ಕನ್ನಡ ಸಾಹಿತ್ಯ ಮತ್ತು ಜನಪದ ಉಳಿಸುವಲ್ಲಿ ಯುವಕರ ಪಾತ್ರ ಬಹು ಮುಖ್ಯ : ಜಾನಪದ ಗಾಯಕ ಮೋಹನ್ ಕುಮಾರ್
ತುಮಕೂರು, ಜುಲೈ. 23 : ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾಡುಗೊಲ್ಲ ಸಾಂಸ್ಕೃತಿಕ ಟ್ರಸ್ಟ್,(ರಿ) ಕುರಿಕೆಂಪೇನಹಳ್ಳಿ, ತನುಶ್ರೀ ಸಾಂಸ್ಕೃತಿಕ ಕಲಾ ವೇದಿಕೆ,(ರಿ) ಚಿತ್ರದುರ್ಗ, ರಂಗತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ (ರಿ) ಬಳ್ಳಾರಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ತುಮಕೂರು ಇವರ ಸಹಯೋಗದೊಂದಿಗೆ " ನಾಲ್ಕ ನೇಯ ರಾಜ್ಯ ಕಲಾ ಸಮ್ಮೇಳನ 2024 ರ ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ರಾಜ್ಯ ಮಟ್ಟದ ಕವಿ ಗೋಷ್ಠಿ ಕಾರ್ಯಕ್ರಮವನ್ನು ಇಂದು (ಮಂಗಳವಾರ) ಹಮ್ಮಿಕೊಳ್ಳಲಾಗಿತ್ತು.
ಗಾಯಕರಾದ ಶ್ರೀ ಮೋಹನ್ ಕುಮಾರ್ ಮತ್ತು ಮುತ್ತು ರಾಜ್ ಕಂಸಾಳೆ ತಂಡದವರು ನಾಡಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಶಿರಾ ತಾಲ್ಲೂಕಿನ ಜನಪ್ರಿಯ ಶಾಸಕರು ಆದ ಸನ್ಮಾನ್ಯ ಶ್ರೀ ಟಿ.ಬಿ ಜಯಚಂದ್ರ ಮತ್ತು ಖ್ಯಾತ ಜಾನಪದ ಮತ್ತು ಚಲನಚಿತ್ರ ಗಾಯಕರು ಆದ ಶ್ರೀಯುತ ಮೋಹನ್ ಕುಮಾರ್ ಇನ್ನಿತರೆ ವೇದಿಕೆ ಮೇಲಿರುವ ಎಲ್ಲ ಗಣ್ಯ ಮಾನ್ಯರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ತನುಶ್ರೀ ಪ್ರಕಾಶನ ಸಂಸ್ಥೆಯ ಪ್ರಕಾಶಕರು ಹಾಗೂ ರಾಜ್ಯಾಧ್ಯಕ್ಷರು ಆದ ಶ್ರೀಯುತ ರಾಜು ಎಸ್, ಸೋಲೆನಹಳ್ಳಿ ಇವರು ಪ್ರಾಸ್ತಾವಿಕ ನುಡಿಯಲ್ಲಿ ಸಂಸ್ಥೆಯ ನಡೆದು ಬಂದು ಹಾದಿ ಮತ್ತು ಬೆಳೆವಣಿಗೆ ಸಂಸ್ಥೆಯ ಎಲ್ಲ ಬಗೆಯ ಜನಪರ ಕಾರ್ಯಗಳನ್ನು ಬಗ್ಗೆ ತಿಳಿಸಿದರು.
ಶಾಸಕರು ಟಿ.ಬಿ ಜಯಚಂದ್ರ ರವರು ಮಾತನಾಡಿ ನಮ್ಮ ನಾಡಿನ ಕಲೆ ಸಾಹಿತ್ಯ ಸಂಸ್ಕೃತಿ, ಜನಪದ ಕಲೆಗಳು ಉಳಿಯಬೇಕಾದರೆ ಸಮಾಜದಲ್ಲಿ ಕವಿಗಳು ಮತ್ತು ಸಾಹಿತಿಗಳು ಬರೆಯುವಂತಹ ಪುಸ್ತಕಗಳನ್ನು ಕೊಂಡು ಹೆಚ್ಚು ಹೆಚ್ಚು ಓದಬೇಕು ಅಲ್ಲದೆ ಇಂತಹ ಸಾಹಿತ್ಯ ವೇದಿಕೆಗಳ ಕಾರ್ಯಗಳಿಂದ ನಮ್ಮ ಕನ್ನಡ ನಾಡಿನ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಶಾಶ್ವತವಾಗಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.
