ವಿಶ್ವಕರ್ಮ ಸಮಾಜ ಪಂಚ ಕಸುಬುಗಳನ್ನು ಜಗತ್ತಿಗೆ ಕೊಡುಗೆ ನೀಡಿದ ಶ್ರೇಷ್ಠ ಸಮಾಜ
ಗುಬ್ಬಿ: ವಿಶ್ವಕರ್ಮ ಸಮಾಜದ ಬೇಡಿಕೆಯಂತೆ ಕಾಳಿಕಾಂಬ ದೇವಾಲಯ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.
ಪಟ್ಟಣದಲ್ಲಿ ವಿಶ್ವಕರ್ಮ ಜಯಂತಿ ಅಂಗವಾಗಿ ನಡೆದ ಪೂರ್ಣ ಕುಂಭ ಉತ್ಸವ ದೊಂದಿಗೆ ಶ್ರೀ ವಿಶ್ವಕರ್ಮ ಕಾಳಿಕಾಂಬ ದೇವರ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಭಾಗಿಯಾಗಿ ಮಾತನಾಡಿ ವಿಶ್ವಕರ್ಮ ಸಮಾಜಕ್ಕೆ ಎಲ್ಲಾ ರಂಗದಲ್ಲಿಯೂ ಬೇಕಾಗುವ ಸವಲತ್ತುಗಳನ್ನು ಒದಗಿಸುವ ಕೆಲಸ ನಮ್ಮ ಸರ್ಕಾರ ಮಾಡಿದ್ದು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಉಪನ್ಯಾಸಕ ಜಗದೀಶ್ ಮಾತನಾಡಿ ವಿಶ್ವಕರ್ಮ ಸಮಾಜವು ಪಂಚ ಕಸುಬುಗಳನ್ನು ಜಗತ್ತಿಗೆ ಪರಿಚಯಿಸಿದ ಶ್ರೇಷ್ಠ ಸಮಾಜ. ವಿಶ್ವದ ಹಲವು ಕಡೆ ಗುಡಿ ಗೋಪುರಗಳಲ್ಲಿ ಶಿಲ್ಪಕಲೆ, ಕಲಾಕೃತಿ ಹಾಗೂ ಹಲವು ದೇವರುಗಳ ಮೂರ್ತಿಗಳನ್ನು ತಮ್ಮ ಕಲೆಯಿಂದ ರಚನೆ ಮಾಡಿದವರು ವಿಶ್ವಕರ್ಮ ಸಮಾಜದವರಾಗಿದ್ದಾರೆ ಎಂದು ತಿಳಿಸಿದರು.
ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಕಮಲನಾಭಾಚರ್ ಮಾತನಾಡಿ ಪಟ್ಟಣದಲ್ಲಿ ವಿಶ್ವಕರ್ಮ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯ ಹಾಗೂ ವಿಶ್ವಕರ್ಮ ಶ್ರೀ ಕಾಳಿಕಾಂಬ ದೇವಾಲಯ ನಿರ್ಮಾಣ ಮಾಡಲು ಎಲ್ಲರೂ ಸಹಕರಿಸಬೇಕು ಎಂದು ತಿಳಿಸಿದರು.
ಜಯಂತೋತ್ಸವದಲ್ಲಿ ಜಿಲ್ಲಾಧ್ಯಕ್ಷ ಹೆಬ್ಬೂರು ನಾಗರಾಜಾಚಾರ್, ಡಾ. ಕೃಷ್ಣಾಚಾರ್, ಎ ಎಸ್ ಐ ರವಿಕುಮಾರ್,ಉಪಾಧ್ಯಕ್ಷ ರಾಜಶೇಖರಚಾರ್, ಪ್ರಕಾಶ್, ಜಗದೀಶ್, ಶಶಿಧರ್, ನಿವೃತ್ತ ಆರ್ ಟಿ ಓ ಕೃಷ್ಣಮೂರ್ತಿ, ವಿವೇಕಾನಂದಾಚಾರ್, ಇನ್ನಿತರದಿದ್ದರು.