Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ  ಅಲಂಕಾರ, ತೀರ್ಥ, ಪ್ರಸಾದ ವಿತರಣೆ

05:04 PM Jan 22, 2024 IST | suddionenews
Advertisement

 

Advertisement

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,                         
ಮೊ : 98862 95817

Advertisement

ಸುದ್ದಿಒನ್, ಚಿತ್ರದುರ್ಗ ಜ. 22 :  500 ವರ್ಷಗಳ ಸುಧೀರ್ಘ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮನ ಭವ್ಯ ಮಂದಿರ ತಲೆ ಎತ್ತಿದ್ದು, ಇಂದು ಆ ಮಂದಿರದಲ್ಲಿ ಶ್ರೀ ಬಾಲರಾಮನ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ನಡೆದಿದೆ. ನೂರಾರು ಋತ್ವಿಜರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಯಜಮಾನಿಕೆಯಲ್ಲಿ ಶ್ರೀಬಾಲರಾಮ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ.

ನಗರದ ಕೋಟೆನಾಡಿನಲ್ಲಿಂದು ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯ ಆಂಗವಾಗಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಆಲಂಕಾರಗಳನ್ನು ಮಾಡಲಾಗಿತ್ತು. ಕೋಟೆನಾಡು ಚಿತ್ರದುರ್ಗದಲ್ಲಿ ಹಬ್ಬದ ವಾತಾವರಣ ಮೂಡಿದೆ.

ನಗರದ ಆನೆಬಾಗಿಲ ಬಳಿಯಲ್ಲಿ ರಾಜಾಸ್ತಾನ ಸಮಾಜದವರಿಂದ ಆಯೋಧ್ಯಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಪ್ರತಿ ರೂಪವನ್ನು ನಿರ್ಮಾಣ ಮಾಡಿ ಜನರ ದರ್ಶನಕ್ಕೆ ಇಡಲಾಗಿತು. ಇದರ ಪಕ್ಕದಲ್ಲಿ ಆಯೋದ್ಯಯಲ್ಲಿ ನಡೆಯುತ್ತಿರುವ ರಾಮ ಮಂದಿರದ ರಾಮ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ವೀಕ್ಷಣೆ ಮಾಡಲು ಎಲ್.ಇ.ಡಿ. ಪರದೆಯನ್ನು ನಿರ್ಮಾಣ ಮಾಡಲಾಗಿತ್ತು. ಆಯೋಧ್ಯಯಲ್ಲಿ ರಾಮಮಂದಿರದ ರಾಮ ಪ್ರಾಣ ಪ್ರತಿಷ್ಠಾಪನ ಸಮಯಕ್ಕೆ ಇಲ್ಲಿಯೂ ಸಹಾ ಪೂಜೆಯನ್ನು ಮಾಡುವುದರ ಮೂಲಕ ಶ್ರೀರಾಮ ಪೂಜೆಯಲ್ಲಿ ಪಾಲ್ಗೂಳ್ಳಲಾಯಿತು.

ಈ ಸಮಾರಂಭದಲ್ಲಿ ರಾಜಸ್ತಾನ ಸಮಾಜದ ಮುಖಂಡರಾದ ಶ್ರೇಣಿಕ್, ವಿಕ್ರಾಂತ್ ಜೈನ್, ವೀರಸಿಂಗ್, ಸುರೇಶ್, ಮಂಗಲಸಿಂಗ್ ಹಾಗೂ ಸೇನಿ, ವಿಷ್ಣು, ಜೈನ್ ಸಮುದಾಯದವರು ಹಾಗೂ ಜ್ಯೂಯಲರಿ ಸಂಘದವರು ಭಾಗವಹಿಸಿದ್ದರು. ಪೂಜೆಯ ನಂತರ ಆಗಮಿಸಿದ ಭಕ್ತಾಧಿಗಳಿಗೆ ಪ್ರಸಾದವನ್ನು ಹಂಚಲಾಯಿತು.
ಇದೇ ರೀತಿ ನಗರದ ರಂಗಯ್ಯನ ಭಾಗಿಲ ಬಳಿಯ ಶ್ರೀರಾಮನ ಭಕ್ತಾಧಿಗಳಿಂದ ಆಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷವಾದ ಪೂಜೆಯನ್ನು ನಡೆಸುವುದರ ಮೂಲಕ ಆಗಮಿಸಿದ ಭಕ್ತಾಧಿಗಳಿಗೆ ಕೊಸುಂಬರಿ ಪಾನಕದ ಪ್ರಸಾದವನ್ನು ನೀಡಲಾಯಿತು. ಮದಕರಿ ಹಣಪತಿ ದೇವಾಲಯದಲ್ಲಿಯೂ ಸಹಾ ಇಂದು ವಿಶೇಷವಾದ ಆಲಂಕಾರವನ್ನು ಮಾಡುವುದರ ಮೂಲಕ ಶ್ರೀರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ನಗರದ ಕೋಟೆ ಅಂಜನೇಯ ಸ್ವಾಮಿ ದೇವಾಲಯದಲ್ಲಿಯೂ ಸಹಾ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಅಂಗವಾಗಿ ಪೂಜೆಯನ್ನು ನಡೆಸಲಾಯಿತು, ಆನೆ ಬಾಗಿಲ ಮಲ್ಲಿಕಾರ್ಜನ ಸ್ವಾಮಿ ದೇವಾಲಯದಲ್ಲಿ, ನೀಲಕಂಠೇಶ್ವರ ದೇವಾಲಯದಲ್ಲಿ ಆರ್ಯ ವೈಶ್ಯ ಸಮಾಜದ ಕನ್ನಿಕಾ ಪರಮೇಶ್ವರಿ ಆಮ್ಮನವರ ದೇವಾಲಯದಲ್ಲಿ, ಬರಗೇರಮ್ಮ ದೇವಾಲಯದಲ್ಲಿ, ಪಾಂತಾಳ ಲಿಂಗೇಶ್ವರ ದೇವಾಲಯ, ಗ್ರಾಮ ದೇವತೆಯಾದ ಉಚ್ಚಂಗಿಯಲ್ಲಮ್ಮ ದೇವಾಲಯ, ಕಣಿವೆ ಮಾರಮ್ಮ ದೇವಾಲಯ, ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಡಿಎಆರ್ ಬಳಿಯ ಶ್ರೀರಕ್ಷಾ ಆಂಜನೇಯ, ಜೆಸಿಆರ್ ಗಣಪತಿ ದೇವಾಲಯದಲ್ಲಿ ವಿಶೇಷವಾದ ಪೂಜೆಯನ್ನು ನಡೆಸಲಾಯಿತು.

