿದ ಸಂಘಗಳಿಗೆ ಬ್ಯಾಂಕ್‍ಗಳಿಂದ 204.16 ಕೋಟಿ ರೂ. ಸಾಲವನ್ನು ಕೊಡಿಸಲಾಗಿದೆ. ಉತ್ತಮವಾದ ಆರ್ಥಿಕ ವ್ಯವಹಾರವನ್ನು ನಡೆಸಿದ ಸಂಘಗಳಿಗೆ ಲಾಭಾಂಶವನ್ನು ವಿತರಣೆ ಮಾಡಲಗುತ್ತಿದ್ದು ಇದುವರೆವಿಗೂ ಎರಡು ಬಾರಿ ಲಾಭಾಂಶವನ್ನು ವಿತರಣೆ ಮಾಡಲಾಗಿದೆ ಈಗ ಮೂರನೇ ಭಾರಿ ಲಾಭಾಂಶವನ್ನು ವಿತರಣೆ ಮಾಡಲು ಸಂಘ ಮುಂದಾಗಿದ್ದು 2703 ಸಂಘಗಳಿಗೆ 11 ಕೋಟಿ ರೂ.ಗಳನ್ನು ವಿತರಣೆ ಮಾಡಲಾಗುತ್ತದೆ ಎಂದರು.

ಧರ್ಮಸ್ಥಳ ಪ್ರಪ್ರಥಮ ಬಾರಿಗೆ ವಿರೇಂಧ್ರರ ಹೆಗ್ಗಡೆಯವರು ಸಾಮೂಹಿಕ ವಿವಾಹವನ್ನು ಜಾರಿ ಮಾಡಿದರು ಇದರಿಂದ ರಾಜ್ಯದಲ್ಲಿ ಹಲವಾರು ಕುಟುಂಬಗಳಿಗೆ ನೆರವಾಗಿದ್ದಾರೆ. ಇವರು ಪ್ರಾರಂಭ ಮಾಡಿದ ಸಮಯದಲ್ಲಿ ರಾಜ್ಯದಲ್ಲಿ ಬರಗಾಲ ಇತ್ತು ರೈತರಿಗೆ ಕಷ್ಠದ ದಿನಗಳಾಗಿದ್ದವು ಇವರ ಕಾರ್ಯದಿಂದ ಅವರು ತಮ್ಮ ಮಗಳ ಮದುವೆಯನ್ನು ಮಾಡಲು ಅವಕಾಶವಾಯಿತು. ಇದು ಮುಂದಿನ ದಿನಮಾನದಲ್ಲಿ ರಾಜ್ಯದ ಎಲ್ಲಾ ಎಡೆಯಲ್ಲಿಯೂ ಸಹಾ ಜಾರಿಯಾಯಿತು. ಇಲ್ಲಿ ಜಾತಿ ಮತ ಪಂಥದ ಬೇಧ ಇಲ್ಲದೆ ಎಲ್ಲರಿಗೂ ಸಾಮೂಹಿಕವಾಗಿ ವಿವಾಹವನ್ನು ಮಾಡಲಾಯಿತು. ಇದರಿಂದ ಬಡತನದ ಭಾರವನ್ನು ಇಳಿಸುವ ಕಾರ್ಯವನ್ನು ಮಾಡಲಾಯಿತೆಂದು ಅವರ ಕಾರ್ಯವನ್ನು ಶ್ಲಾಘಿಸಿದರು.

ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಮಾಡಿದ ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವರಾದ ಡಿ. ಸುಧಾಕರ್ ಮಾತನಾಡಿ, ಧರ್ಮಸ್ಥಳದ ಸಂಘಗಳ ಬಗ್ಗೆ ಹಲವಾರು ಜನತೆ ವಿವಿಧ ರೀತಿಯಲ್ಲಿ ಮಾತನಾಡುತ್ತಿದ್ದಾರೆ, ಆದರೆ ಇವರು ಯಾವುದೇ ರೀತಿಯ ಸ್ವಾರ್ಥ ಇಲ್ಲದೆ ಪ್ರಮಾಣಿಕವಾಗಿ ಜನರ ಸೇವೆಯನ್ನು ಮಾಡುವುದರ ಮೂಲಕ ಆವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುತ್ತಿದ್ದಾರೆ. ನಮ್ಮಗೆ ಬಂದ ಲಾಭಾಂಶವನ್ನು ಸ್ವಸಹಾಯ ಸಂಘಗಳಿಗೆ ವಿತರಣೆಯನ್ನು ಮಾಡಲಾಗುತ್ತದೆ. ಸಮಾಜದ ಹಾಗೂ ನಿಮ್ಮಗಳ ಒಳಿತಿಗಾಗಿ ವಿರೇಂದ್ರ ಹೆಗ್ಗಡೆಯವರು ಹಲವಾರು ಕಾರ್ಯವನ್ನು ಜಾರಿ ಮಾಡುತ್ತಿದ್ದಾರೆ. ಗ್ರಾಮೀಣಾಭೀವೃದ್ದಿ ಸಂಘದ ಅಡಿಯಲ್ಲಿ ರಾಜ್ಯದ ಜನತೆಯನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡಲು ಮುಂದಾಗಿದ್ದಾರೆ ಎಂದು ಅವರ ಕಾರ್ಯವನ್ನು ಅಭೀನಂದಿಸಿದರು.

