For the best experience, open
https://m.suddione.com
on your mobile browser.
Advertisement

ಉದ್ಯೋಗ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ : ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ

05:04 PM Aug 11, 2024 IST | suddionenews
ಉದ್ಯೋಗ ಮತ್ತು ನೀರಾವರಿಗೆ ಹೆಚ್ಚಿನ ಆದ್ಯತೆ   ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ
Advertisement

Advertisement
Advertisement

ಸುದ್ದಿಒನ್, ಗುಬ್ಬಿ, ಆಗಸ್ಟ್.11 : ತಾಲೂಕಿನ ಸಿ ಎಸ್ ಪುರ ಹೋಬಳಿಯ ಮಣ್ಣೇಕುಪ್ಪೆ ಗ್ರಾಮದಲ್ಲಿ ಶ್ರೀ ಮಾರುತಿ ಕಲ್ಯಾಣ ಮಂಟಪ ಉದ್ಘಾಟನಾ ಮಹೋತ್ಸವಕ್ಕೆ ಭಾಗವಹಿಸಿ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿದರು.

ನೀರಾವರಿ ಯೋಜನೆಗಳು ಸಂಪೂರ್ಣಗೊಳ್ಳಬೇಕು.
ಭೂಮಿ ನಂಬಿ ಬದುಕುವ ರೈತರಿಗೆ ಮುಖ್ಯವಾಗಿ ನೀರನ್ನು ಒದಗಿಸಿ ಕೊಡುವ ಕೆಲಸವಾಗಬೇಕು.ನಿರಂತರವಾಗಿ ರೈತರ ಪರ ಹೋರಾಟಗಳು ನಡೆದಿವೆ.ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗದ ಅವಶ್ಯಕತೆ ಇದ್ದು. ಮಕ್ಕಳ ಉದ್ಯೋಗದ ನಿರೀಕ್ಷೆಗೆ ತಕ್ಕಂತೆ ಸರ್ಕಾರಗಳು ಕೆಲಸ ಮಾಡಲಾಗುತ್ತಿಲ್ಲ ಎಂದ ಅವರು,

Advertisement

ನರೇಂದ್ರ ಮೋದಿಯವರಿಗೆ ದೇವೇಗೌಡರ ಮೇಲೆ ಇರುವಂತ ಅಭಿಮಾನ ಮತ್ತು ನನ್ನ ಮೇಲಿರುವ ವಿಶ್ವಾಸಕ್ಕೆ ಜವಾಬ್ದಾರಿಯನ್ನು ನೀಡಿದ್ದಾರೆ. ನನಗೆ ಸಿಕ್ಕಿರುವ ಅವಕಾಶದಲ್ಲಿ ರೈತರ ಬದುಕನ್ನು ಸರಿಪಡಿಸುವುದಕ್ಕೆ ಮತ್ತು ಗ್ರಾಮೀಣ ಭಾಗದ ಜನರಿಗೆ ಉದ್ಯೋಗವನ್ನು ಒದಗಿಸಿಕೊಡುವ ಯೋಜನೆಗಳನ್ನು ರೂಪಿಸಲಾಗುವುದು.ಮುಂದಿನ ದಿನಗಳಲ್ಲಿ ತುಮಕೂರು ಮತ್ತು ಮಂಡ್ಯ ಭಾಗಗಳಲ್ಲಿ ಕೈಗಾರಿಕೆಗಳನ್ನು ಖಾಸಗಿ ಅವರಿಂದ ಸ್ಥಾಪಿಸಲಾಗುವುದು ಎಂದರು.

Advertisement

ಈ ಸಂದರ್ಭದಲ್ಲಿ ಶಾಸಕರಾದ ಎಂ ಟಿ ಕೃಷ್ಣಪ್ಪ , ಸುರೇಶ್ ಗೌಡ, ಸುರೇಶ್ ಬಾಬು, ಮುಖಂಡರಾದ ಬಿಎಸ್ ನಾಗರಾಜು, ನಿಂಗಪ್ಪ, ವೆಂಕಟೇಶ್, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು...

Tags :
Advertisement