ದೇಶದ ಎಲ್ಲೆಡೆ ಮೊಳಗುತ್ತಿದೆ ಶ್ರೀರಾಮ ಜಯಘೋಷ. ಕೋಟ್ಯಂತರ ಹಿಂದೂಗಳ ಐದು ದಶಕಗಳ ಕನಸು ಈಡೇರಿದ್ದು, ಈ ಸಂಭ್ರಮವನ್ನು ಯುವಕರು ತಮ್ಮದೇ ಆದ ರೀತಿಯಲ್ಲಿ ವ್ಯಕ್ತಪಡಿಸುತ್ತಿದ್ದಾರೆ. ಈ ನಡುವೆ ಯುವ ಸಮುದಾಯ ಪ್ರಭು ಶ್ರೀರಾಮನ ಟ್ಯಾಟೂ ಹಾಕಿಸಿಕೊಂಡು ಭಕ್ತಿ ಮೆರೆಯುತ್ತಿದ್ದಾರೆ. ಚಿತ್ರದುರ್ಗದಲ್ಲಿ ಯುವಕರು ಅಯೋಧ್ಯೆ ರಾಮ ಮಂದಿರ, ರಾಮ-ಹನುಮಂತನ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೆಲ ದಿನಕ್ಕೆ ಟ್ರೆಂಡ್ ಶುರುವಾಗಿ 150ಕ್ಕೂ ಹೆಚ್ಚು ಜನರ ಕೈ, ಎದೆಯ ಮೇಲೆ ಪ್ರಭು ಶ್ರೀರಾಮನ ಚಿತ್ರ ಮೂಡಿದೆ.


ವಿದ್ಯಾನಗರದ ಪತಂಜಲಿ ಯೋಗ ಸಮಿತಿ ವಿದ್ಯಾನಗರ ಶಾಖೆ ಇವರ ವತಿಯಿಂದ ರಾಮನಿಗೆ ಪೂಜೆ ಸಲ್ಲಿಸಿ ಅಗ್ನಿಹೋತ್ರ ಹೋಮವನ್ನು ವಿದ್ಯಾದಾಹಿನಿ ಪ್ರೈಮರಿ ಸ್ಕೂಲ್ ನಲ್ಲಿ ನಡೆಸಲಾಯಿತು.

ಅಯೋಧ್ಯಾ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾಪನ ಅಂಗವಾಗಿ ಚಿತ್ರದುರ್ಗ ನಗರ ಮಾಳಪ್ಪನಹಟ್ಟಿಯಲ್ಲಿ ಶ್ರೀರಾಮ, ಸೀತಾ, ಲಕ್ಷಣ ಮತ್ತು ಆಂಜನೇಯ ಪಾತ್ರಧರಿಸಿ ಗ್ರಾಮದಲ್ಲಿ ಭಜನೆ ನೆರವೇರಿಸಿ ಶ್ರೀ ಆಂಜನೇಯ ದೇವಸ್ಥಾನದ ಮೂಲಕ ಮೆರವಣಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Advertisement
Tags :
chitradurgadecorationPrasadSpecial poojasuddionesuddione newstemplesTirthavariousಅಲಂಕಾರಚಿತ್ರದುರ್ಗತೀರ್ಥದೇವಾಲಯಪ್ರಸಾದವಿತರಣೆವಿಶೇಷ ಪೂಜೆಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article