For the best experience, open
https://m.suddione.com
on your mobile browser.
Advertisement

ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಅಂದು ಇಂದು ಅವಮಾನ ಮಾಡುತ್ತಲೇ ಇದೆ : ಸಂಸದ ಗೋವಿಂದ ಕಾರಜೋಳ

07:45 PM Dec 25, 2024 IST | suddionenews
ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಅವರಿಗೆ ಅಂದು ಇಂದು ಅವಮಾನ ಮಾಡುತ್ತಲೇ ಇದೆ   ಸಂಸದ ಗೋವಿಂದ ಕಾರಜೋಳ
Advertisement

Advertisement

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಡಿ. 25 :
ಕಾಂಗ್ರೆಸ್ ಪಕ್ಷ ಡಾ.ಬಿ.ಆರ್.ಅಂಬೇಡ್ಕರ್‍ರವರಿಗೆ ಅವರು ಜೀವಿತಾ ಅವಧಿಯಲ್ಲಿಯೂ ಹಾಗೂ ಸತ್ತ ಮೇಲೂ ಸಹಾ ಅವಮಾನವನ್ನು ಮಾಡಿದ್ಧಾರೆ ಇದನ್ನು ನನ್ನ ಮಾದಿಗ ಬಂಧುಗಳು ಅರಿಯಬೇಕಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಹಾಗೂ ಸಂಸದರಾದ ಗೋವಿಂದ ಕಾರಜೋಳ ತಿಳಿ ಹೇಳಿದರು.

Advertisement
Advertisement

ದೇಶದಲ್ಲಿ ಕೇಂದ್ರ ಗೃಹ ಸಚಿವರಾದ ಅವಿತಾ ಷಾ ರವರ ವಿರುದ್ದ ಕಾಂಗ್ರೆಸ್ ಪಕ್ಷ ಹಾಗೂ ದಲಿತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಹಾಗೂ ಧರಣಿಯ ವಿರುದ್ದ ಚಿತ್ರದುರ್ಗ ನಗರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಡೀ ದೇಶದಲ್ಲಿನ ದಲಿತ ಬಂಧುಗಳಿಗೆ ಸತ್ಯ ಮತ್ತು ವಸ್ತುಸ್ಥಿತಿಯನ್ನು ಬಿಚ್ಚಿಡುವಂತಹ ಕೆಲಸ ಮಾಡುತ್ತೇನೆ. ಅಂಬೇಡ್ಕರ್‍ರವರು ದೇಶ ಸ್ವಾತಂತ್ರವಾದ ಸಂದರ್ಭದಲ್ಲಿ ಅವರು ನನಗೆ ಅರ್ಥ ಮಂತ್ರಿ ಸ್ಥಾನವನ್ನು ನೀಡುವಂತೆ ಅಂದಿನ ಪ್ರಧಾನ ಮಂತ್ರಿ ನೆಹರುರವರನ್ನು ಕೇಳಿದಾಗ ಅವರು ಇದನ್ನು ತಿರಸ್ಕರಿಸಿ ಅವರಿಗೆ ಕಾನೂನು ಮಂತ್ರಿಯನ್ನಾಗಿ ಮಾಡಿದರು. ಆದರೆ ಅಂಬೇಡ್ಕರ್ ಅವರು ನೆಹರು ರವರ ಕ್ಯಾಬಿನೆಟ್ ನಲ್ಲಿ ಬಹಳ ದಿವಸ ಇರಲಿಲ್ಲ.. ಅವಮಾನವನ್ನು ಸಹಿಸಿಕೊಳ್ಳಲಾರದೇ ರಾಜೀನಾಮೆ ಕೊಟ್ಟು ಹೊರ ಬಂದರು. 1952ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಸ್ಪರ್ದೆ ಮಾಡಿದಾಗ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಬಹುದಾಗಿತ್ತು ಆದರೆ ಅದನ್ನು ಬಿಟ್ಟು ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಕೀರ್ತಿ ಕಾಂಗ್ರೆಸ್‍ಗೆ ಸಲುತ್ತದೆ ಇದನ್ನು ನಮ್ಮ ದಲಿತ ಯುವಕರು ಅರ್ಥಮಾಡಿಕೊಳ್ಳಬೇಕು.ಎಂದರು.

