Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಚಳ್ಳಕೆರೆ | ಬಸ್ ತಡೆದು ಗ್ರಾಮಸ್ಥರಿಂದ ಪ್ರತಿಭಟನೆ

12:36 PM Dec 24, 2024 IST | suddionenews
Advertisement

ವರದಿ ಮತ್ತು ಫೋಟೋ ಕೃಪೆ                                  ಸುರೇಶ್ ಬೆಳೆಗೆರೆ, ಚಳ್ಳಕೆರೆ, ಮೊ:  84314 13188

Advertisement

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 24 : ನಿಲುಗಡೆಗೆ ಅನುಮತಿ ಇದ್ದರೂ KSRTC ಬಸ್ ನಿಲ್ಲಿಸದೆ ಇದ್ದ ಕಾರಣ ಸಾಣಿಕೆರೆ ಗ್ರಾಮಸ್ಥರು ಕೆ ಎಸ್ ಆರ್ ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದ್ದಾರೆ.

ಸಾಣಿಕೆರೆ ಗ್ರಾಮದಲ್ಲಿ ಹಾದು ಹೋಗಿರುವ ರಾಷ್ಟೀಯ ಹೆದ್ದಾರಿ 150 ಎ ರಲ್ಲಿ ಬಸ್ಸಿಗೆ ಅಡ್ಡ ಹಾಕಿ ಸಾಣಿಕೆರೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮಕ್ಕೆ ಬರುವ ಸರ್ವಿಸ್ ರಸ್ತೆ ಇದ್ದರೂ ಹೈವೆಯ ಪ್ಲೈಓವರ್ ಮೇಲೆಯೇ ಬಸ್ಸುಗಳ ಸಂಚಾರ ಮಾಡುತ್ತಿರುವುದನ್ನ ವಿರೋಧಿಸಿದ್ದಾರೆ‌
ಸರ್ವಿಸ್ ರಸ್ತೆ ಮೂಲಕ ಗ್ರಾಮಕ್ಕೆ ಬಸ್ ಬಾರದೆ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಹೊಇಗಲು ತೊಂದರೆ ಯಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಸಾಣಿಕೆರೆ ಗ್ರಾಮಸ್ಥರಿಂದ ಬಸ್ಸಿಗೆ ತಡೆ‌ ಹಾಕಿದ್ದಾರೆ.

Advertisement

ಹಲವು ಭಾರಿ ಬಸ್ ನಿಲುಗಡೆ ಕೋರಿ ಇಲ್ಲಿನ ಜನರು ಮನವಿ ಸಲ್ಲಿಸಿದ್ದರು. ಆದರೆ ಗ್ರಾಮದ ವಿದ್ಯಾರ್ಥಿಗಳು, ಜನರ ಸಮಸ್ಯೆ ಆಲಿಸದೆ ನಿರ್ಲಕ್ಷಕ್ಕೆ ಆಕ್ರೋಶ ವ್ಯಕ್ತವಾಗಿದೆ. ಪ್ರತಿನಿತ್ಯ ಬಸ್ಸುಗಳನ್ನ ನಿಲ್ಲಿಸಿ ಮುಂದೆ ತೆರಳಬೇಕು ಎಂದು ಆಗ್ರಹಿಸಿದ್ದಾರೆ. ಬಸ್ ನಿಲ್ಲಿಸಲು KSRTC ಅಧಿಕಾರಿಗಳಿಗೆ ಗ್ರಾಮಸ್ಥರ ಒತ್ತಾಯಿಸಿದ್ದಾರೆ.

Advertisement
Tags :
bengaluruchallakerechitradurgakannadaKannadaNewsProtest by the villagersstopping the bussuddionesuddionenewsಕನ್ನಡಕನ್ನಡವಾರ್ತೆಕನ್ನಡಸುದ್ದಿಗ್ರಾಮಸ್ಥರಿಂದ ಪ್ರತಿಭಟನೆಚಳ್ಳಕೆರೆಚಿತ್ರದುರ್ಗಬಸ್ಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article