For the best experience, open
https://m.suddione.com
on your mobile browser.
Advertisement

ಚಿತ್ರದುರ್ಗ | ಎಸ್‌.ಆರ್‌.ಎಸ್‌. ಕಾಲೇಜಿನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ

11:51 AM Aug 15, 2024 IST | suddionenews
ಚಿತ್ರದುರ್ಗ   ಎಸ್‌ ಆರ್‌ ಎಸ್‌  ಕಾಲೇಜಿನಲ್ಲಿ ಸಂಭ್ರಮದ 78ನೇ ಸ್ವಾತಂತ್ರ್ಯ ದಿನಾಚರಣೆ
Advertisement

ಸುದ್ದಿಒನ್, ಚಿತ್ರದುರ್ಗ, ಆಗಸ್ಟ್‌ 15 : ಇಂದು ಪ್ರತಿಯೊಬ್ಬ ಭಾರತೀಯನ ಸಂತೋಷದ ಸುದಿನ.  ಏಕೆಂದರೆ ನಾವು ಬ್ರಿಟೀಷರ ಗುಲಾಮಗಿರಿಯಿಂದ ಮುಕ್ತವಾಗದೆ ಹೋಗಿದ್ದರೆ ಸ್ವಾತಂತ್ರ್ಯದ ಜೀವನವನ್ನು ನಡೆಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆರ್‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಡಾ.ರವಿ ಟಿ.ಎಸ್‌. ಹೇಳಿದರು.

Advertisement
Advertisement

ಅವರು ನಗರದ ಎಸ್‌ ಆರ್‌ ಎಸ್‌ ಸಮೂಹ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ 78ನೇ ಸ್ವಾತಂತ್ರ್ಯ  ದಿನಾಚರಣೆಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.

Advertisement

ಮಕ್ಕಳೆ ನಿಮ್ಮನ್ನೆಲ್ಲ ನೋಡುತ್ತಿದ್ದರೆ ಒಬ್ಬೊಬ್ಬ  ಸ್ವಾತಂತ್ರ್ಯ ಹೋರಾಟಗಾರರು ಕಣ್ಮುಂದೆ ಬರುತ್ತಾರೆ. ಆ ರೀತಿ ಕಾಣಿಸುತ್ತಿದ್ದೀರಿ. ಇಂದು ಧ್ವಜಾರೋಹಣ ಸಂದರ್ಭದಲ್ಲಿ ತುಂಬಾ ಶಿಸ್ತು, ಬದ್ಧತೆಯಿಂದ ನಡೆಸಿಕೊಟ್ಟ ಪಥಸಂಚಲನವನ್ನು ನೋಡಿದಾಗ,  ಹಿಂದೆ ಬ್ರಿಟೀಷರ ವಿರುದ್ಧವಾಗಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಇದೇ ರೀತಿ ವಿವಿಧ ಘೋಷಣೆಗಳೊಂದಿಗೆ ಚಳವಳಿಗಳಲ್ಲಿ ಭಾಗವಹಿಸಿದ್ದು ನೆನಪಿಗೆ ಬರುತ್ತದೆ.  ಭವಿಷ್ಯ  ಇದನ್ನು ಗಮನದಲ್ಲಿಟ್ಟುಕೊಂಡು “ಮಕ್ಕಳು ಈ ದೇಶದ ಸಂಪತ್ತು” ಎಂದು ಗಾಂಧೀಜಿಯವರು ಹೇಳಿದರು.

Advertisement

ಇತ್ತೀಚಿನ ದಿನಗಳಲ್ಲಿ ಯುವಕರು ತಂಬಾಕು, ಮಾದಕ ವಸ್ತುಗಳು ಹಾಗೂ ಕುಡಿತದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ತುಂಬಾ ಬೇಸರದ ಸಂಗತಿ.  ಇವಗಳಿಗೆ ಬಲಿಯಾಗದೆ ಸದೃಢ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.  ಈ ನಿಟ್ಟಿನಲ್ಲಿ ನಾವೆಲ್ಲರೂ ನಮ್ಮೊಳಗೆ ಸಂಕಲ್ಪ ಮಾಡಿಕೊಳ್ಳೋಣ ಎಂದರು.

ಸ್ವಾತಂತ್ರ್ಯ  - ಸುಭದ್ರ – ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಮನುಷ್ಯ ಮನುಷ್ಯರ ಮಧ್ಯೆ ಪ್ರೀತಿ, ಸಹಬಾಳ್ವೆ, ಸಹಬಾಂಧವ್ಯ  ನೆಲಸಿ ಈ ಭರತ ಭೂಮಿ ಶಾಶ್ವತವಾಗಿ ಪೂಣ್ಯಭೂಮಿಯಾಗಿಯೇ ಉಳಿಯಬೇಕು.  ಇಂತಹ ಪುಣ್ಯಭೂಮಿಯಲ್ಲಿ ಹುಟ್ಟಿ ಬುದುಕುತ್ತಿರುವ ನಾವುಗಳು ನಿಜಕ್ಕೂ ಭಾಗ್ಯವಂತರು.  ಈ ನಿಟ್ಟಿನಲ್ಲಿ ನಾವೆಲ್ಲರು ನಮ್ಮೊಳಗೆ ಸಂಕಲ್ಪ ಮಾಡಿಕೊಳ್ಳೋಣ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ  ಲೇಖಕರು ಹಾಗೂ ಸಂವೇದನಾ ಫೌಂಡೇಶನ್‌ ಸಂಸ್ಥೆಯ ಸಂಸ್ಥಾಪಕರು ಆಗಿರುವ ಪ್ರಕಾಶ್‌ ಮಲ್ವೆ, ಅವರು ಮಾತನಾಡಿ, ವೈಜ್ಞಾನಿಕವಾಗಿ ಮುಂದುವರಿದ ಜಗತ್ತಿನ ಯಾವ ರಾಷ್ತ್ರದಲ್ಲೂ ಭಾರತದೇಶದಂತಹ ವೈಭವಿವಲ್ಲ, ವಿದ್ಯಾರ್ಥಿಗಳೆ ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡಿ.  ಇತಿಹಾಸವನ್ನು ಹೆಚ್ಚು ಹೆಚ್ಚು ಅಧ್ಯಯನ ಮಾಡುವ ಮೂಲಕ ಈ ದೇಶದ ಶ್ರೀಮಂತಿಕೆಯನ್ನು ತಿಳಿದುಕೊಳ್ಳಬೇಕು.  ಜಗತ್ತಿಗೆ ಜ್ಞಾನವನ್ನು ಕಲಿಸಿದವರು ಭಾರತಿಯರು. ನಮ್ಮ ಭಾ಼ಷೆ ಒಂದು ಭಾಷೆ ಮಾತ್ರವಲ್ಲ, ಅದು ಸಂಸ್ಕಾರವನ್ನು ಕಲಿಸುವ ಸಂಪತ್ತು ಎಂದರು.

ಕಾರ್ಯಕ್ರಮದಲ್ಲಿ ಎಲ್ಲಾ ವಿಭಾಗಗಳ ಪ್ರಾಂಶುಪಾಲರುಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Tags :
Advertisement