ದೇಶದಲ್ಲಿನ ದಲಿತ ಸಮುದಾಯ ಕಾಂಗ್ರೆಸ್‍ನ ಗುಲಾಮಿತನದಿಂದ ಹೊರ ಬರುವವರೆಗೂ ದಲಿತರು ಸ್ವಾತಂತ್ರ್ಯದಿಂದ ಹೂರ ಬರಲು ಸಾಧ್ಯವಿಲ್ಲ. ಅಂಬೇಡ್ಕರ್‍ರವರು ಜೀವಿತ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಅವಮಾನವನ್ನು ದಲಿತ ಸಮುದಾಯ ಎಂದಿಗೂ ಸಹಾ ಮರೆಯಲು ಸಾಧ್ಯವಿಲ್ಲ, ಇದರ ಬಗ್ಗೆ ಜನ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮುಂದಿನ ದಿನಮಾನದಲ್ಲಿ ಮಾಡಲಾಗುವುದು. ಇದರ ಬಗ್ಗೆ ಬಿಜೆಪಿ ಧ್ವನಿಯನ್ನು ಎತ್ತಲಿದೆ. ಅಂಬೇಡ್ಕರ್ ರವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿ ಸರಿಯಿಲ್ಲ, ಇದನ್ನು ತಿಳಿಸುವ ಕಾರ್ಯವಾಗಬೇಕಿದೆ. ಅಂಬೇಡ್ಕರ್ ರವರಿಗೆ ಭಾರತ ರತ್ನ ನೀಡಲಿಲ್ಲ ಆದರೆ ನೆಹರು ರವರು ಪ್ರಧಾನ ಮಂತ್ರಿಯಾಗಿದ್ಧಾಗ ಅವರಿಗೆ ಅವರೇ ಭಾರತರತ್ನ ಪ್ರಶಸ್ತಿಯನ್ನು ಘೋಷಿಸಿಕೊಂಡಿದ್ದಾರೆ ಎಂದರು.

ಅಂಬೇಡ್ಕರ್ ರವರ ನಿಧನ ಸಮಯದಲ್ಲಿ ಅವರ ದೇಹದ ಅಂತ್ಯಕ್ರಿಯೇ ನಡೆಸಲು ದೆಹಲಿಯಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ ಅವಕಾಶವನ್ನು ನೀಡಲಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ನೆಹರು ಮನೆತನದವರಿಗೆ ಅಂತ್ಯ ಸಂಸ್ಕಾರ ಮಾಡಲು ನೂರಾರು ಎಕರೆ ಜಾಗವನ್ನು ನೀಡಿದ್ದಾರೆ ಇದನ್ನು ಅವರ ಅಪ್ಪನ ಮನೆಯಿಂದ ನೀಡಿದ್ಧಾರೆ ಎಂದು ಸಂಸದರು ಖಾರವಾಗಿ ಪ್ರಶ್ನಿಸಿ, ಅಂಬೇಡ್ಕರ್ ಸತ್ತಾಗ ಉಳಲಿಕ್ಕೆ ಜಾಗ ಕೊಡದಂತಹ ಕಾಂಗ್ರೆಸ್ ನವರನ್ನು ಕೆಲವು ತಿಳುವಳಿಕೆ ಇಲ್ಲದ ಯುವಕರು ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಜನರಿಗೆ ಶಿಕ್ಷಣವನ್ನು ನೀಡದೆ ದಲಿತರನ್ನು ಕತ್ತಲಿನಲ್ಲಿ ಇಡಲಾಗಿದೆ ಇವರಿಗೆ ಶಿಕ್ಷಣವನ್ನು ನೀಡಿದೆ ನಮಗೆ ಮತಗಳು ಬರುವುದಿಲ್ಲ ಎಂದು ಮನಗಂಡು ಅವರಿಗೆ ಶಿಕ್ಷಣವನ್ನು ನೀಡದೇ ಬರೀ ಆಹಾರ, ಆರೋಗ್ಯ ಮನೆಯ ಬಗ್ಗೆ ಮಾತ್ರವೇ ಮಾತನಾಡಿದೆ ದಲಿತರಿಗೆ ಶಿಕ್ಷಣವನ್ನು ಕೂಡಿಸುವ ಮಾತನ್ನು ಎಲ್ಲಿಯೂ ಸಹಾ ಹೇಳಿಲ್ಲ ಎಂದು ಟೀಕಿಸಿದರು.

