ತುಮಕೂರು ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿ ಯಾರು ? ಸಚಿವ ರಾಜಣ್ಣ ಹೇಳಿದ್ದೇನು ?
ತುಮಕೂರು: ನಾಳೆ 28 ಸಚಿವರು ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಬಗ್ಗೆ ಸಹಕಾರಿ ಸಚಿವ ಕೆ ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, 28 ಕ್ಷೇತ್ರಗಳ ಆಯ್ಕೆಯ ಬಗ್ಗೆ ಅಭಿಪ್ರಾಯವನ್ನು ಕೇಳುವುದಕ್ಕೆ, ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಗೆಲ್ಲುವಂತ ಅಭ್ಯರ್ಥಿಗಳ ಆಯ್ಕೆ ಮಾಡುವುದಕ್ಕೆ ತೀರ್ಮಾನ ಮಾಡಲು ಪೂರ್ವಕವಾಗಿ ಕರೆದಿರುವ ಸಭೆ ಇದು ಎಂದಿದ್ದಾರೆ
ಇದೇ ವೇಳೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ಸ್ಪರ್ಧೆ ಮಾಡುತ್ತೀರ ಎಂಬ ಪ್ರಶ್ನೆಗೆ, ನಾನು ಮೊದಲು ಸ್ಪರ್ಧೆ ಮಾಡಬೇಕು ಅಂತ ಇದ್ದೆ. ಆದರೆ ನಾನು ಇನ್ಯಾವ ಚುನಾವಣೆಯಲ್ಲೂ ನಿಲ್ಲಬಾರದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಅವರು ಹೇಳಿದರೆ ಯಾರಾದರೂ ಸಚಿವರು ನಿಲ್ಲಬೇಕಾದ ಅಗತ್ಯತೆ ಬಿದ್ದರೆ ನಿಲ್ಲಬೇಕಾಗುತ್ತದೆ ಎಂದು ಹೇಳಿದ್ದಾರೆ. ಅದರಲ್ಲಿ ಯಾರನ್ನು ಕಣಕ್ಕೆ ಇಳಿಸುತ್ತಾರೋ ಗೊತ್ತಿಲ್ಲ ಎಂದಿದ್ದಾರೆ.
ಇನ್ನು ಯಾವ ಕ್ಷೇತ್ರದಲ್ಲೂ ಅಭ್ಯರ್ಥಿಗಳ ಫೈನಲ್ ಆಗಿಲ್ಲ. ನಮ್ಮ ಅಧ್ಯಕ್ಷರು ಒಂದು ಸಭೆಯಲ್ಲಿ ಹೇಳಿದ್ದಾರೆ. ಶಿವಮೊಗ್ಗಕ್ಕೆ ಶಿವಣ್ಣ ಅವರನ್ನು ನಿಲ್ಲಿಸಬೇಕು ಅಂತ. ಅವರ ಕುಟುಂಬದ ಗೀತಮ್ಮ ಅವರನ್ನು ನಿಲ್ಲಿಸುತ್ತೀವಿ ಅಂತ ಹೇಳಿದ್ದಾರೆ. ಅದೊಂದು ಅಭ್ಯರ್ಥಿಯ ಫೈನಲ್ ಮಾಡಿದ್ದಾರೆ ಎಂದು ಅಣ್ಣಾವ್ರ ಕುಟುಂಬಕ್ಕೆ ಟಿಕೆಟ್ ಮೀಸಲಿಟ್ಟಿರುವ ಬಗ್ಗೆಯೂ ತಿಳಿಸಿದ್ದಾರೆ.
ಇದೆ ವೇಳೆ ಮೂರು ಡಿಸಿಎಂ ಬೇಡಿಕೆ ಬಗ್ಗೆ ಮಾತನಾಡಿ, ಅಧ್ಯಕ್ಷರು ಹೇಳಿದ ಮೇಲೆ ಅವರ ನಿರ್ಧಾರವೇ ಅಂತಿಮ. ಚುನಾವಣಾ ಹಿತ ದೃಷ್ಟಿಯಲ್ಲಿ ಆದರೆ ಒಳ್ಳೆಯದು. ಮಾಡಲ್ಲ ಎಂದರೆ ಬೇಡ ಬಿಡಿ. ಪಕ್ಷಕ್ಕಾಗಿ ಹೇಳುತ್ತೀನೇ ಹೊರತು ನನ್ನ ವೈಯಕ್ತಿಕ ಅಲ್ಲ. ಕೆಲವು ರಾಜ್ಯದಲ್ಲೂ ಮೂರು ಡಿಸಿಎಂ ಮಾಡಿದ್ದಾರೆ. ಸುರ್ಜೆವಾಲ್ ಅವರು ಬಂದಾಗಲೂ ಸಚಿವರು ಮನವಿ ಮಾಡಿದ್ದಾರೆಂದು ಮೂರು ಡಿಸಿಎಂ ಹುದ್ದೆಗಳ ವಿಚಾರವಾಗಿ ಮಾತನಾಡಿದ್ದಾರೆ.