For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ರೂ.2.05 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

07:27 PM Dec 06, 2024 IST | suddionenews
ಚಿತ್ರದುರ್ಗ   ರೂ 2 05 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ
Advertisement

ಚಿತ್ರದುರ್ಗ. ಡಿ.06: ಚಿತ್ರದುರ್ಗ ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡ್‍ಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶುಕ್ರವಾರ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹಾಗೂ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ ಅವರು ಭೂಮಿಪೂಜೆ ನೆರವೇರಿಸಿದರು.

Advertisement

ಮುಖ್ಯಮಂತ್ರಿಗಳ ವಿಶೇಷ ಅನುದಾನ ರೂ.7.50 ಕೋಟಿ ಚಿತ್ರದುರ್ಗ ನಗರಕ್ಕೆ ಮಂಜೂರಾಗಿದ್ದು, ಶುಕ್ರವಾರ ರೂ.2.05 ಕೋಟಿ ವೆಚ್ಚದ ಸಿ.ಸಿ.ರಸ್ತೆ, ಸಿ.ಸಿ.ಚರಂಡಿ, ಡೆಕ್ ಸ್ಲಾಬ್, ಒಳಚರಂಡಿ, ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ನಗರದ ವಾರ್ಡ್ ನಂ.32ರ ಐಯುಡಿಪಿ ಲೇಔಟ್‍ನ 4ನೇ ಕ್ರಾಸ್ ರಾಜ್ ಕುಮಾರ್ ಪಾರ್ಕ್ ಹತ್ತಿರ ರೂ.30 ಲಕ್ಷ ವೆಚ್ಚದಲ್ಲಿ ಆರ್.ಸಿ.ಸಿ.ಡೆಕ್ ಸ್ಲಾಬ್ ಹಾಗೂ ಸಿ.ಸಿ. ಚರಂಡಿ ನಿರ್ಮಾಣ ಕಾಮಗಾರಿ, ವಾರ್ಡ್ ನಂ.33ರ ಬುದ್ಧನಗರದ 4, 5ನೇ ಕ್ರಾಸ್‍ಗಳಲ್ಲಿ ರೂ.30 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿ, ವಾರ್ಡ್ ನಂ.1ರ ಮೈಲಮ್ಮ ದೇವಸ್ಥಾನದ ಮಾಜಿ ನಗರಸಭೆ ಸದಸ್ಯರಾದ ರಂಗಪ್ಪ ಮನೆಯವರೆಗೆ ಹಾಗೂ ಮೈಲಮ್ಮ ದೇವಸ್ಥಾನದಿಂದ ಅಂಜುಮಾನ್‍ವರೆಗೆ ಹಾಗೂ ಜೋಗಿಮಟ್ಟಿ 6ನೇ ಕ್ರಾಸ್ ಸುಣ್ಣದ ಗುಮ್ಮಿ ಹತ್ತಿರ ರತ್ನಮ್ಮ ಮನೆಯಿಂದ ಕಾಡಪ್ಪ ಮನೆಯವರೆಗೆ ರೂ.30 ಲಕ್ಷದಲ್ಲಿ ಸಿ.ಸಿ.ಚರಂಡಿ, ಡೆಕ್ ಸ್ಲಾಬ್ ಹಾಗೂ ಒಳಚರಂಡಿ ಕಾಮಗಾರಿ, ವಾರ್ಡ್ ನಂ.4ರ ಫಿಲ್ಟರ್ ಹೌಸ್ ಹತ್ತಿರ ಕಂಠಿ ರಶೀದ್ ಮನೆ ಹತ್ತಿರ, ಎನ್.ಡಿ.ಕುಮಾರ್ ಮನೆ ಹತ್ತಿರ, ಕಂಬಳಗೇರಿ ಬೀದಿ ಹತ್ತಿರ, ಬ್ರಹ್ಮಗಿರಿ ಪ್ರೆಸ್ ಹತ್ತಿರ ರೂ.30 ಲಕ್ಷ ವೆಚ್ಚದಲ್ಲಿ ಸಿ.ಸಿ.ಚರಂಡಿ ನಿರ್ಮಾಣ ಕಾಮಗಾರಿ ಹಾಗೂ ಸಿ.ಸಿ.ರಸ್ತೆ ನಿರ್ಮಾಣ ಕಾಮಗಾರಿ, ವಾರ್ಡ್ ನಂ.2ರ ಅಕ್ಕಚ್ಚಮ್ಮ ಬಾವಿ ಅಂಜುಮಾನ್ ಮುಂಭಾಗದಲ್ಲಿ ಮತ್ತು ಇಸ್ತ್ರಿ ನಾಗಣ್ಣ ಮನೆ ಮುಂಭಾಗ, ಬ್ಯಾಂಕ್ ರುದ್ರಣ್ಣ ಮುಂಭಾಗದಲ್ಲಿ ರೂ.10 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, ಚರಂಡಿ, ಒಳಚರಂಡಿ, ಆರ್.ಸಿ.ಸಿ ಸ್ಲಾಬ್ ಹಾಗೂ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್‍ನಂ 3ರ ಕಾಮನಭಾವಿ ಬಡಾವಣೆಯ 1ನೇ ಮುಖ್ಯರಸ್ತೆ ಎಡಭಾಗದಲ್ಲಿ 1ನೇ ಅಡ್ಡರಸ್ತೆ ಗಲ್ಲಿಯಲ್ಲಿ ನಗರಸಭೆ ಸದಸ್ಯರಾದ ಶ್ರೀನಿವಾಸ್ ಅವರ ಮನೆ ಹಿಂಭಾಗ ಕೂಬಾ ನಾಯ್ಕ್ ಮನೆ ಮುಂಭಾಗ ರೂ.30 ಲಕ್ಷ ವೆಚ್ಚದಲ್ಲಿ ಅಂಜುಮಾನ್ ರಸ್ತೆ ಅಭಿವೃದ್ಧಿ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿ, ವಾರ್ಡ್ ನಂ 7ರಲ್ಲಿ ಬುರುಜನಹಟ್ಟಿ ಮಲ್ನಾಡ್ ಚೌಡಮ್ಮ ದೇವಸ್ಥಾನದ ಹತ್ತಿರ ಹಾಗೂ ಮೇಕೆ ಬಂಡೆ ಹತ್ತಿರ ಗಣಚಾರಿ ಶಾಂತಮ್ಮ ಮನೆ ಹತ್ತಿರ ರೂ.20 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಹಾಗೂ ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿ, ವಾರ್ಡ್ ನಂ.8ರ ಸಿಹಿನೀರು ಹೊಂಡದ ರಸ್ತೆಯ ಬರಗೇರಮ್ಮ ಶಾಲೆ ಮುಂಭಾಗದಿಂದ ಸಿಹಿನೀರು ಹೊಂಡದ ಹಳ್ಳದವರೆಗೆ ರೂ.25 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ, ಡೆಕ್ ಸ್ಲಾಬ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.