ಕಳೆದ ಸುಮಾರು ಒಂದು ವಾರದಿಂದ ಕಾಂಗ್ರೆಸ್ ನವರು ದೇಶದ ಉದ್ದಗಲಕ್ಕೂ ಸುಳ್ಳು ಆಪಾದನೆಗಳನ್ನು ಮಾಡಿ ಅಮಿತ್ ಶಾ ರವರ ವಿರುದ್ಧ ದಲಿತರನ್ನು ಎತ್ತಿ ಕಟ್ಟುವಂತಹ ಹೂನ್ನಾರವನ್ನು ಮಾಡುತ್ತಿದ್ದಾರೆ ಅದನ್ನು ನಾನು ಖಂಡಿಸುತ್ತೇನೆ.ನೆಹರು ಮನೆತನ ಮತ್ತು ಕಾಂಗ್ರೆಸ್ಸಿನ ಗುಲಾಮಿ ಮನಸ್ಥಿತಿಯಿಂದ ನಾವು ಹೊರಬರಬೇಕು.. ಹೊರಗೆ ಬರದೇ ಇದ್ದರೆ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬಯಸಿದಂತಹ ಸ್ವಾತಂತ್ರ್ಯ ದಲಿತರಿಗೆ ಈ ದೇಶದಲ್ಲಿ ಸಿಗಲಿಕ್ಕೆ ಸಾಧ್ಯಯಿಲ್ಲ.. ಈ ರಾಜ್ಯದಲ್ಲೂ ಸಿಗಲಿಕ್ಕೆ ಸಾಧ್ಯವಿಲ್ಲ.ಅಂಬೇಡ್ಕರ್ ರವರು ದೇಶದ ಉದ್ದಗಲಕ್ಕೂ ಸಂಚರಿಸಿ ದೇಶಕ್ಕೆ ಬೇಕಾದಂತಹ ಕೇವಲ ಮನುಷ್ಯರಿಗೆ ಅಷ್ಟೇ ಅಲ್ಲದೆ ಪಶು ಪ್ರಾಣಿ ಪಕ್ಷಿಗಳಿಗೆ ರಕ್ಷಣೆ ನೀಡುವಂತಹ ಯಾವ ರಾಷ್ಟ್ರದಲ್ಲೂ ಇಲ್ಲದಂತಹ ಒಂದು ವಿಶಿಷ್ಟವಾದ ಸಂವಿಧಾನವನ್ನು ರಚನೆ ಮಾಡಿಕೊಟ್ಟಿದ್ದಾರೆ.ಅವರನ್ನು ದೇಶದ ಮೊದಲ ಪ್ರಧಾನ ಮಂತ್ರಿ ಪಂಡಿತ್ ಜವಹರಲಾಲ್ ನೆಹರು ರವರು ನಡೆಸಿಕೊಂಡಂತಹಹ ರೀತಿ ಇವತ್ತು ನಮ್ಮ ಜನರಿಗೆ ಅರ್ಥ ಆಗಬೇಕು ಎಂದರು.

