Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

03:00 PM Aug 26, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 26 : ಎಸ್.ಆರ್.ಎಸ್ ಹೆರಿಟೇಜ್ ಶಾಲೆಯ ಬ್ಲ್ಯೂಜೆಮ್ಸ್ನ ಚಿಣ್ಣರ ವಿಭಾಗದಲ್ಲಿ ಅನಂತಕೃಷ್ಣ ಬೃಹತ್ ಸಭಾಂಗಣದಲ್ಲಿ” “ಶ್ರೀಕೃಷ್ಣ ಜನ್ಮಾಷ್ಟಮಿ" ಕಾರ್ಯಕ್ರಮವನ್ನು ನೆರವೇರಿಸಲಾಯಿತು.

Advertisement

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ
ತಹಶೀಲ್ದಾರ್ ಶ್ರೀಮತಿ ನಾಗವೇಣಿ ಕೆ.ಎ.ಎಸ್
ಅವರು ತೊಟ್ಟಿಲಿಗೆ ಆರತಿ ಬೆಳಗುವುದರ ಮೂಲಕ ಮುದ್ದು ಕೃಷ್ಣನನ್ನು ತೂಗಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾರ್ಗದರ್ಶಕರಾದ ಶ್ರೀಮತಿ ಡಾ|| ಆಶ್ರೀತಾಕಿರಣ್ ವಹಿಸಿದ್ದರು.

ಭಾರತದಲ್ಲಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲ್ಪಡುವ ಹಬ್ಬಗಳಲ್ಲಿ ಒಂದು ಈ ಹಬ್ಬವನ್ನು ‘ಗೋಕುಲಾಷ್ಟಮಿ’ ಎಂದು ಕರೆಯಲಾಗುತ್ತದೆ. ಪ್ರತಿ ವರ್ಷ ಭಾದ್ರಪದ ಮಾಸದ ಕೃಷ್ಣಪಕ್ಷದ ಅಷ್ಟಮಿಯಂದು ಕೃಷ್ಣ ಜನ್ಮಾಷ್ಟಮಿ” ಆಚರಿಸಲಾಗುತ್ತದೆ. ಶ್ರೀ ಕೃಷ್ಣನು ಭಗವಾನ್ ವಿಷ್ಣುವಿನ ಎಂಟನೇ ಅವತಾರವೆಂದು ಪರಿಗಣಿಸಲಾಗಿದೆ. ಪ್ರಾಚೀನ ದಂತಕಥೆಗಳ ಪ್ರಕಾರ ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಮಥುರಾ ನಗರದಲ್ಲಿ ಜನಿಸಿದನು. ಕೃಷ್ಣ ಜನ್ಮಾಷ್ಟಮಿ ನಿಮಿತ್ತ ಚಿಣ್ಣರು ಕೃಷ್ಣನ 24 ಅವತಾರಗಳ ವೇಷ ಧರಿಸಿ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ರಾಧೆ, ರುಕ್ಮಿಣಿ, ಮೀರಾ, ಬಲರಾಮ, ಕಂಸ, ಶೇಷನಾಗ, ಮಕ್ಕಳ ತಾಯಂದಿರು ದೇವಕಿ, ಯಶೋದೆ ವೇಶಧರಿಸಿ ಹೀಗೆ ಹಲವು ವೇಷದಾರಿಗಳಾಗಿ ಪಾಲ್ಗೊಂಡಿದ್ದರು.

ಬ್ಲ್ಯೂ ಜೆಮ್ಸನ ಚಿಣ್ಣರು ಉತ್ಸಾಹಭರಿತವಾಗಿ ಹಲವು ರೂಪಕಗಳಾದ ಸುಧಾಮ, ಮೊಸರು ಮಡಕೆ ಹೊಡೆತ, ರಾಧೆ, ಬೆಣ್ಣೆ ಕದ್ದ ಕೃಷ್ಣ,ಕೃಷ್ಣನ ಹಲವು ತುಂಟಾಟಗಳು, ಹೀಗೆ ಕೃಷ್ಣನಿಗೆ ಸಂಬಂಧಿಸಿದ ಹಲವು ರೂಪಕಗಳನ್ನು ಕಾರ್ಯಕ್ರಮದಲ್ಲಿ ಅಭಿನಯಿಸುವುದರೊಂದಿಗೆ ಪ್ರಸ್ತುತಪಡಿಸಿದರು. ಸಂಭ್ರಮದ ಆಚರಣಾ ಕಾರ್ಯಕ್ರಮದಲ್ಲಿ ಮುದ್ದು ಮಕ್ಕಳು ಬಾಲಕೃಷ್ಣ ವೇಷಧಾರಿಗಳಾಗಿ ಭಾಗವಹಿಸಿ ಈ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಕಾರ್ಯಕ್ರಮ ಕುರಿತು ಮಾತನಾಡಿದ ಮುಖ್ಯ ಅತಿಥಿಗಳು “ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ”…ಸರ್ವರಿಗೂ 2024 ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು, ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.

ಭಗವಾನ್ ಕೃಷ್ಣನು ಪ್ರತಿಯೊಬ್ಬರ ಮೇಲೆ ಅತ್ಯಂತ ಹರ್ಷಚಿತ್ತದಿಂದ ಆಶಿರ್ವಾದದ ಮಳೆಗರೆಯಲಿ ಮತ್ತು ಎಲ್ಲರ ಬದುಕಿನಲ್ಲೂ ಆನಂದದ ಹೊನಲು ಹರಿಸಲಿ ಎಂತಹದ್ದೇ ಕಷ್ಟ, ಸವಾಲುಗಳನ್ನು ಎದುರಿಸಿ ಗೆಲ್ಲುವ ಧೈರ್ಯ ತುಂಬಲಿ ಎಂದು ಕಾರ್ಯಕ್ರಮ ಕುರಿತು ಮಾತನಾಡಿದರು.

ಕಾರ್ಯಕ್ರಮದಲ್ಲಿ ಪೋಷಕರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾ|| ರವಿ ಟಿ ಎಸ್ ಆಡಳಿತಾಧಿಕಾರಿಗಳು “ಎಸ್‍ಆರ್‍ಎಸ್ ಶಿಕ್ಷಣ ಸಮೂಹ ಸಂಸ್ಥೆಗಳು” ಚಿತ್ರದುರ್ಗ.
ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಶಾಲೆಯ ಸಿಬಿಎಸ್‍ಇ ವಿಭಾಗದ ಪ್ರಾಂಶುಪಾಲರಾದ ಶ್ರೀಯುತ ಪ್ರಭಾಕರ್ ಎಂ.ಎಸ್ ಹಾಗೂ ಐಸಿಎಸ್‍ಇ ವಿಭಾಗದ ಪ್ರಾಂಶುಪಾಲರಾದ ಶ್ರೀಮತಿ ಅರ್ಪಿತಾ ಎಮ್ ಎಸ್ ಭಾಗವಹಿಸಿದ್ದರು. ಬ್ಲ್ಯೂಜೆಮ್ಸನ ಶೈಕಣಿಕ ಸಂಯೋಜಕರಾದ ಶ್ರೀಮತಿ ಸುಷ್ಮಾ, ಹಾಗೂ ಬೋಧಕವರ್ಗದವರು ಹಾಗೂ ಬೋಧಕೇತರ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Advertisement
Tags :
chitradurgaSrikrishna Janmashtami celebrationSRS Heritage SCHOOLಎಸ್. ಆರ್. ಎಸ್. ಹೆರಿಟೇಜ್ ಶಾಲೆಚಿತ್ರದುರ್ಗಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ
Advertisement
Next Article