ಚಿತ್ರದುರ್ಗ ಜಿಲ್ಲಾ ಯುವಜನೋತ್ಸವ : ಎಸ್.ಜೆ.ಎಂ.ಐ.ಟಿ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 07 : ನಗರದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಕೇಂದ್ರ ಯುವ ವ್ಯವಹಾರ ಮತ್ತು ಕ್ರೀಡಾ ಸಚಿವಾಲಯ, ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ನಡೆದ ವಿವಿಧ ಸ್ಪರ್ಧೆಗಳಲ್ಲಿ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ಪ್ರಿಯಾಂಕ ಎನ್ ಮತ್ತು ತಂಡ-ಪ್ರಥಮ,
ಎಲೆಕ್ಟ್ರಿಕಲ್ ವಿಭಾಗದ ವೆಂಕಟೇಶ್ ಮತ್ತು ತಂಡ ದ್ವಿತೀಯ, ಎಲೆಕ್ಟ್ರಿಕಲ್ ವಿಭಾಗದ ಸುಮಾ ಮತ್ತು ತಂಡ-ತೃತೀಯ ಬಹುಮಾನ ಪಡೆದರೆ,
ಜಾನಪದ ಗೀತೆ ಸ್ಪರ್ಧೆಯಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಶ್ರೇಯಾ ಮತ್ತು ತಂಡ ಪ್ರಥಮ,
ಮೊಬೈಲ್ ಫೋಟೋಗ್ರಫಿಯಲ್ಲಿ ಎಲೆಕ್ಟ್ರಿಕಲ್ ವಿಭಾಗದ ಲಿಖಿತಾ ದ್ವಿತೀಯ,
ಮೊಹಮದ್ ಶೋಯೆಬ್ ತೃತೀಯ,
ಚಿತ್ರಕಲೆಯಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ರಕ್ಷಾ ಯು ಎಲ್ ದ್ವಿತೀಯ, ಕಥಾ ಬರಹದಲ್ಲಿ ಪ್ರಾಂಜಲ ದ್ವಿತೀಯ,
ಸಿವಿಲ್ ವಿಭಾಗದ ಮೊಹಮದ್ ಬಿಲಾಲ್ ತೃತೀಯ ಸ್ಥಾನ ಪಡೆದಿರುತ್ತಾರೆ.
ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಾಚಾರ್ಯರಾದ ಡಾ.ಭರತ್ ಪಿ ಬಿ, ವಿವಿಧ ಇಲಾಖಾ ಮುಖ್ಯಸ್ಥರು, ಐಕ್ಯುಎಸಿ ಸಂಚಾಲಕ ಡಾ.ರಾಜೇಶ್ ಎ ಎಂ, ಅಕಾಡೆಮಿಕ್ ಡೀನ್ ಡಾ.ಮಂಜುನಾಥ್ ಎಸ್ ಸಿ, ಸಾಂಸ್ಕøತಿಕ ಘಟಕ ಸಂಚಾಲಕಿ ಪ್ರೊ.ಸುಸ್ಮಿತಾ ದೇಬ್, ಪ್ರೊ.ಗಿರೀಶ್ ಕುಮಾರ್ ಜಿ ಎಂ ಅಭಿನಂದನೆ ಸಲ್ಲಿಸಿರುತ್ತಾರೆ.