ಕಾಂಗ್ರೆಸ್ ಪಕ್ಷ ಬರೀ ಅಂಬೇಡ್ಕರ್ ರವರಿಗೆ ಮಾತ್ರವಲ್ಲ ಬಾಬಾ ಜಗಜೀವನ್ ರವರು ಈ ದೇಶದ ಪ್ರಧಾನ ಮಂತ್ರಿ ಆಗಬೇಕಾಗಿತ್ತು.. ಆದರೆ ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಇಂದಿರಾಗಾಂಧಿ ಕುತಂತ್ರದಿಂದ ಅವರು ಸೋಲನ್ನು ಅನುಭವಿಸಬೇಕಾಯಿತು.ಕರ್ನಾಟಕದಲ್ಲಿ ದಿವಂಗತ ದೇವರಾಜ ಅರಸು ರವರು ಮುಖ್ಯಮಂತ್ರಿ ಆಗಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದವರು ಅಂಥವರನ್ನು ಸಹ ಕಾಂಗ್ರೆಸ್ಸಿನಿಂದ ಉಚ್ಚಾಟನೆ ಮಾಡಿದರು.ಹಿಂದುಳಿದ ವರ್ಗಗಳಿಗೆ ಮೀಸಲಾತಿ ಕೊಟ್ಟಂತಹ ವಿ.ಪಿ ಸಿಂಗ್ ರವರನ್ನು ಕಾಂಗ್ರೆಸ್ನವರು ಉಚ್ಛಾಟನೆ ಮಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್‍ಗೆ ನೆಲೆಯನ್ನು ತಂದುಕೊಟ್ಟವರು ವೀರೇಂದ್ರ ಪಾಟೀಲ್ ರವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ಸಂದರ್ಭದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ್ದು ಕಾಂಗ್ರೆಸ್ ನವರು ಎಂದು ಕಾಂಗ್ರೆಸ್ ಪಕ್ಷದ ವಿರುದ್ದ ಕಿಡಿ ಕಾರಿದರು.

ನಮ್ಮ ಸರ್ಕಾರ ಇದ್ದಾಗ ಒಳ ಮೀಸಲಾತಿಗೆ ಶಿಫಾರಸ್ಸು ಮಾಡಿದ್ದೆವು.. ಈಗ ಸುಪ್ರೀಂ ಕೋರ್ಟ್ ಸಹ ಒಪ್ಪಿ ಸುಪ್ರೀಂ ಕೋರ್ಟಿನಿಂದ ಆದೇಶ ಆಗಿದೆ.. ಒಳ ಮೀಸಲಾತಿ ಆಗಬೇಕೆಂದು.ಒಳ ಮೀಸಲಾತಿಗೆ ವಿರೋಧ ಮಾಡುತ್ತಿರುವುದು ಕಾಂಗ್ರೆಸ್‍ನವರು.. ಏಕೆ ವಿರೋಧ ಮಾಡುತ್ತಿದ್ದಾರೆ ಅಂದರೆ ಇವರ ಮಕ್ಕಳು ಸೌಲಭ್ಯವನ್ನು ಪಡೆದುಕೊಂಡು ಮುಂದೆ ಬಂದರೆ ಮುಂದೆ ಕಾಂಗ್ರೆಸ್ಸಿಗೆ ವೋಟ್ ಬ್ಯಾಂಕ್ ಇರುವುದಿಲ್ಲ ಎಂಬ ಭಯದಿಂದ ಜಾರಿ ಮಾಡುತ್ತಿಲ್ಲ.ಅವರು ಪ್ರಣಾಳಿಕೆಯಲ್ಲಿ ಹೇಳಿದ್ದರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಮೊದಲ ಕ್ಯಾಬಿನೆಟ್ ನಲ್ಲಿ ಜಾರಿ ಮಾಡುತ್ತೇವೆ ಅಂತ ಹೇಳಿದ್ದರು.. ಆದರೆ ಜಾರಿ ಮಾಡಲಿಲ್ಲ.. ಇದಕ್ಕೆ ಕಾರಣ ದಲಿತ ವಿರೋಧಿ ನೀತಿ ಎಂದರು.

