Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ದಸರಾ ವಿಶೇಷ: ಚಿತ್ರದುರ್ಗದಲ್ಲೊಂದು ಬೊಂಬೆಗಳ ಮನೆ

02:42 PM Oct 08, 2024 IST | suddionenews
Advertisement

 

Advertisement

ಸುದ್ದಿಒನ್, ಚಿತ್ರದುರ್ಗ, ಅಕ್ಟೋಬರ್. 07 : ನವರಾತ್ರಿ ದಸರಾ ಪ್ರಯುಕ್ತ ಬೊಂಬೆಗಳನ್ನು ಕೂರಿಸುವ ಸಂಪ್ರದಾಯ ವಿಶೇಷವಾಗಿದೆ. ಮನೆಗಳಲ್ಲಿ ಶಾಸ್ತ್ರಕ್ಕೆ ಕೆಲವು ಬೊಂಬೆಗಳನ್ನು ಕೂರಿಸಿ ಪೂಜಿಸುವವರು ಹಲವರಾದರೆ, ಪ್ರತಿವರ್ಷವೂ ತಮ್ಮ ಮನೆಯನ್ನೇ ಬೊಂಬೆಗಳ ಆಲಯವಾನ್ನಾಗಿಸಿ ಕೂರಿಸಿ ಪೂಜಿಸುವವರು ಕೆಲವೇ ಕೆಲವರು. ವಿಶೇಷವಾಗಿ ಮೈಸೂರು ಅರಮನೆ ಹಾಗೂ ದೊಡ್ಡ ಮಹಾನಗರಗಳಲ್ಲಿ ಹಾಗೂ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕೆಲವು ಉದಾಹರಣೆಗಳಿದ್ದು, ಚಿತ್ರದುರ್ಗದಲ್ಲಿಯೂ ಇಂತಹ ಒಂದು ಅಪೂರ್ವ ಉದಾಹರಣೆ ನಮ್ಮೆದುರಿಗೆ ಇದೆ.

Advertisement

ಚಿತ್ರದುರ್ಗ ನಗರದ ವಿಪಿ ಬಡಾವಣೆಯಲ್ಲಿರುವ ಶ್ರೀಮತಿ ಎಂ. ಬಿ. ಲಕ್ಷ್ಮೀ ಅವರ ಮನೆಯಲ್ಲಿ ಪ್ರತಿ ವರ್ಷವೂ ದಸರಾ ಹಬ್ಬದ ಪ್ರಯುಕ್ತ 10 ದಿನಗಳ ಕಾಲ ಗೊಂಬೆಗಳನ್ನು ಕೂಡಿಸುತ್ತಿದ್ದಾರೆ. ಇವರು ಕಳೆದ 30 ವರ್ಷಗಳಿಂದ ಈ ಕಾರ್ಯವನ್ನು ಮಾಡುತ್ತಾ ಇದ್ದಾರೆ. ಇದರಲ್ಲಿ ವಿಧವಿಧವಾದ ಗೊಂಬೆಗಳನ್ನು ನೋಡುವುದೇ ಚಂದ. ವರ್ಷದಿಂದ ವರ್ಷಕ್ಕೆ ಗೊಂಬೆಗಳು ಹೆಚ್ಚಾಗುತ್ತಿವೆ. ಇದನ್ನ ನೋಡಿದರೆ ಮೈಸೂರಿನಲ್ಲಿರುವ ಗೊಂಬೆ ಮನೆ ನೋಡಿದ ಹಾಗೆ ಅನುಭವವಾಗುತ್ತದೆ. ಪ್ರತಿದಿನ ಸಂಜೆ ಭಜನಾ ಕಾರ್ಯಕ್ರಮಗಳು ಇರುತ್ತದೆ. ಹಾಗೂ ವಿಧವಿಧವಾದ ಪ್ರಸಾದಗಳನ್ನು ದೇವರಿಗೆ ನೈವೇದ್ಯವನ್ನು ಮಾಡಿ ಬೊಂಬೆಗಳನ್ನು ನೋಡಲು ಬರುವ ಸಾರ್ವಜನಿಕರಿಗೆ ವಿತರಿಸುತ್ತಾರೆ.

ಎಲ್ಲರೂ ಈ ದಸರಾ ಹಬ್ಬದ ಸಂದರ್ಭದಲ್ಲಿ ಚಿತ್ರದುರ್ಗ ನಗರದ ವಿ.ಪಿ. ಬಡಾವಣೆಯಲ್ಲಿರುವ ಈ ಗೊಂಬೆ ಮನೆಗೆ ಭೇಟಿ ಕೊಟ್ಟು ಬೊಂಬೆಗಳ ಲೋಕವನ್ನೇ ನೋಡಬಹುದು.
ಗೊಂಬೆಗಳಲ್ಲಿ ದಶಾವತಾರ ಸೇರಿದಂತೆ ವಿವಿಧ ದೇವಿ - ದೇವರ ಬೊಂಬೆಗಳು, ಗುರುಗಳು ದಾರ್ಶನಿಕರ ಬೊಂಬೆಗಳು, ಕ್ರಿಕೆಟ್ ಮೈದಾನ ಆಟಗಾರರ ಪ್ರತಿಕೃತಿ, ಅಡಿಗೆಮನೆಯ ಸಾಮಾನುಗಳ ಆಕರ್ಷಣೀಯ ಕಿರು ಪ್ರತಿಕೃತಿಗಳು, ಮೋಟಾರ್ ವಾಹನ ಕಾರುಗಳ ಕಿರು ಮಾದರಿ ಬೊಂಬೆಗಳು ಒಳಗೊಂಡಂತೆ ಮುದ್ದಾದ ಬೊಂಬೆಗಳ ಪುಟ್ಟ ಲೋಕವೇ ಈ ಬೊಂಬೆ ಮನೆಗೆ ಬರುವವರ ಕಣ್ಣೆದುರಿಗೆ ಅನಾವರಣಗೊಳ್ಳುತ್ತದೆ.ಅದರಲ್ಲಿಯೂ ಮಕ್ಕಳಿಗಂತೂ ಇದು ಬಹಳ ಆಕರ್ಷಣೀಯ ಅನುಭವವನ್ನೇ ನೀಡುತ್ತದೆ.

ಸಾರ್ವಜನಿಕರು ಹಾಗೂ ವಿಶೇಷವಾಗಿ ಮಕ್ಕಳು ಬೊಂಬೆಗಳನ್ನು ನೋಡಿ ಆನಂದಿಸಿ, ಪ್ರಸಾದ ಸ್ವೀಕರಿಸಲು ಎಲ್ಲರಿಗೂ ಮುಕ್ತ ಅವಕಾಶವಿದೆ.

ವಿಶೇಷ ಲೇಖನ :  

ಶ್ರೀಮತಿ ಎಂ. ಬಿ. ಲಕ್ಷ್ಮೀ,                                          ಪೋಸ್ಟ್ ಭೀಮರಾವ್ ಮನೆ ಕಾಂಪೌಂಡ್,                ಮಾರುತಿ ಗ್ಯಾಸ್ ಏಜನ್ಸಿ ಎದುರು,                                    ವಿ. ಪಿ. ಬಡಾವಣೆ, ಚಿತ್ರದುರ್ಗ

ಮೊಬೈಲ್ ಸಂಖ್ಯೆ: 9844444386

Advertisement
Tags :
bengaluruchitradurgaDussehrahousepuppetSpecialsuddionesuddione newsಚಿತ್ರದುರ್ಗದಸರಾ ವಿಶೇಷಬೆಂಗಳೂರುಬೊಂಬೆಗಳ ಮನೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article