Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಿತ್ರದುರ್ಗ | ಪ್ರಶಾಂತಿ ವಿದ್ಯಾಲಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

05:42 PM Jun 21, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552

Advertisement

ಸುದ್ದಿಒನ್, ಚಿತ್ರದುರ್ಗ, ಜೂನ್. 21 : ಯೋಗಾಭ್ಯಾಸಕ್ಕೆ ವಯಸ್ಸು ಮುಖ್ಯವಲ್ಲ. ಕಲಿಯುವ ಆಸಕ್ತಿಯಿರಬೇಕೆಂದು ಐ.ಯು.ಡಿ.ಪಿ. ಬಡಾವಣೆಯ ನಿಸರ್ಗ ಯೋಗ ಕೇಂದ್ರದ ಯೋಗ ಗುರು ಶಿವಲಿಂಗಪ್ಪ ತಿಳಿಸಿದರು.

ಐ.ಯು.ಡಿ.ಪಿ. ಬಡಾವಣೆಯಲ್ಲಿರುವ ಪ್ರಶಾಂತಿ ವಿದ್ಯಾಲಯದಲ್ಲಿ ಹತ್ತನೆ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಯೋಗ ಪ್ರದರ್ಶನದಲ್ಲಿ ಭಾಗವಹಿಸಿ ಮಾತನಾಡಿದರು.

Advertisement

ಯೋಗ ಇಂದು ಹೆಮ್ಮರವಾಗಿ ಬೆಳೆದಿದ್ದು, ವೈದ್ಯಕೀಯ ಲೋಕಕ್ಕೆ ಸವಾಲಾಗಿ ನಿಂತಿದೆ. ಔಷಧೋಪಚಾರಗಳಿಂದ ಗುಣವಾಗದ ರೋಗಗಳನ್ನು ವಾಸಿ ಮಾಡುವ ಶಕ್ತಿ ಯೋಗಕ್ಕಿದೆ. ಹೀಗಾಗಿ ದೇಶ ವಿದೇಶಗಳಲ್ಲೂ ಯೋಗಕ್ಕೆ ಮಹತ್ವವಿದೆ ಎಂದರು.

ಹವ್ಯಾಸಿ ಯೋಗ ಪಟುಗಳಾದ ಜಯಣ್ಣ, ಪುಷ್ಪ, ಸಂಯುಕ್ತ, ದಿವ್ಯ ಇವರುಗಳ ಆಕರ್ಷಕ ಯೋಗ ಪ್ರದರ್ಶನವನ್ನು ಕಂಡು ನೆರದಿದ್ದವರು ಪುಳಕಿತರಾದರು.

ಪ್ರಶಾಂತಿ ಶಾಲೆಯ ಮುಖ್ಯಸ್ಥರಾದ ರಮೇಶ್ ಇಟಗಿ, ಶಿಕ್ಷಕಿಯರುಗಳಾದ ಸಂಪದ, ಸಂಧ್ಯಾ ಈ ಸಂದರ್ಭದಲ್ಲಿ ಹಾಜರಿದ್ದರು.

Advertisement
Tags :
bengalurucelebrationchitradurgaInternational Yoga DayPrashanthi Vidyalayasuddionesuddione newsಅಂತರಾಷ್ಟ್ರೀಯ ಯೋಗ ದಿನಾಚರಣೆಚಿತ್ರದುರ್ಗಪ್ರಶಾಂತಿ ವಿದ್ಯಾಲಯಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article