ನಿರಾಶ್ರಿತ ಕುಟುಂಬಕ್ಕೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ವಾತ್ಸಲ್ಯ ಮನೆ ನಿರ್ಮಾಣವಾಗಿದ್ದು, ಇದರ ಹಸ್ತಾಂತರವನ್ನು ಫಲಾನುಭವಿಗಳಿಗೆ ಮಾಡಿದ ಮಾಜಿ ಸಚಿವರಾದ ಹೆಚ್. ಆಂಜನೇಯ ಮಾತನಾಡಿ, ಸರ್ಕಾರ ಮಾಡಬೇಕಾದ ಕೆಲಸವನ್ನು ಒಂದು ಧಾರ್ಮಿಕ ಸಂಸ್ಥೆ ಮಾಡುತ್ತಿದೆ ಎಂದರೆ ಇದು ನಿಜವಾಗಿಯೂ ಉತ್ತಮವಾದ ಕೆಲಸವಾಗಿದೆ. ಕಾಯಕದಲ್ಲಿ ನಂಬಿಕೆಯನ್ನು ಇರಿಸಿರುವ ವಿರೇಂದ್ರ ಹೆಗ್ಗಡೆಯವರು ಬೇರೆಯವರು ಸಹಾ ಕಾಯಕ ಮಾಡುವುದರ ಮೂಲಕ ಸ್ವಾವಲಂಬಿಗಳಾಗಲು ತಮ್ಮ ಸಂಘದ ಮೂಲಕ ಪ್ರೇರಣೆಯನ್ನು ನೀಡುತ್ತಿದ್ದಾರೆ. ಒಂದು ಕಾಲದಲ್ಲಿ ಧರ್ಮಸ್ಥಳ ಎಂದರೆ ಸತ್ಯ ನ್ಯಾಯಕ್ಕೆ ಹೆಸರಾಗಿತ್ತು ಆದರೆ ಇಂದಿನ ದಿನಮಾನದಲ್ಲಿ ರಾಜಕಾರಣಿಗಳು ಇದರ ದುರುಪಯೋಗವನ್ನು ಮಾಡಿಕೊಳ್ಳುತ್ತಿದ್ದಾರೆ ಎಂದು ವಿಷಾಧಿಸಿದರು.

ವಿದ್ಯಾರ್ಥಿಗಳಿಗೆ ಕ್ಷೇತ್ರದ ಮೂಲಕ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರ ವಿತರಣೆಯನ್ನು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ನೇರವೇರಿಸಿದರು. ಈ ಸಂದರ್ಭದಲ್ಲಿ ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಪ್ರಜಾಪಿತ ಬ್ರಹ್ಮಕುಮಾರಿ ವಿಶ್ವ ವಿದ್ಯಾಲಯದ ಸಂಚಾಲಕರಾದ ಸುಮಿತ್ರಕ್ಕ ಮಾತನಾಡಿದರು. ಗ್ರಾಮಾಭಿವೃದ್ಧಿ ಯೋಜನೆಯ ಸಮಗ್ರ ಕಾರ್ಯಕ್ರಮಗಳ ಕುರಿತು ಆಶಯ ಭಾಷಣವನ್ನು ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಅನಿಲ್‍ಕುಮಾರ್‍ಎಸ್.ಎಸ್ ನೇರವೇರಿಸಿದರು.

ಪುರಸಭೆಯ ಮಾಜಿ ಅಧ್ಯಕ್ಷರುಗಳಾದ ಆರ.ಎ.ಆಶೋಕ್, ಬಿ.ಎಸ್.ರುದ್ರಪ್ಪ. ಮಾಜಿ ಉಪಾಧ್ಯಕ್ಷರಾದ ಕೆ.ಸಿ.ರಮೇಶ್, ಹಾಲಿ ಉಪಾಧ್ಯಕ್ಷರಾದ ಶ್ರೀಮತಿ ನಾಗರತ್ನ, ಸದಸ್ಯರಾz ಸೈಯದ್ ಮನ್ಸೂರ್, ಮಲ್ಲಿಕಾರ್ಜನ್, ವಿಜಯ ಶ್ರೀಮತಿ ಮಮತ, ಮುರುಗೇಶ್, ಶ್ರೀಮತಿ ಶಬೀನ ಆಶ್ರಫ್ ವುಲ್ಲಾ, ಸೈಯದ್ ಸಜಿಲ್ ಶ್ರೀಪೂರ್ಣಿಮ ಶ್ರೀಮತಿ ಸುಧಾ, ಶ್ರೀಮತಿ ವಸಂತ ಮಂಜುನಾಥ್, ಬಸಬರಾಜು, ಮಜರವುಲ್ಲಾ ಜಿಲ್ಲಾ ಜನ ಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರಾದ ಮಾರುತೇಶ್ ಹಾಲಿ ಅಧ್ಯಕ್ಷರಾದ ಓಂಕಾರಪ್ಪ ಭಾಗವಹಿಸಲಿದ್ದಾರೆ. ಧರ್ಮಸ್ಥಳ ಗ್ರಾಮೀಣ ಅಭೀವೃದ್ದಿ ಬಿ.ಸಿ.ಟ್ರಸ್ಟ್ ನ ನಿರ್ದೇಶಕರಾದ ದಿನೇಶ್ ಪೂಜಾರ್ ಸ್ವಾಗತಿಸಿದರು.ಸರದ ಸರದ

Advertisement
Tags :
Advertisement