For the best experience, open
https://m.suddione.com
on your mobile browser.
Advertisement

ಬಾಲೇನಹಳ್ಳಿ ಬಳು ರೈಲಿಗೆ ಸಿಲುಕಿ ವ್ಯಕ್ತಿ ಸಾವು: ವಾರಸುದಾರರ  ಪತ್ತೆಗೆ ಮನವಿ

06:36 PM Dec 17, 2024 IST | suddionenews
ಬಾಲೇನಹಳ್ಳಿ ಬಳು ರೈಲಿಗೆ ಸಿಲುಕಿ ವ್ಯಕ್ತಿ ಸಾವು  ವಾರಸುದಾರರ  ಪತ್ತೆಗೆ ಮನವಿ
Advertisement

ಚಿತ್ರದುರ್ಗ. ಡಿ.17: ಜಿಲ್ಲೆಯ ಚಿತ್ರದುರ್ಗ ಮತ್ತು ಬಾಲೇನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿಮೀ ನಂ 35/100-200ರ ರೈಲ್ವೆ ಹಳಿಗಳಲ್ಲಿ ಯಾವುದೋ ಚಲಿಸುವ ರೈಲುಗಾಡಿಗೆ ಸಿಲುಕಿ ಸುಮಾರು 25 ರಿಂದ 30 ವರ್ಷದ ಪುರುಷ ವ್ಯಕ್ತಿ ಮೃತಪಟ್ಟಿದ್ದು, ಈ ಕುರಿತು ಡಿ.16ರಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಅನಾಮಧೇಯ ಮೃತ ವ್ಯಕ್ತಿಯು 5.6 ಅಡಿ ಎತ್ತರ, ಕೋಲು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, ತಲೆಯಲ್ಲಿ ಸು.3 ಇಂಚು ಬಿಳಿ ಮಿಶ್ರಿತ ಕಪ್ಪು ಕೂದಲು ಇವೆ. ಮೃತನು ತುಂಬು ತೋಳಿನ ಲೈಟ್ ಗ್ರೀನ್ ಶರ್ಟ್, ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಚಡ್ಡಿ, ಕಂದು ಬಣ್ಣದ ಬೆಲ್ಟ್ ಧರಿಸಿರುತ್ತಾರೆ.

Advertisement

ಈ ಮೇಲ್ಕಂಡ ವ್ಯಕ್ತಿಯ ಕುರಿತು ಮಾಹಿತಿ ತಿಳಿದು ಬಂದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08192-259643, 9480802123 ಅಥವಾ ಇ-ಮೇಲ್ davangererly@ksp.gov.in  ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ. 080-22871291 ಗೆ ಸಂಪರ್ಕಿಸಬಹುದು ಎಂದು ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags :
Advertisement