ಅಮಿತ್ ಷಾ ರವರು ರಾಜ್ಯಸಭೆಯಲ್ಲಿ ಉತ್ತರ ಕೊಡುವ ಸಂದರ್ಭದಲ್ಲಿ ಕಾಂಗ್ರೆಸ್ ನವರ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದರು.. ಆದರೆ ಅದನ್ನು ಕಾಂಗ್ರೆಸ್‍ನವರು ತಪ್ಪಾಗಿ ಅರ್ಥೈಸಿ.ಅಂಬೇಡ್ಕರ್‍ರವರ ವಿರೋಧಿ ಅನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ.. ನಮ್ಮ ದಲಿತ ಯುವಕರಿಗೆ ಹೇಳುತ್ತೇನೆ ಯಾವುದೇ ಕಾರಣಕ್ಕೂ ಕಾಂಗ್ರೆಸ್‍ನ್ನು ನಂಬಬೇಡಿ.ಕಾಂಗ್ರೆಸ್ ಮೋಸದ ಪಕ್ಷ. ಅಂಬೇಡ್ಕರ್ ಅವರೇ ಹೇಳಿದ್ದಾರೆ ಕಾಂಗ್ರೆಸ್ ಉರಿಯುವ ಮನೆ... ಕಾಂಗ್ರೆಸ್ ಸುಡುವ ಮನೆ.. ಅಲ್ಲಿಗೆ ಯಾವುದೇ ದಲಿತರು ಹೋಗಬಾರದು ಅಂತ ಹೇಳಿ ರಾಹುಲ್ ಗಾಂಧಿಯವರು ಹೊರದೇಶಕ್ಕೆ ಸಂದರ್ಭದಲ್ಲಿ ಮೀಸಲಾತಿ ತೆಗೆಯುವ ಪರ ಇದ್ದೇವೆ ಎಂದು ಹೇಳುತ್ತಾರೆ ಇದರ ಬಗ್ಗೆ ಧ್ವನಿ ಎತ್ತಬೇಕಾಗಿದೆ. ಒಬ್ಬ ಕಾಂಗ್ರೆಸಿನ ಮನುಷ್ಯ ಹೇಳುತ್ತಾನೆ ಸಂವಿಧಾನ ಬರೆದಂತವರು ಕುಡಿದು ಸಂವಿಧಾನ ಬರೆದಿದ್ದಾರೆ ಅಂತ.. ನಶೆಯಲ್ಲಿ ಸಂವಿಧಾನ ಬರೆದಿದ್ದಾರೆ ಎಂದು ವ್ಯಾಖ್ಯಾನ ಮಾಡಿದ್ದಾನೆ ಅದರ ವಿರುದ್ಧ ಬಂಡಾಯ ಹೇಳಬೇಕಲ್ವಾ..? ಅದರ ವಿರುದ್ಧ ದಲಿತರು ಏಕೆ ಬಂಡಾಯ ಏಳುತ್ತಿಲ್ಲ...? ಎಂದು ಪ್ರಶ್ನಿಸಿದರು.

ದಲಿತ ಯುವಕರು ನೆಹರು ಮನೆತನ ಹಾಗೂ ಕಾಂಗ್ರೆಸ್ಸಿನ ಗುಲಾಮಿ ಮನಸ್ಥಿತಿಯಿಂದ ಹೊರಬರಬೇಕು... ಬರದೇ ಇದ್ದರೆ ನಮಗೆ ಉಳಿಗಾಲವಿಲ್ಲ.ಕಾಂಗ್ರೆಸ್ ನವರು ಅಕ್ಕಿ ಕೊಡ್ತೀವಿ, ಬೇಳೆ ಕೊಡ್ತೀವಿ ಕೋಳಿ ಕೊಡ್ತೀವಿ ಅಂತ ಹೇಳುತ್ತಾರೆ ಹೊರತು ನಿಮಗೆ ಶಿಕ್ಷಣ ಕೊಡುತ್ತೇವೆ..ಉದ್ಯೋಗ ಕೊಡುತ್ತೇವೆ.. ಅಂತ ಯಾವತ್ತು ಹೇಳಿಲ್ಲ.. ಕೈ ಒಡ್ಡಿಕೊಂಡು ಅವರ ಮುಂದೆ ನಿಲ್ಲಬೇಕು.. ಇದೇ ಅವರ ಸಿದ್ದಾಂತ ಎಂದು ಕಾಂಗ್ರೆಸ್ ಸಂಸ್ಕøತಿಯನ್ನು ಸಂಸದರು ಟೀಕಿಸಿದರು.

ಗೋಷ್ಟಿಯಲ್ಲಿ ಮಾಜಿ ಶಾಸಕರಾದ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಸಿದ್ದಾಪುರ, ಸಂಪತ್ ಕುಮಾರ್, ವಕ್ತಾರರಾದ ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೇ, ಛಲವಾದಿ ತಿಪ್ಪೇಸ್ವಾಮಿ, ಮಲ್ಲಿಕಾರ್ಜನ್, ನವೀನ್ ಚಾಲುಕ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement
Tags :
Advertisement