For the best experience, open
https://m.suddione.com
on your mobile browser.
Advertisement

ಸರ್ಕಾರಕ್ಕೆ ಸೆಡ್ಡು ಹೊಡೆದು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಿದ್ದೇವೆ : ಶಾಸಕ ಎಂ ಟಿ ಕೃಷ್ಣಪ್ಪ

07:44 PM Sep 13, 2024 IST | suddionenews
ಸರ್ಕಾರಕ್ಕೆ ಸೆಡ್ಡು ಹೊಡೆದು ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಿಸಿದ್ದೇವೆ   ಶಾಸಕ ಎಂ ಟಿ ಕೃಷ್ಣಪ್ಪ
Advertisement

Advertisement
Advertisement

ವರದಿ ಮತ್ತು ಫೋಟೋ ಕೃಪೆ
ರಂಗಸ್ವಾಮಿ, ಗುಬ್ಬಿ
ಮೊ : 99019 53364

ಸುದ್ದಿಒನ್, ಗುಬ್ಬಿ, ಸೆಪ್ಟೆಂಬರ್. 13 : ತಾಲೂಕಿನ ಕಲ್ಲೂರು ಗ್ರಾಮದ ಕೆರೆ ಕೋಡಿಬಿದ್ದ ಹಿನ್ನೆಲೆ ತುರುವೇಕೆರೆ ಶಾಸಕ ಎಂ ಟಿ ಕೃಷ್ಣಪ್ಪ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.

Advertisement
Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿ ಈ ಬಾರಿ ಎಲ್ಲಾ ಕೆರೆಗಳು ತುಂಬಿ ಕೋಡಿ ಬೀಳುವ ಹಂತದಲ್ಲಿವೆ. ಕೆರೆ,ಕಟ್ಟೆಗಳು ತುಂಬಿದರೆ ರೈತರು ಸಂತೋಷದಿಂದ ಇರುತ್ತಾರೆ. ಸೇತುವೆ ನಿರ್ಮಾಣ ಜನರ ಬಹಳ ವರ್ಷಗಳ ಬೇಡಿಕೆ ಬೇಡಿಕೆಯಾಗಿತ್ತು. ಅದರಂತೆ ಚಿಕ್ಕ ಕಲ್ಲೂರಿನಲ್ಲಿ 1.50 ಕೋಟಿ ಹಣ ಹಾಕಿ ಕಾಮಗಾರಿ ಪೂರ್ಣಗೊಂಡು ಚಾಲನೆ ನೀಡಲಾಗಿದೆ.

ಸಿ ಎಸ್ ಪುರ ಗ್ರಾಮದಲ್ಲಿ ದೇವೇಗೌಡರ ಸಮುದಾಯ ಭವನವನ್ನು ಉದ್ಘಾಟಿಸಲಾಗುತ್ತಿದೆ. ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಮೂಲಕ ರಾಮನಗರಕ್ಕೆ ನೀರು ಹರಿಸುವ ಕಾಮಗಾರಿಯನ್ನು ಸರ್ಕಾರಕ್ಕೆ ಸೆಡ್ಡು ಹೊಡೆದು ನಿಲ್ಲಿಸಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಇ ಓ ಶಿವಪ್ರಕಾಶ್, ಗ್ರಾ ಪಂ ಅಧ್ಯಕ್ಷೆ ಜುಲೆಖಾಬಿ ಯುಸೆಫ್,ಉಪಾಧ್ಯಕ್ಷೆ ಸುಮಿತ್ರ, ಮುಖಂಡರಾದ ನವೀನ್ ಕುಮಾರ್, ರಾಮಣ್ಣ, ಕಲ್ಲೂರು ಮಂಜುನಾಥ್, ನರಸೇಗೌಡ, ಜಗದೀಶ್,ಕುಮಾರ್, ನರಸಿಂಹ ಮೂರ್ತಿ, ಪಿಡಿಒ ಪ್ರಶಾಂತ್, ಇತರರು ಇದ್ದರು.

Advertisement
Tags :
Advertisement