Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಹಿಂದೂ ಧರ್ಮದ ಸಂಸ್ಕೃತಿಗೆ ಧಕ್ಕೆ ತರುವ ಹೊಸ ವರ್ಷದ ಪಾರ್ಟಿಗಳಿಗೆ ಅನುಮತಿ ಬೇಡ : ವಿಶ್ವ ಹಿಂದೂ ಪರಿಷದ್ ಒತ್ತಾಯ

06:58 PM Dec 29, 2023 IST | suddionenews
Advertisement

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.29 : ಜಿಲ್ಲೆಯಲ್ಲಿ ಹೊಸ ವರ್ಷದ ಆಚರಣೆಯ ನೆಪದಲ್ಲಿ ಹಿಂದೂ ಧರ್ಮದ ಸಂಸ್ಕೃತಿಗೆ ಧಕ್ಕೆ ತರುವ ಪಾರ್ಟಿಗಳಿಗೆ ಅನುಮತಿಯನ್ನು ನೀಡಬಾರದೆಂದು ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳ ಕಾರ್ಯಕರ್ತರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದರು.

Advertisement

ನಗರದ ತುರುವನೂರು ರಸ್ತೆಯಲ್ಲಿರುವ ಜಿಲ್ಲಾ ಪೊಲೀಸ್ ಕಚೇರಿಗೆ ತರಳಿ ಎಸ್ ಪಿ ಯವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಡಿಸೆಂಬರ್ 31 ರ ರಾತ್ರಿ ಜಿಲ್ಲೆಯಲ್ಲಿ ಹೊಸ ವರ್ಷದ ಆಚರಣೆಯ ಹೆಸರಿನಲ್ಲಿ ಕೆಲವು ಹೋಟೆಲ್‍ಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ಮಾದಕ ದ್ರವ್ಯಗಳು, ನೃತ್ಯ ಪಾರ್ಟಿಗಳು, ಡಿ.ಜೆ. ಪಾರ್ಟಿಗಳು ನಡೆಯುವ ಅವಕಾಶವಿದ್ದು, ಈ ರೀತಿಯ ಪಾರ್ಟಿಗಳಲ್ಲಿ ಯುವಕ ಯುವತಿಯರು ಭಾಗವಹಿಸಿ ಅಸಭ್ಯವಾಗಿ ವರ್ತಿಸಿ ಹಿಂದೂ ಸಂಸ್ಕೃತಿಗೆ ದಕ್ಕೆ ತರುವಂತಹ ಕೆಲಸ ನಡೆಯಬಹುದು.

Advertisement

ಇಂತಹ ಕಾರ್ಯಕ್ರಮಗಳಲ್ಲಿ ಯುವಕರು
ಮಧ್ಯಪಾನ, ಗಾಂಜಾ ಸೇವನೆ ಮಾಡಿ ಸಾರ್ವಜನಿಕ ಸ್ಥಳಗಳಲ್ಲಿ ಕೂಗಾಡುವುದು, ಗಲಾಟೆ ಮಾಡುವುದು ತೊಂದರೆ ನೀಡುವಂತಹ ಘಟನೆಗಳು ನಡೆಯುತ್ತಿದೆ. ಮತ್ತು ಮಧ್ಯಪಾನ ಸೇವನೆಯಿಂದ ಅತೀ ವೇಗವಾಗಿ ವಾಹನ ಚಲಾವಣೆ ಮಾಡುವುದು, ವೀಲಿಂಗ್ ಮಾಡುವುದು ಹೀಗೆ ಸಾರ್ವಜನಿಕರಿಗೆ ತೊಂದರೆ ನೀಡುವಂತಹ ಸಂಭವ ಇರುತ್ತದೆ. ಈ ರೀತಿಯ ಸಂದರ್ಭದಲ್ಲಿ ಅಪಘಾತಗಳಾಗಿರುವ ಉದಾಹರಣೆಗಳಿವೆ.

ಹಿಂದೂ ಧರ್ಮದ ಸಂಸ್ಕøತಿಗೆ ಧಕ್ಕೆ ತರುವ ಇಂತಹ  ಯಾವುದೇ ರೀತಿಯ ಪಾರ್ಟಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆ ನೀಡುವಂತಹ ಕಾರ್ಯಕ್ರಮಗಳಿಗೆ ಅನುಮತಿ ಕೊಡಬಾರದೆಂದು ವಿಶ್ವ ಹಿಂದೂ ಪರಿಷದ್ ನ ಜಿಲ್ಲಾ ಕಾರ್ಯದರ್ಶಿ ಪಿ.ರುದ್ರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಪಿ.ರುದ್ರೇಶ್ ಜಿಲ್ಲಾ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್,  ಕೇಶವ್ ಜಿಲ್ಲಾ ಸಹ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್, ರಂಗನಾಥ್ ನಗರ ಸಹ ಕಾರ್ಯದರ್ಶಿ ವಿಶ್ವ ಹಿಂದೂ ಪರಿಷದ್. ಕಾರ್ಯಕರ್ತರಾದ ರೇಣುಸ್ವಾಮಿ, ಸುರೇಶ್, ತೇಜಸ್, ಗುರುರಾಜ್ ಇದ್ದರು.

Advertisement
Tags :
chitradurgaNew year partiessuddioneVishwa Hindu Parishadಅನುಮತಿ ಬೇಡಚಿತ್ರದುರ್ಗವಿಶ್ವ ಹಿಂದೂ ಪರಿಷದ್ಸುದ್ದಿಒನ್ಹಿಂದೂ ಧರ್ಮದ ಸಂಸ್ಕೃತಿಹೊಸ ವರ್ಷದ ಪಾರ್ಟ
Advertisement
Next Article