For the best experience, open
https://m.suddione.com
on your mobile browser.
Advertisement

ಹೆಚ್‌ಐವಿ ಕುರಿತು ಯುವ ಜನತೆ ಜಾಗರೂಕರಾಗಿರಿ : ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ

05:42 PM Dec 03, 2024 IST | suddionenews
ಹೆಚ್‌ಐವಿ ಕುರಿತು ಯುವ ಜನತೆ ಜಾಗರೂಕರಾಗಿರಿ   ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ ಎಸ್ ಪಿ ರವೀಂದ್ರ
Advertisement

ಚಿತ್ರದುರ್ಗ. ಡಿ.03: ದೇಶದಲ್ಲಿ ಹೆಚ್.ಐ.ವಿ. ಸೊಂಕಿಗೆ ತುತ್ತಾಗುತ್ತಿರುವವರ ಪೈಕಿ ಹೆಚ್ಚಿನವರು ಯುವಕರಾಗಿರುವುದು ಆತಂತಕಾರಿ ವಿಷಯವಾಗಿದೆ. ಯುವ ಜನತೆ ಹೆಚ್.ಐ.ವಿ ಕುರಿತು ಜಾಗರೂಕರಾಗಿರಬೇಕು ಎಂದು ಜಿಲ್ಲಾ ಶಸ್ತç ಚಿಕಿತ್ಸಕ ಎಸ್.ಪಿ. ರವೀಂದ್ರ ಕಿವಿ ಮಾತು ಹೇಳಿದರು.

Advertisement

ನಗರದ ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜಿನ ಶ್ರೀ ಗುರು ವಾಲ್ಮೀಕಿ ಮಹರ್ಷಿ ಸಭಾಂಗಣದಲ್ಲಿ, ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆ ಘಟಕ, ರಾಷ್ಟ್ರೀಯ ಆರೋಗ್ಯ ಅಭಿಯಾನ, ಮಹಾರಾಜ ಮದಕರಿ ನಾಯಕ ಪ್ರಥಮ ದರ್ಜೆ ಕಾಲೇಜು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ವಿಶ್ವ ಏಡ್ಸ್ ದಿನ” ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತಾಡಿದರು.

1988 ರಿಂದ ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸಲಾಗುತ್ತದೆ. ಸರ್ಕಾರದಿಂದ ಈ ಸೋಂಕನ್ನು ಸಂಪೂರ್ಣವಾಗಿ ತಡೆಗಟ್ಟಲು ಹಲವಾರು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆಚ್‌ಐವಿ ಸೋಂಕು 4 ಹಂತಗಳಲ್ಲಿ ಹರಡುತ್ತದೆ. ಅಸುರಕ್ಷಿತ ಲೈಂಗಿಕ ಕ್ರಿಯೆ, ತಾಯಿಯಿಂದ ಮಗುವಿಗೆ, ಸೋಂಕಿತರ ರಕ್ತದಿಂದ ಹಾಗೂ ಐ.ಡಿ.ಯೂಗಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ. ಯುವಕರು ಮಾದಕ ವ್ಯಸನ ತುತ್ತಾಗುವುದರ ಜೊತೆಗೆ, ಹೆಚ್.ಐ.ವಿ ಸೊಂಕಿಗೆ ಬಲಿಯಾಗುತ್ತಿದ್ದಾರೆ. ಸೋಂಕಿಗೆ ಒಳಗಾದವರು ಯಾವುದೇ ಮುಜುಗರಕ್ಕೆ ಒಳಗಾಗದೆ ಭಯ ಭೀತಿ ಇಲ್ಲದೇ ಪರೀಕ್ಷಿಸಿಕೊಂಡು ಹೆಚ್.ಐ.ವಿ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ಡಾ.ಎಸ್.ಪಿ.ರವೀಂದ್ರ ಹೇಳಿದರು.