ರಂಗತಿಲಕ ಸಾಂಸ್ಕೃತಿಕ ಕಲಾ ಟ್ರಸ್ಟ್ ಅಧ್ಯಕ್ಷರಾದ ಡಿ.ಜೆ ತಿರುಮಲರವರು ತಮ್ಮ ಆಶಯ ನುಡಿಯಲ್ಲಿ ತಮ್ಮ ಸಂಸ್ಥೆಯು ನಡೆದು ಬಂದ ಹಾದಿ ಮತ್ತು ಬೆಳೆವಣಿಗೆ ಹಾಗೂ ಸಾಧನೆ ಬಗ್ಗೆ ತಿಳಿಸಿದರು.
ಸಮಾಜ ಸೇವಕರು ಪರಿಸರ ಪ್ರೇಮಿ ಹಾಗೂ ಸಾಹಿತಿಗಳು ಆದ ಶ್ರೀಮತಿ ಬಸಮ್ಮ ಹಿರೇಮಠ್ ಸಮ್ಮೇಳನಾಧ್ಯಕ್ಷತೆ ವಹಿಸಿ ಮಾತನಾಡಿ ಬಸವಣ್ಣನವರ ವಚನಗಳು ಪ್ರಸ್ತುತ ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಅಂತೆಯೇ ಪ್ರತಿಯೊಬ್ಬ ವ್ಯಕ್ತಿಯು ಕಲೆ ಸಾಹಿತ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ ಬರೆಯುವ ಮತ್ತು ಓದುವ ಹವ್ಯಾಸ ಬೆಳೆಸಿಕೊಂಡು ಸಮಾಜದಲ್ಲಿ ಸುಸಂಸ್ಕೃತ ವ್ಯಕ್ತಿಯಾಗಿ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ನಂತರ ರಾಜ್ಯ ಮಟ್ಟದ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿದ್ದ ಡಾ.ಶಫೀವುಲ್ಲಾ ರವರು ಮಾತನಾಡಿ ಇತ್ತೀಚಿನ ಯುವಕವಿಗಳಲ್ಲಿ ಗೋಷ್ಠಿಗಳಿಗೆ ಭಾಗವಹಿಸಿ ಅವರ ಕವನ ವಾಚನ ಮುಗಿದ ನಂತರ ಬೇಗ ಹೋಗುವ ಕಾತುರದಲ್ಲಿ ಕಾಯುತ್ತಿರುತ್ತಾರೆ ಹಾಗೆ ಬೇರೆಯವರ ಕವಿತೆಗಳನ್ನು ಕೇಳಿಸಿಕೊಳ್ಳುವ ತಾಳ್ಮೆ,ವ್ಯವದಾನವನ್ನು ಕಳೆದುಕೊಂಡಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಲ್ಲಿಕಾರ್ಜುನ್ ತಾಳ್ಯ ರವರು ಮಾತನಾಡಿ ಕವಿಗಳು ಕವನ ವಾಚನ ಮಾಡುವಾಗ ನಿಯಮಗಳನ್ನು ಪಾಲಿಸಬೇಕು ಮೊಬೈಲ್ ನೋಡಿಕೊಂಡು ಕವನ ವಾಚನ ಮಾಡುವ ಕೆಟ್ಟ ಅಭ್ಯಾಸವನ್ನು ಕೈ ಬಿಡಬೇಕು ಎಂದು ಸಲಹೆ ನೀಡಿದರು. ಹಾಗೆ ಸಾಹಿತಿಗಳು ಕಲಾವಿದರಾದ ಡಾ.ಶೇಕ್ ಮೊಹಮದ್ ಅಲಿ ರವರು ಮಾತನಾಡಿ ಎದ್ದವರ , ಬೆಳೆದವರ, ಸಾಧಿಸಿದ ವ್ಯಕ್ತಿಗಳ ಬಗ್ಗೆ ಕವಿತೆಗಳನ್ನು ಬರೆಯುವುದಕ್ಕಿಂತ ಜೀವನದಲ್ಲಿ ನೊಂದು ಬೆಂದವರ , ಬಿದ್ದವರ , ಶೋಷಿತರ ಬಗ್ಗೆ ಕವಿತೆಗಳನ್ನು ಬರೆಯುವುದು ಉತ್ತಮ ಎಂದರು,
ಶಿಕ್ಷಣ ತಜ್ಞರು ಹಾಗೂ ವರ್ಧಮಾನ್ ಪಬ್ಲಿಕ್ ಸ್ಕೂಲ್ ಛೇರ್ಮನ್ ಶ್ರೀ ಸಂಜಯ್ ಎಸ್.ಗೌಡ ರವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ರಾಜ್ಯಮಟ್ಟದ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರಧಾನಮಾಡಿ ನೆನಪಿನ ಕಾಣಿಕೆ ನೀಡಿ ಗೌರವಿಸಿ ಇಂತಹ ನಿಮ್ಮ ಸಾಧನೆಗಳು ಮತ್ತು ಸೇವೆಗಳು ನಮ್ಮ ಕನ್ನಡ ನಾಡು ನುಡಿ,ಜಲ ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಬೆಳೆಸಿ ಉಳಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಪ್ರಶಂಸಿಸಿದರು.
