For the best experience, open
https://m.suddione.com
on your mobile browser.
Advertisement

ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ರಾಜ್ಯಕ್ಕೆ ಮಾದರಿಯಾಗಬೇಕು : ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

06:39 PM Dec 25, 2024 IST | suddionenews
ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ರಾಜ್ಯಕ್ಕೆ ಮಾದರಿಯಾಗಬೇಕು   ಶಾಸಕ ಕೆ ಸಿ ವೀರೇಂದ್ರ ಪಪ್ಪಿ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 25 : ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಎಲ್ಲರಿಂದಲೂ ಅನುದಾನ ಪಡೆದು ದೇಶದಲ್ಲಿಯೇ ಮಾದರಿಯಾಗಿರುವಂತೆ ನಿರ್ಮಿಸಿ ಎಂದು ಸಂಸದ ಗೋವಿಂದ ಎಂ.ಕಾರಜೋಳರವರು ತಿಳಿಸಿದರು.

Advertisement
Advertisement

ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಮತ್ತು ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ದಿ ಅನುದಾನ ಎಂ.ಜಿ.ಎನ್.ಆರ್.ಇ.ಜಿ.ಎ. ಹದಿನೈದನೆ ಹಣಕಾಸು ಹಾಗೂ ಇನ್ನಿತರೆ ಯೋಜನೆಗಳ ಅನುದಾನದಡಿಯಲ್ಲಿ ದೊಡ್ಡಸಿದ್ದವ್ವನಹಳ್ಳಿಯಲ್ಲಿ ಒಂದು ಕೋಟಿ 25 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣವಾಗಲಿರುವ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಬುಧವಾರ ಭೂಮಿಪೂಜೆ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿದರು.

ಎನ್.ಆರ್.ಇ.ಜಿ.ಯಿಂದಲೂ ಕಟ್ಟಡಕ್ಕೆ ಅನುದಾನ ಕೊಡುವ ಅವಕಾಶವಿದೆ. ಸಂಸದರ ಅನುದಾನದಲ್ಲಿ ಹಣದ ನೆರವು ನೀಡುತ್ತೇನೆ. ರೈತರಿಗೆ ಮಾಹಿತಿ ನೀಡುವುದು ಸೇರಿದಂತೆ ಗ್ರಾಮ ಪಂಚಾಯಿತಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ರೀತಿಯ ಸೌಲತ್ತುಗಳು ಸಿಗುವಂತ ರೀತಿಯಲ್ಲಿ ಭವ್ಯವಾದ ಕಟ್ಟಡ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.

ಬಾಗಲಕೋಟೆ ಜಿಲ್ಲೆಯ ಮಂಟೂರು ಗ್ರಾಮದಲ್ಲಿ ದೇಶಕ್ಕೆ ಮಾದರಿಯಾಗಿರುವಂತ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಿಸಲಾಗಿದೆ. ಅಲ್ಲಿಂದ ಮ್ಯಾಪ್ ತರಿಸಿಕೊಂಡು ನೀವುಗಳು ಅದೇ ರೀತಿಯಲ್ಲಿ ನೂತನ ಕಟ್ಟಡ ನಿರ್ಮಿಸಿ ರಾಷ್ಟ್ರನಾಯಕ ದಿವಂಗತ ಎಸ್.ನಿಜಲಿಂಗಪ್ಪನವರ ಕೊಡುಗೆ ರಾಜ್ಯಕ್ಕೆ ಸಾಕಷ್ಟಿದೆ. ನೂತನ ಕಟ್ಟಡಕ್ಕೆ ಅವರ ಹೆಸರನ್ನಿಡಿ ಎಂದು ಹೇಳಿದರು.

ಶಾಸಕ ಕೆ.ಸಿ.ವೀರೇಂದ್ರಪಪ್ಪಿ ಗ್ರಾಮ ಪಂಚಾಯಿತಿ ನೂತನ ಕಟ್ಟಡಕ್ಕೆ ಭೂಮಿಪೂಜೆ ಸಲ್ಲಿಸಿ ಮಾತನಾಡುತ್ತ ಎಸ್.ನಿಜಲಿಂಗಪ್ಪನವರು ರಾಜ್ಯಕ್ಕೆ ಹೇಗೆ ಮಾದರಿ ರಾಜಕಾರಣಿ ಎನಿಸಿಕೊಂಡಿದ್ದರೋ ಅದೇ ರೀತಿ ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಕಟ್ಟಡ ರಾಜ್ಯಕ್ಕೆ ಮಾದರಿಯಾಗಿರುವಂತೆ ನಿರ್ಮಿಸಬೇಕು. ಐದು ನೂರು ಜನ ಕೂರುವಂತ ದೊಡ್ಡ ಸಭಾಂಗಣ, ಸಿಬ್ಬಂದಿಗಳಿಗೆ ಪ್ರತ್ಯೇಕ ಕೋಣೆ, ನಿರ್ಮಿಸಲಾಗುವುದು. ರಾಜಕಾರಣ ಬೇರೆ. ಅಭಿವೃದ್ದಿ ವಿಚಾರ ಬಂದಾಗ ಪಕ್ಷ ಬೇಧ ಮರೆತು ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡೋಣ. ಈ ಪಂಚಾಯಿತಿಗೆ 187 ಮನೆಗಳನ್ನು ಮಂಜೂರು ಮಾಡಲಾಗುವುದು. ನೂತನ ಕಟ್ಟಡಕ್ಕೆ ಶಾಸಕರ ಅನುದಾನದಿಂದ 25 ಲಕ್ಷ ರೂ.ಗಳನ್ನು ನೀಡುತ್ತೇನೆಂದು ಭರವಸೆ ಕೊಟ್ಟರು.