Advertisement
Advertisement

ಜಿಲ್ಲಾ ಆರ್.ಸಿ.ಹೆಚ್. ಡಾ.ಅಭಿನವ್ ಪ್ರಾಸ್ತಾವಿಕವಾಗಿ ಮಾತನಾಡಿ, ಯುವಕರು ಈ ದೇಶದ ಬೆನ್ನೆಲುಬು. ಬದುಕಿನ ಹಾಗೂ ದೇಶದ ಭವಿಷ್ಯ ಯುವಜನತೆ ಕೈಯ್ಯಲ್ಲಿದೆ. ಆದರೆ ದೇಶದಲ್ಲಿ ಹೆಚ್.ಐ.ವಿ ಯೊಂದಿಗೆ ಬದುಕುತ್ತಿರುವ ಶೇ.40ರಷ್ಟು ಜನ 15-29 ವಯಸ್ಸಿನ ಯುವಕರು ಹಾಗೂ 15-49ರ ವಯಸ್ಸಿನ ಶೇ.83 ರಷ್ಟು ಸೋಂಕಿತರು ಮತ್ತು ಶೇ.39ರಷ್ಟು ಮಹಳೆಯರಾಗಿದ್ದು, ಜಿಲ್ಲೆಯು ಶೇ0.33ರಷ್ಟು ಹೆಚ್.ಐ.ವಿ ಸೋಂಕಿನೊAದಿಗೆ ರಾಜ್ಯದಲ್ಲಿ 22ನೇ ಸ್ಥಾನದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಎಲ್ಲೆಡೆಯೂ ಆರೋಗ್ಯ ಎಲ್ಲರಿಗೂ ಆರೋಗ್ಯ ಎನ್ನುವ ರಾಷ್ಟಿçÃಯ ಆರೋಗ್ಯ ಅಭಿಯಾನದ ಘೋಷಣೆಯಂತೆ ಹೆಚ್.ಐ.ವಿ ಸೋಂಕು ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸುವುದು ನಮ್ಮೆಲ್ಲರ ಕರ್ತವ್ಯ. ಹೆಚ್.ಐ.ವಿ ಸೋಕು ಒಂದು ವೈರಾಣು. ಇದು ಸೋಂಕಿತ ವ್ಯಕ್ತಿಯ ಸಹಜವಾದ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತದೆ. ಇದರಿಂದ ಹಲವು ರೋಗಗಳು ನಮ್ಮ ದೇಹ ಪ್ರವೇಶಿಸುತ್ತವೆ. ಆದ್ದರಿಂದ ಯುವಕರಲ್ಲಿ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿ ಸೋಂಕಿನ ಪ್ರಮಾಣ ಶೂನ್ಯಕ್ಕೆ ತರುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಅತ್ಯತ್ತಮ ಕಾರ್ಯನಿರ್ವಹಿಸಿದ ಚರ್ಮರೋಗ ತಜ್ಞವೈದ್ಯ ವಿಜಯಕುಮಾರ್, ಐ.ಸಿ.ಟಿ.ಸಿ ಸಿಬ್ಬಂದಿ ಪ್ರಕಾಶ.ಎಂ.ಹೆಚ್, ರಮೇಶ್.ಪಿ.ಡಿ, ಮರುಳ ಸಿದ್ದಗೌಡ, ಕ್ಷೇತ್ರ ಕಾರ್ಯಕರ್ತೆ ರೋಜಿ ಇಲಿಯಾಸ್ ಪರದೇಶಿ, ಸಮುದಾಯ ಆರೋಗ್ಯ ಕಾರ್ಯಕರ್ತ ದೇವರಾಜು, ಸಂಪರ್ಕ ಕಾರ್ಯಕರ್ತೆ ಶಾಂತಮ್ಮ, ವಿಜ್ಞಾನ ಶಿಕ್ಷಕ ನಾಗಭೂಷಣ್.ಟಿ.ಎಸ್. ಅವರಿಗೆ ಸನ್ಮಾನಿಸಲಾಯಿತು. ಇದೇ ರೀತಿ ವಿವಿದ ಕಾಲೇಜುಗಳಲ್ಲಿ ಉತ್ತಮ ಕಾರ್ಯನಿರ್ವಹಿಸಿದ ರೆಡ್ ರಿಬ್ಬನ್ ಕ್ಲಬ್‌ಗಳನ್ನ ಸನ್ಮಾನಿಸಲಾಯಿತು. ಈ ವೇಳೆ ಮಹಾರಾಜ ಮದಕರಿ ನಾಯಕ ಕಾಲೇಜಿನ ಎನ್‌ಎಸ್‌ಎಸ್ ಸಂಚಾಲಕಿ ಪ್ರೊ.ಎನ್.ಟಿ.ಗಂಗಮ್ಮ, ಪ್ರೊ.ಎನ್.ಶ್ರೀನಿವಾಸ್, ಡಾ.ಧನಂಜಯ್, ಜಿಲ್ಲಾಸ್ಪತ್ರೆ ಎಆರ್‌ಟಿ ಕೇಂದ್ರ ವೈದ್ಯಾಧಿಕಾರಿ ಡಾ.ರೂಪಶ್ರೀ ಉಪಸ್ಥಿತರಿದ್ದರು.

Tags :
Advertisement