Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಕಣ್ಣಿನ ಬಗ್ಗೆ ನಿರ್ಲಕ್ಷ್ಯ ಬೇಡ, ಕಾಳಜಿ ವಹಿಸಿ : ಡಾ.ಪ್ರದೀಪ್

03:54 PM Dec 15, 2023 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ
                       ಸುರೇಶ್ ಪಟ್ಟಣ್,                         
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ. ಡಿ. 15 : ಜೀವನದಲ್ಲಿ ಕಣ್ಣಿಗೆ ಮಹತ್ವವಾದ ಸ್ಥಾನ ಇದೆ. ಅದರ ಬಗ್ಗೆ ಕಾಳಜಿಯನ್ನು ವಹಿಸಬೇಕು ಯಾವುದೇ ಕಾರಣಕ್ಕೂ ಕಣ್ಣನ್ನು ನಿರ್ಲಕ್ಷ್ಯ ಮಾಡಬೇಡಿ ಎಂದು ಹಿರಿಯ ನೇತ್ರ ತಜ್ಞರಾದ ಡಾ.ಪ್ರದೀಪ್ ತಿಳಿಸಿದರು.

ಶಂಕರ್ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ವಿಶ್ವ ಮಾನವ ಸಾಂಸ್ಕೃತಿಕ ಮತ್ತು ವಿದ್ಯಾ ಸಂಸ್ಥೆ ಸಿಬಾರ ಗುತ್ತಿನಾಡು, ರೋಟರಿ ಕ್ಲಬ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಜಿಲ್ಲಾ ಆಂಧತ್ವ ನಿಯಂತ್ರಣಾ ಕಾರ್ಯಕ್ರಮ ಮತ್ತು ತಾಲ್ಲೂಕು ವೈದ್ಯಾಧಿಕಾರಿಗಳ ಕಚೇರಿ ಸಂಯುಕ್ತಾಶ್ರಯದಲ್ಲಿ ಸಿಬಾರದ ಗುತ್ತಿನಾಡು ವಿಶ್ವ ಮಾನವ ಸಾಂಸ್ಕೃತಿಕ ಮತ್ತು ವಿದ್ಯಾ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ನೇತ್ರ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.

ಮಾನವ ದೇಹದಲ್ಲಿ ಕಣ್ಣು ಬಹಳ ಮುಖ್ಯವಾದ ಅಂಗವಾಗಿದೆ ನಮ್ಮ ದೇಹದಲ್ಲಿ ಬೇರೆ ಅಂಗಗಳಲ್ಲಿ ನೂನ್ಯತೆ ಬಂದರೆ ಬದುಕಬಹುದಾಗಿದೆ ಆದರೆ ಕಣ್ಣು ಇಲ್ಲವಾದರೆ ನಮ್ಮ ಪ್ರತಿಯೊಂದು ಕೆಲಸಕ್ಕೊ ಬೇರೆಯವರನ್ನು ಆಶ್ರಯಿಸಬೇಕಿದೆ.

ಇದರಿಂದ ನಮ್ಮ ಮುಖಕ್ಕೆ ಎಷ್ಟು ಪ್ರಾಮುಖ್ಯತೆಯನ್ನು ನೀಡುತ್ತೇವೆ ಅಷ್ಟೇ ಪ್ರಾಮುಖ್ಯತೆಯನ್ನು ಕಣ್ಣುಗಳಿಗೂ ಸಹಾ ನೀಡಬೇಕಿದೆ. ನಿಮ್ಮ ಮರಣದ ನಂತರ ನಿಮ್ಮ ಕಣ್ಣುಗಳನ್ನು ಮಣ್ಣಿನಲ್ಲಿ ಉಳದೆ ಬೆಂಕಿಯಲ್ಲಿ ಸುಡದೇ ದಾನವನ್ನು ಮಾಡುವುದರ ಮೂಲಕ ಇತರರಿಗೆ ಬೇಳಕಾಗಬೇಕಿದೆ ಎಂದರು.

ರೋಟರಿ ಕ್ಲಬ್‌ನಂತಹ ಹಲವಾರು ಸಂಸ್ಥೆಗಳು ಈ ರೀತಿಯಾದ ಉಚಿತವಾದ ಆರೋಗ್ಯ ಶಿಬಿರಗಳನ್ನು ನಡೆಸುವುದರ ಮೂಲಕ ನಿಮ್ಮಗಳ ಆರೋಗ್ಯದ ಬಗ್ಗೆ ಕಾಳಜಿಯನ್ನು ವಹಿಸುತ್ತಿದ್ದಾರೆ. ಇದರಲ್ಲಿ ಸಕ್ರಿಯವಾಗಿ ಭಾಗವಹಿಸಿ ನಿಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಂಡು ಏನಾದರೂ ತೊಂದರೆ ಇದ್ದರೆ ಈಗಲೇ ಸರಿಪಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ರೋಟರಿ ಕ್ಲಬ್ ಅಧ್ಯಕ್ಷ ಕನಕರಾಜು ಮಾತನಾಡಿ, ರೋಟರಿಯಂತಹ ಸಂಸ್ಥೆಗಳು ಈ ರೀತಿಯಾದ ಉಚಿತವಾದ ಆರೋಗ್ಯ ಶಿಬಿರಗಳನ್ನು ವರ್ಷದಲ್ಲಿ ಹಲವಾರು ಬಾರಿ ಏರ್ಪಡಿಸುವುದರ ಮೂಲಕ ಜನರ ಆರೋಗ್ಯದ ಬಗ್ಗೆ ಕಾಳಜಿಯನ್ನು ತೋರಿಸುತ್ತಿದೆ. ಇದರ ಪ್ರಯೋಜನವನ್ನು ನೀವುಗಳು ಪಡೆಯಬೇಕಿದೆ. ಸಣ್ಣ-ಪುಟ್ಟ ತೊಂದರೆ ಇದ್ದರೆ ಅವುಗಳನ್ನು ಇಲ್ಲಿಯೇ ಬಗೆಹರಿಸಿಕೊಳ್ಳಬಹುದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಸೌಂದರ್ಯ, ನಿಕೇಲೇಶ್, ಶಿವಕುಮಾರ್, ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷ ಎಸ್.ವಿರೇಶ್, ವೀರಭದ್ರಸ್ವಾಮಿ, ಡಾ,ರಾಮು ಹಾಜರಿದ್ದರು. 158 ರೋಗಿಗಳನ್ನು ತಪಾಸಣೆಯನ್ನು ನಡೆಸಿದ್ದು, 88 ಜನರಿಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗುವುದು.

Advertisement
Tags :
chitradurgaDon't neglect eyesDr. PradeepeyeTake careಕಾಳಜಿ ವಹಿಸಿಚಿತ್ರದುರ್ಗಡಾ.ಪ್ರದೀಪ್ನಿರ್ಲಕ್ಷ್ಯ ಬೇಡ
Advertisement
Next Article