Advertisement

*ಡಸ್ಟ್ ಬಿನ್ ವಿತರಣೆ:* ನಗರದ ವಾರ್ಡ್ ನಂ.33ರ ಪ್ರಶಾಂತ ನಗರದಲ್ಲಿ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರು ಹಸಿ ಕಸ ಒಣ ಕಸ ವಿಂಗಡಿಸಿ ನೀಡಲು 10 ಜನರಿಗೆ ಸಾಂಕೇತಿಕವಾಗಿ ಡಸ್ಟ್ ಬಿನ್ ವಿತರಿಸಿದರು. ರೂ.20 ಲಕ್ಷ ವೆಚ್ಚದಲ್ಲಿ 10,900 ಡಸ್ಟ್ ಬಿನ್ ಖರೀದಿಸಲಾಗಿದೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತಾ, ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ನಗರಸಭೆ ಸದಸ್ಯರಾದ ನಾಗಮ್ಮ, ಪೂಜಾ ಯೋಗಿ, ಗೀತಾ, ಚಂದ್ರಶೇಖರ್, ಮೀನಾಕ್ಷಿ, ಶಶಿಧರ್, ತಾರಕೇಶ್ವರಿ, ಗೊಪ್ಪೆ ಮಂಜುನಾಥ್ ಹಾಗೂ ನಗರಸಭೆ ನಾಮನಿರ್ದೇಶನ ಸದಸ್ಯರು ಇದ್ದರು.

Tags :
Advertisement