ಚಿತ್ರದುರ್ಗ | ಟೇಕ್ವಾಂಡೋದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಸಾಧಿಸಿದ ಎರಡು ವರ್ಷದ ಬಾಲಕ
08:48 PM Dec 17, 2024 IST | suddionenews
Advertisement
ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್. 17 : ಎರಡು ವರ್ಷದ ಬಾಲಕ ಪ್ರಣವ್ ಅಭ್ಯಂತ್ ಆರ್.ಎಸ್. ಟೇಕ್ವಾಂಡೋದಲ್ಲಿ ವರ್ಲ್ಡ್ ಬುಕ್ ಆಫ್ ರೆಕಾರ್ಡ್ ಮಾಡಿ ಸಾಧನೆಗೈದಿದ್ದಾರೆ.
Advertisement
ಟೇಕ್ವಾಂಡೋ ಕೋಚ್ ದಂಪತಿಗಳಾದ ಚಿತ್ರದುರ್ಗದ ರುದ್ರೇಶ್ ಮತ್ತು ಸವಿತ ಇವರ ಪುತ್ರ ಪ್ರಣವ್ ಅಭ್ಯಂತ್ ಆರ್.ಎಸ್. ಚಿಕ್ಕವಯಸ್ಸಿನಲ್ಲಿಯೆ ಇಂಡಿಯನ್ ಬುಕ್ ಆಫ್ ರೆಕಾರ್ಡ್‍ನಲ್ಲಿ ದಾಖಲೆ ನಿರ್ಮಿಸಿ ಒಂದು ನಿಮಿಷಕ್ಕೆ 36 ಕಿಕ್ ಹೊಡೆದು ವಲ್ರ್ಡ್ ಬುಕ್ ಆಫ್ ರೆಕಾರ್ಡ್‍ನ್ನು ತನ್ನದಾಗಿಸಿಕೊಂಡು ಟೇಕ್ವಾಂಡೋದಲ್ಲಿ ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತಂದಿದ್ದಾರೆ.