ಚಿತ್ರದುರ್ಗ | 3 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ
ಚಿತ್ರದುರ್ಗ. ಡಿ.07: ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಗೂ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ಅವರು ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನ, 2024-25ನೇ ಸಾಲಿನ ಎಸ್‍ಎಫ್‍ಸಿ ಮುಕ್ತ ನಿಧಿ ಅನುದಾನ ಹಾಗೂ ನಗರಸಭೆ ನಿಧಿಯ ಶೇ.24.10ರ ಅನುದಾನದ ಸೇರಿದಂತೆ ಶನಿವಾರ ಸುಮಾರು ರೂ.3 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ವಾರ್ಡ್ ನಂ.18ರ ಮೆದೇಹಳ್ಳಿ ರಸ್ತೆ ರಾಷ್ಟ್ರೀಯ ಹೆದ್ದಾರಿ-4ರ ಸರ್ವೀಸ್ ರಸ್ತೆ ಹತ್ತಿರದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಆರ್.ಸಿ.ಸಿ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.17ರ ಜಯಲಕ್ಷ್ಮೀ ಬಡಾವಣೆ ಶ್ರೀಶಾರಧ ನಿಲಯದಿಂದ ಮಸ್ತಾನ್ ಸಾಬ್ ಮನೆಯವರೆಗೆ ಹಾಗೂ ಪ್ಲೋರ್‍ಮಿಲ್ ಪಕ್ಕದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.16ರ ಸದಾನಂದಯ್ಯ ಬಡಾವಣೆ ರಂಗಪ್ಪ ಮನೆಯ ಹತ್ತಿರ ಉದ್ಯಾನವನ ನಿರ್ಮಾಣ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.10ರ ಚೇಳುಗುಡ್ಡ. ಷಣ್ಮುಖ ಮನೆಯಿಂದ ರಂಗಸ್ವಾಮಿ ಮನೆಯವರೆಗೆ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ನಿರ್ಮಾಣ, ವಾರ್ಡ್ ನಂ.13ರ ನೆಹರು ನಗರ 2ನೇ ಕ್ರಾಸ್‍ನಲ್ಲಿ ಮೇಷ್ಟ್ರು ಅಂಗಡಿ ನಾಗಪ್ಪ ಮತ್ತು ಕುಮಾರಣ್ಣನ ಮನೆಗಳ ಕ್ರಾಸ್‍ಗಳಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆಸ ನಿರ್ಮಾಣ ಮತ್ತು ನೆಹರು ನಗರ 2 ಮತ್ತು 3ನೇ ಕ್ರಾಸ್‍ನಲ್ಲಿ ಪೈಪ್‍ಲೈನ್ ಕಾಮಗಾರಿ, ವಾರ್ಡ್ ನಂ.15ರ ಸಂಪಿಗೆ ಸ್ಕೂಲ್ ಪಕ್ಕದ ಮತ್ತು ಬರಗೇರಿ ಬೀದಿ ಗಲ್ಲಿಗಳಲ್ಲಿ ರೂ.30 ಲಕ್ಷ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.26ರ ಬಡಮಕಾನ್ ಕ್ರಾಸ್‍ನಿಂದ ಮಟನ್ ಮಾರ್ಕೆಟ್‍ವರೆಗೆ ರೂ.15 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ.21ರ ಜೆ.ಸಿ.ಆರ್. ಬಡಾವಣೆ 5ನೇ ಕ್ರಾಸ್ ಸರ್ವಿಸ್ ರಸ್ತೆ ಚಾಫೆರೆಡ್ಡಿ ಹೋಟೆಲ್‍ನಿಂದ ಕನ್ನಡಪ್ರಭ ಷಣ್ಮುಖಪ್ಪ ಮನೆವರೆಗೆ ಹಾಗೂ 6ನೇ ಕ್ರಾಸ್ ಬಿ.ಟಿ.ವೀರಪ್ಪ ಮನೆ ಮುಂಭಾಗ, 4ನೇ ಕ್ರಾಸ್‍ನಲ್ಲಿ ಅಬಕಾರಿ ಆಫೀಸ್ ಮುಂಭಾಗ, 3ನೇ ಕ್ರಾಸ್ ಶಾಂತಿ ವೈನ್ಸ್‍ರವರ ಮನೆ ಮುಂಭಾಗ ರೂ.15 ಲಕ್ಷ ವೆಚ್ಚದಲ್ಲಿ ಸಿ.ಸಿ ಚರಂಡಿ ನಿರ್ಮಾಣ ಹಾಗೂ ಡೆಕ್ ಸ್ಲಾಬ್ ಕಾಮಗಾರಿ, ವಾರ್ಡ್ ನಂ.28ರ ತುರುವನೂರು ಮುಖ್ಯ ರಸ್ತೆಯ ವಾಸವಿ ಲ್ಯಾಬ್ ಪಕ್ಕದ ಆಡಿಟರ್ ನಾಗಭೂಷಣ್ ಮನೆರವರ ಮನೆ ಮುಂಭಾಗದಲ್ಲಿ ರೂ.30 ಲಕ್ಷ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗೆ ಚಾಲನೆ ನೀಡಿದರು.
2024-25ನೇ ಸಾಲಿನ ಎಸ್‍ಎಫ್‍ಸಿ ಮುಕ್ತ ಅನುದಾನದಲ್ಲಿ ಚಿತ್ರದುರ್ಗ ನಗರದ ಯೂನಿಯನ್ ಪಾರ್ಕ್ ಪಕ್ಕದ ರಸ್ತೆಯಲ್ಲಿ ರೂ.30.95 ಲಕ್ಷ ವೆಚ್ಚದಲ್ಲಿ ದೊಡ್ಡ ಮಳೆ ನೀರು ಚರಂಡಿ ಮತ್ತು ಕಲ್ವರ್ಟ್ ನಿರ್ಮಾಣ ಕಾಮಗಾರಿ ಹಾಗೂ ನಗರಸಭೆ ನಿಧಿಯ ಶೇ.24.10ರ ಅನುದಾನದಲ್ಲಿ ಚಿತ್ರದುರ್ಗ ನಗರದ ಯೂನಿಯನ್ ಪಂಪ್ ಹೌಸ್ ಆವರಣದಲ್ಲಿ ರೂ.22 ಲಕ್ಷ ವೆಚ್ಚದಲ್ಲಿ ಪೌರ ಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷರಾದ ಬಿ.ಎನ್.ಸುಮಿತಾ, ಪೌರಾಯುಕ್ತೆ ಎಂ.ರೇಣುಕಾ ಹಾಗೂ ನಗರಸಭೆ ಸದಸ್ಯರಾದ ಗೊಪ್ಪೆ ಮಂಜುನಾಥ್, ವೆಂಕಟೇಶ್, ಅನುರಾಧ ರವಿಕುಮಾರ್, ಸುರೇಶ್, ಭಾಗ್ಯಮ್ಮ, ನರಸಿಂಹಮೂರ್ತಿ, ಚಂದ್ರಮ್ಮ ಸೇರಿದಂತೆ ಮತ್ತಿತರು ಇದ್ದರು.