ಈ ಕಾರ್ಯಕ್ರಮದಲ್ಲಿ ತುಮಕೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಶ್ರೀ ರವಿಕುಮಾರ್.ಡಿ.ಎಂ,ಜಾನಪದ ವಿದ್ವಾಂಸರಾದ ಡಾ. ಚಿಕ್ಕಣ್ಣ ಯಣ್ಣೆ ಕಟ್ಟೆ, ಬೆಳಕು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾದ ಅಣ್ಣಪ್ಪ ಮೇಟಿ ಗೌಡ, ಲಕ್ಷ್ಮಿ ಹೊಸಕೋಟೆ, ಸಮಾಜ ಕಲ್ಯಾಣಾಧಿಕಾರಿಗಳು ಆದ ಶ್ರೀಯುತ ಯತೀಶ್ ಸರ್, ಸಮಾಜ ಸೇವಕರಾದ ರೇವಣಸಿದ್ದಯ್ಯ ಎಂ.ಎನ್,
ಘಟಪರ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಕೆ.ಬಿ ರವಿಕುಮಾರ್, ವಿಚಾರ ಮಂಟಪ ವೇದಿಕೆಯ ಅಧ್ಯಕ್ಷರಾದ ಶ್ರೀ ವರುಣ್ ರಾಜ್, ಹಿರಿಯ ಸಾಹಿತಿಗಳಾದ ಶ್ರೀಮತಿ ಸಾವಿತ್ರಿ.ಕೆ.ಬಿ, ಕವಯಿತ್ರಿ ಸಿಂಚನ ಜಿ.ಎನ್ ಗೊರಹಳ್ಳಿ,ಮತ್ತು ನೇತ್ರಾವತಿ ನೆಲ್ಲಿಕಟ್ಟೆ, ಲೀಲಾ ಗುರುರಾಜ್, ಡಾ.ಬಸವರಾಜ್ ಪೂಜಾರ್ ಕೋಡಿಹಳ್ಳಿ,ಯುವ ಕವಿಗಳಾದ ಭಿಮೇಶ್ ತಳವಾರ್ ಮಂಗನಹಳ್ಳಿ, ಬಸವರಾಜ್ ಕರುವಿನ ಬಸವನಾಳು, ಚಿದಾನಂದ ಮೂರ್ತಿ ನರ್ಲಹಳ್ಳಿ, ಉಪಸ್ಥಿರಿದ್ದರು. ಮಿಮಿಕ್ರಿ ಹಾಸ್ಯ ಕಲಾವಿದ ಉದಯ್ ಬಡಿಗೇರ್ ಮೈದೂರು ನಿರೂಪಿಸಿದರು,
ಶಿವಮೂರ್ತಿ.ಟಿ ಕೋಡಿಹಳ್ಳಿ ಸ್ವಾಗತಿಸಿದರು, ಸುಹಾಸ್ ಎಂ.ಕನ್ನಾಯಕನ ಹಳ್ಳಿ ವಂದಿಸಿದರು. ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು ತುಮಕೂರಿನ ಕಂಸಾಳೆ ನೃತ್ಯವು ವೀಕ್ಷಕರ ಮನಸೂರೆ ಗೊಳ್ಳುವಂತಿತ್ತು , ಮೂವತ್ತಕ್ಕೂ ಹೆಚ್ಚು ಕವಿಗಳು ಕವನ ವಾಚನ ಮಾಡಿದರು, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.