ಮುಖ್ಯಮಂತ್ರಿಗಳ ಅನುದಾನದಿಂದ 35 ಲಕ್ಷ ರೂ.ಗಳನ್ನು ನೀಡಲಾಗಿದೆ. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿಯಿಂದ ತಲಾ ಮೂರು ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗಿದೆ. ಸಂಸದರ ಅನುದಾನದಲ್ಲಿಯೂ ಹಣ ಪಡೆಯಲು ಅವಕಾಶವಿದೆ. ಒಟ್ಟಾರೆ ಗ್ರಾಮ ಪಂಚಾಯಿತಿ ಕಟ್ಟಡ ಸುಂದರವಾಗಿ ನಿರ್ಮಾಣವಾಗಬೇಕೆಂದರು.
ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ ದೇಶದಲ್ಲಿಯೇ ಈ ಕಟ್ಟಡ ಮಾದರಿಯಾಗಿರಬೇಕು. ಮಕ್ಕಳ ಗ್ರಂಥಾಲಯ, ವಿಶಾಲವಾದ ಸಭಾಂಗಣ, ವಸತಿ ಗೃಹ
ಗುಣಮಟ್ಟದಲ್ಲಿ ನಿರ್ಮಾಣವಾಗಲಿ. ನನ್ನ ಅನುದಾನದಲ್ಲಿಯೂ ಕಟ್ಟಡಕ್ಕೆ 25 ಲಕ್ಷ ರೂ.ಗಳನ್ನು ನೀಡುತ್ತೇನೆ. ಶಾಸಕರು, ಸಂಸದರಿಂದಲೂ ಅನುದಾನ ಸಿಗುತ್ತದೆ. ಎಲ್ಲವನ್ನು ಬಳಸಿಕೊಂಡು ಗಟ್ಟಿಮುಟ್ಟಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಿ ಇನ್ನೊಂದು ವರ್ಷದಲ್ಲಿ ಉದ್ಗಾಟನೆಯಾಗಬೇಕೆಂದು ಹೇಳಿದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವೈ.ರವಿಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೆಚ್.ಟಿ.ಶಶಿಕಲಾ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.
ಉಪಾಧ್ಯಕ್ಷೆ ಎಂ.ಜಿ.ವನಿತಾ ಅನಿಲ್‍ಕುಮಾರ್, ಸದಸ್ಯರುಗಳಾದ ಮಾರುತಿ ಎನ್.ಸಲುಫಯ್ಯ, ಕೆ.ಟಿ.ರುದ್ರೇಶ್, ಭಾಗ್ಯಮ್ಮ, ವಿದ್ಯಾವತಿ, ಗಂಗಮ್ಮ, ಕ್ಯಾದಿಗೆರೆ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಕೆ.ಎಸ್.ಕಲ್ಲೇಶಪ್ಪ, ಸತ್ಯಮ್ಮ, ಟಿ.ಲಕ್ಷ್ಮಿದೇವಿ, ಕಲ್ಲಪ್ಪ, ಎಣ್ಣೆಗೆರೆ, ಕಸವನಹಳ್ಳಿ, ಡಿ.ಕೆ.ಹಟ್ಟಿ ಗ್ರಾಮ ಪಂಚಾಯಿತಿ ಸದಸ್ಯರುಗಳು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಆರ್.ನರಸಿಂಹರಾಜ, ಕೆ.ಡಿ.ಪಿ.ಸದಸ್ಯ ನಾಗರಾಜ್, ನಗರಸಭೆ ಸದಸ್ಯ ವೆಂಕಟೇಶ್, ಹನೀಸ್, ಪ್ರಕಾಶ್‍ರಾಮನಾಯ್ಕ, ಡಿ.ಎಸ್.ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಸುಧಾ ವೇದಿಕೆಯಲ್ಲಿದ್ದರು.
ದೊಡ್ಡಸಿದ್ದವ್ವನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶಿಲ್ಪ ಎನ್. ಕಾರ್ಯದರ್ಶಿಗಳಾದ ಆಶಾ, ಅನುಸೂಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ನಾಸಿರ್‍ಪಾಷ ನಿರೂಪಿಸಿದರು.

Advertisement
Tags :
Advertisement