Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಆರ್.ಕೆ.ಸರ್ದಾರ್ ಅವರನ್ನು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸಿ : ಮುಖಂಡರ ಮನವಿ

07:11 PM Jul 30, 2024 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಜುಲೈ.30 :ಆರ್.ಕೆ.ಸರ್ದಾರ್ ರನ್ನು  ಕರ್ನಾಟಕ ರಾಜ್ಯದ ಉನ್ನತವಾದ ಒಂದು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ಚಿತ್ರದುರ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಸಮಿತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಅವರಿಗೆ ಮನವಿ ಸಲ್ಲಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ  ಸಭೆಯಲ್ಲಿ  ಜಿಲ್ಲಾ ಕಾಂಗ್ರೆಸ್ ಸಮಿತಿ ಸ್ವ ಇಚ್ಛೆಯಿಂದ ಮನವಿ ಪತ್ರವನ್ನು ನೀಡಿದರು.  ಸುಮಾರು ಕಳೆದ 37 ವರ್ಷಗಳಿಂದ ಕಾಂಗ್ರೆಸ್ ಪಕ್ಷಕ್ಕೆ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡಿದ್ದಾರೆ.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಅರ್ಜಿ ಸಲ್ಲಿಸಿದ್ದು, ಮೂರು ಬಾರಿಯೂ ಸಹ ಕಾಂಗ್ರೆಸ್ ಟಿಕೆಟ್‌ ನಿಂದ ವಂಚಿತರಾಗಿದ್ದಾರೆ  ಎಂದು ಅಬ್ದುಲ್ ರೆಹಮಾನ್ ನಿವೃತ್ತ ಡಿವೈಎಸ್ಪಿ ಸಚಿವರಿಗೆ  ತಿಳಿಸಿದರು.

ಮುಸ್ಲಿಂ ಸಮಾಜದಿಂದ ಹಾಗೂ ಎಲ್ಲಾ ಸಮಾಜದಲ್ಲೂ ಗುರುತಿಸಿಕೊಂಡಂತಹ ಒಬ್ಬ ಪ್ರಭಾವಿ ನಾಯಕರಾಗಿದ್ದು  2023ರ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಜಿಲ್ಲೆಯ 06 ವಿಧಾನಸಭಾ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ  ಕೈಗೊಂಡು 05 ಅಭ್ಯರ್ಥಿಗಳನ್ನು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಧನಂಜಯ ಸಂಘಟನಾ ಕಾರ್ಯದರ್ಶಿ ಸಂಜೀವಿನಿ ಸುರಕ್ಷಾ ಟ್ರಸ್ಟ್  ಇವರು ಸಚಿವರಿಗೆ ಮನವರಿಕೆ ಮಾಡಿದರು.

Advertisement

ಭಾರತ್ ಜೋಡೋ ಯಾತ್ರೆ, ಮೇಕೆದಾಟು ಪಾದಯತ್ರೆ, ಸ್ವತಂತ್ರ ನಡಿಗೆ, ಪ್ರಜಾಧ್ವನಿ ಯಾತ್ರೆಗಳಲ್ಲಿ ಪಾಲ್ಗೊಂಡು ಪಕ್ಷ ನೀಡಿದ ಟಾಸ್ಕ್‌ಗಳಲ್ಲಿ ಶಿಸ್ತಿನ ಸಿಪಾಯಿಯಾಗಿ ಶ್ರಮವಹಿಸಿರುತ್ತಾರೆ. ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ  ತಿಳಿಸಿ ಎಂದು  ಪ್ರಸನ್ನ ಕುಮಾರ್  ಡಿಎಸ್ಎಸ್ ಜಿಲ್ಲಾಧ್ಯಕ್ಷರು ಚಿತ್ರದುರ್ಗ

ಮಧ್ಯ ಕರ್ನಾಟಕದಲ್ಲಿ ಅಲ್ಪಸಂಖ್ಯಾತರ ಪ್ರಭಾವಿ ನಾಯಕರಾಗಿದ್ದಾರೆ. ಕರ್ನಾಟಕ ರಾಜ್ಯದ ಉನ್ನತವಾದ ಒಂದು ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡುವುದರ ಮೂಲಕ ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಅಲ್ಪಸಂಖ್ಯಾತರ ಬಲವರ್ಧನೆಗೆ ಅವಕಾಶ ಮಾಡಿಕೊಡಬೇಕೆಂದು. ಮೊಹಮದ್ ಯಾಸೀನ್  ಎಸ್,ನಗರ ಅಧ್ಯಕ್ಷರು ಕಾರ್ಮಿಕ ವಿಭಾಗ ಚಿತ್ರದುರ್ಗ

ಈ ಸಂದರ್ಭದಲ್ಲಿ  ಟಿಪ್ಪು ಖಾಸೀಂ ಅಲಿ  ರಾಜ್ಯ ಅಧ್ಯಕ್ಷರು ಟಿಪ್ಪು ಸುಲ್ತಾನ್ ಸಂಘಟನಾ ಕರ್ನಾಟಕ , ಮಹಬೂಬಾಕಾನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೊಫೆಷನಲ್ ಸೇಲ್ ಚಿತ್ರದುರ್ಗ, ಜಾಕಿರ್ ಹುಸೇನ್ ರಾಜು ಉಪಾಧ್ಯಕ್ಷರು ಐ ಎನ್ ಟಿ ಯು ಸಿ ಸೆಲ್ ಕರ್ನಾಟಕ, ಶೇಕ್ ಸಾಧಿಕ್ ಜಿಲ್ಲಾ ಅಲ್ಪಸಂಖ್ಯಾತರ ಡಿಎಸ್ಎಸ್ ಅಧ್ಯಕ್ಷರು ಚಿತ್ರದುರ್ಗ, ಮಹಮ್ಮದ್ ವಾಸಿಮ್ ನಗರ ಕಾರ್ಯಧ್ಯಕ್ಷರು ಕಾರ್ಮಿಕರ ಚಿತ್ರದುರ್ಗ ಇವರು ಪಾಲ್ಗೊಂಡಿದ್ದರು.

Advertisement
Tags :
Appoint as PresidentbengaluruchitradurgaRequest of Leaderssuddionesuddione newsಅಧ್ಯಕ್ಷರನ್ನಾಗಿ ನೇಮಿಸಿಚಿತ್ರದುರ್ಗಬೆಂಗಳೂರುಮುಖಂಡರ ಮನವಿಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article