ಅಂಬೇಡ್ಕರ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಕಾಂಗ್ರೆಸನವರಿಗಿಲ್ಲ : ಉಮೇಶ ಕಾರಜೋಳ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.19 : ಅಂಬೇಡ್ಕರ್ ಅವರ ಜೀವಿತಾವಧಿಯ ಕಾಲದಲ್ಲಿ ಅವರನ್ನು ನಿರಂತರ ಅಪಮಾನಿಸಿ, ಅವರ ಅರ್ಹತೆ, ವಿದ್ವತ್ತನ್ನು ಗೌರವಿಸದೇ ಅವರನ್ನು ರಾಜಕೀಯವಾಗಿ ಸಾಮಾಜಿಕವಾಗಿ ತುಳಿದ ಅವರನ್ನು ಚುನಾವಣೆಯಲ್ಲಿ ಸೋಲಿಸಿ ಬಳಿಕ ಅವರನ್ನು ಸೋಲಿಸಿದವರಿಗೆ ಪದ್ಮಭೂಷಣ ನೀಡಿ ಗೌರವಿಸಿತು. ಕಾಂಗ್ರೆಸ್ ಶೋಷಿತರನ್ನು ಮತ ಬ್ಯಾಂಕ್ ಮಾಡಿಕೊಂಡು ಇದುವರೆಗೂ ಅಧಿಕಾರದ ಸವಿ ಅನುಭವಿಸುತ್ತಾ ಬಂದಿದೆ ಎಂದು ಉಮೇಶ ಕಾರಜೋಳ ಹೇಳಿದರು.
ಅಂಬೇಡ್ಕರ್ ಅವರ ನಿಧನದ ನಂತರ ಅವರ ಪಾರ್ಥಿವ ಶರೀರ ಮಣ್ಣು ಮಾಡಲು ದೆಹಲಿಯಲ್ಲಿ ಕನಿಷ್ಠ ಅಡಿಯ ಜಾಗವನ್ನು ನೀಡದೆ ಮುಂಬೈಗೆ ಅವರ ದೇಹ ಸಾಗಿಸುವ ವ್ಯವಸ್ಥೆಯನ್ನೂ ಮಾಡದೆ ಅವರನ್ನು ತಾತ್ಸಾರವಾಗಿ ನೋಡಿಕೊಂಡ ಕಾಂಗ್ರೆಸ್ಸಿಗರಿಗೆ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಇಲ್ಲ.
ಅಂಬೇಡ್ಕರ್ ಅವರಿಗೆ ಭಾರತರತ್ನ ನೀಡಿ ಗೌರವಿಸಿದ ಹೆಗ್ಗಳಿಕೆ ಭಾರತೀಯ ಜನತಾ ಪಾರ್ಟಿಯದ್ದು. ಅಂಬೇಡ್ಕರ್ ಅವರ ಇತಿಹಾಸ ಮುಂದಿನ ಭವಿಷ್ಯದೊಂದಿಗೆ ತಿಳಿಯುವಂತೆ ಸಂವಿಧಾನ ದಿನವನ್ನು ಆಚರಿಸುವ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದು ಭಾರತೀಯ ಜನತಾ ಪಾರ್ಟಿ.
ಮಾನ್ಯ ಅಮಿತ ಶಾಹಾ ಜೀ ಅವರು, ಕಾಂಗ್ರೆಸಿಗರು ಅಂದು ಅಂಬೇಡ್ಕರ್ ಅವರನ್ನು ಅವಮಾನಿಸಿ ಇಂದು ತಮ್ಮ ರಾಜಕೀಯ ಅಸ್ತಿತ್ವಕ್ಕಾಗಿ ಅಂಬೇಡ್ಕರ್ ಅವರ ಹೆಸರನ್ನು ಪಟಿಸುತ್ತಿರುವ ಕಾಂಗ್ರೆಸ್ಸಿಗರ ಗೋಮುಖ ವ್ಯಾಘ್ರತನವನ್ನು ಬಯಲು ಮಾಡುವ ನಿಟ್ಟಿನಲ್ಲಿ ಆಡಿದ ಮಾತುಗಳನ್ನು ತಿರುಚುವ ಮೂಲಕ ಅಪಪ್ರಚಾರ ನಡೆಸಿ ರಾಜಕೀಯ ಬಂಡವಾಳ ಮಾಡಿಕೊಳ್ಳಲು ಹೊರಟಿರುವ ಕಾಂಗ್ರೆಸ್ಸಿಗರ ನಡೆ ನಾಚಿಕೆಗೇಡಿತನದ ಪರಮಾವಧಿಯಾಗಿದೆ ಎಂದು ಬಿ.ಜೆ.ಪಿ ಎಸ್ ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಖಂಡಿಸಿದ್ದಾರೆ
ರಾಷ್ಟ್ರ ಸಂತ ಡಾ .ಬಿ.ಆರ್ ಅಂಬೇಡ್ಕರ ಅವರನ್ನು ಸರ್ವರಿತಿಯೀಂದಲು ಗೌರವಿಸುವ ದೃಷ್ಟಿಯಿಂದ 2014 ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರದ ನೇತೃತ್ವದಲ್ಲಿ ಡಾ. ಬಿ. ಆರ್ ಅಂಬೇಡ್ಕರ ಅವರ ಕೊಡುಗೆಯನ್ನು ಸ್ಮರಿಸಿ ಅವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದ ಅಂಬೇಡ್ಕರರಿಗೆ ಸಂಬಂದಿಸಿದ 5 ಪ್ರಮುಖ ಸ್ಥಾನಗಳನ್ನ ಪಂಚತಿರ್ಥ ಕ್ಷೇತ್ರಗಳನ್ನು ಘೋಷಣೆ ಮಾಡಿದೆ.
1) ಮೊದಲನಯದ್ದು ಜನ್ಮ ಭೂಮಿ ಮದ್ಯಪ್ರಧೇಶದ ಮಾಹೋದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗಿದೆ
2 )ಶಿಕ್ಷಣ ಭೂಮಿ 1921ರಿಂದ 1922ರ ವರೆಗೆ ಲಂಡನನ್ನ ವಾಸವಿದ್ದ ಮನೆಯನ್ನು 800ಕೋಟಿ ಖರ್ಚು ಮಾಡಿ ಅಭಿವೃದ್ದಿ ಪಡಿಸಿದೆ.
3) ದಿಕ್ಷಾ ಭೂಮಿ ಮಹಾರಾಷ್ಟ್ರದ ನಾಗಪೂರನ ಸ್ಥಳವನ್ನು ಬೌದ್ದ ವಾಸ್ತು ಶಿಲ್ಪದಲ್ಲಿಯೇ ಅಭಿವೃದ್ಧಿ ಪಡಿಸಲಾಗಿದೆ.
4 ಮಹಾ ಪರಿನಿರ್ವಾಣ ಭೂಮಿ ದೇಹಲಿಯಲ್ಲಿ ಕೊನೆ ಉಸಿರೆಳದ ಜಾಗವನ್ನ ಮಹಾ ಪರಿ ನಿರ್ವಾಣ ಭೂಮಿ ಎಂದು ಘೋಸಿಸಲಾಗಿದೆ.
5) ಚೈತ್ಯ ಭೂಮಿ ಅಂಬೇಡ್ಕರ ಅವರು ಪಂಚ ಬೂತಗಳಲ್ಲಿ ಲಿನವಾದ ಮುಂಬಯಿಯ ಸ್ಥಳವನ್ನುಪುಣ್ಯ ಸ್ಮಾರಕವಾಗಿ ಅಭಿವೃದ್ಧಿ ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.