ತುಮಕೂರು ಬಿಜೆಪಿ ನಾಯಕಿ ಅರೆಸ್ಟ್ : ಸಿದ್ದರಾಮಯ್ಯ ಪತ್ನಿ, ಸೊಸೆ ಬಗ್ಗೆ ಅಂತದ್ದೇನು ಹೇಳಿದ್ರು..?
ತುಮಕೂರು: ಸಿದ್ದರಾಮಯ್ಯ ಅವರ ಹೆಂಡತಿ ಮತ್ತು ಸೊಸೆಯ ವಿಡಿಯೋವನ್ನು ಇದೇ ರೀತಿ ಮಾಡಿದ್ದರೆ ಅದನ್ನು ಮಕ್ಕಳಾಟ ಮದು ಒಪ್ಪಿಕೊಳ್ಳುತ್ತಾ ಇದ್ರಾ ಎಂದು ಟ್ವೀಟ್ ಮಾಡಿದ್ದ ಬಿಜೆಪಿ ನಾಯಕಿತನ್ನು ಅರೆಸ್ಟ್ ಮಾಡಲಾಗಿದೆ.
ಮುಸ್ಲಿಂ ಯುವತಿಯರು ಹಿಂದೂ ಹುಡುಗಿಯರ ನಗ್ನ ಚಿತ್ರ ವೀಡಿಯೋ ಮಾಡಿದ್ದು ತಮಾಷೆ,ಮಕ್ಕಳಾಟ ಎನ್ನುತ್ತಿರುವ ಕಾಂಗ್ರೆಸ್ ಮತ್ತದರ ಅನುಯಾಯಿಗಳು,
ಅನ್ಯಾಯವಾದ ಹೆಣ್ಣುಮಕ್ಕಳು ಬರೆದಿರುವ ದೂರು ಕೂಡ ನಕಲಿ ಎಂದು ಹೇಳುತ್ತಾರೆಯೇ?😡 pic.twitter.com/5Fb3MvpcPo— ಶಕುಂತಲ ನಟರಾಜ್🪷Shakunthala (@ShakunthalaHS) July 25, 2023
ಉಡುಪಿಯಲ್ಲಿ ನಡೆದ ಹೆಣ್ಣು ಮಕ್ಕಳ ವಿಡಿಯೋ ವಿಚಾರ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಮುಗಿಬಿದ್ದಿದ್ದಾರೆ. ಗೃಹ ಸಚಿವ ಪರಮೇಶ್ವರ್ ಹೇಳಿದ ಹೇಳಿಕೆಗೆ ತಿರುಗೇಟು ನೀಡುತ್ತಿದ್ದಾರೆ. ಬಿಜೆಪಿಯ ನಾಯಕಿ ಶಕುಂತಲ ಕೂಡ ಟ್ವೀಟ್ ಮಾಡಿದ್ದರು.
ಉಡುಪಿಯ ಕಾಲೇಜಿನಲ್ಲಿ “ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ“ ಎಂದು ನಕಲಿ ಸುದ್ದಿ ಸೃಷ್ಟಿಸಿ ಕೋಮು ಪ್ರಚೋದನೆಗೆ ಮುಂದಾಗಿರುವ ಬಿಜೆಪಿ ತೀರ್ಥಹಳ್ಳಿಯಲ್ಲಿ ಹಿಂದೂ ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋ ಚಿತ್ರೀಕರಿಸಿದ ABVP ಅಧ್ಯಕ್ಷನ ಅಸಲಿ ಸುದ್ದಿಯ ಬಗ್ಗೆ ಮೌನ ಮುರಿಯುವುದು ಯಾವಾಗ?
ವಿದ್ಯಾರ್ಥಿನಿಯರ ಮಕ್ಕಳಾಟವನ್ನು ರಾಜಕೀಯದ ಕಳ್ಳಾಟಕ್ಕೆ…
— Karnataka Congress (@INCKarnataka) July 25, 2023
ಮುಸ್ಲಿಂ ಯುವತಿಯರು ಟಾಯ್ಲೆಟ್ ನಲ್ಲಿ ಕ್ಯಾಮೆರಾ ಇಟ್ಟು ಹಿಂದೂ ಹೆಣ್ಣುಮಕ್ಕಳ ವಿಡಿಯೋ ಮಾಡಿದ್ದು ಕಾಂಗ್ರೆಸ್ನವರ ಪ್ರಕಾರ ಮಕ್ಕಳಾಟವಂತೆ. @siddaramaiah ನವರ ಸೊಸೆ or ಹೆಂಡ್ತಿ ಅವ್ರ ವಿಡಿಯೋವನ್ನು ಇದೆ ತರ ಮಾಡಿದ್ರೆ
ಅದನ್ನು ಮಕ್ಕಳಾಟ ಅಂತ ಒಪ್ಕೋತೀರಾ? ಎಂದು ಕೇಳಿದ್ದರು. ಇದೀಗ ಈ ಟ್ವೀಟ್ ವಿರುದ್ಧ ಹೈಗ್ರೌಂಡ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.