ಹೇಮಾವತಿ ಲಿಂಕ್ ಕೆನಾಲ್ ಗೆ ವಿರೋಧ : ಇಂದು ತುಮಕೂರು ಬಂದ್
ತುಮಕೂರು: ಹೇಮಾವತಿ ಲಿಂಕ್ ಕೆನಾಲ್ ವಿರೋಧಿಸಿ ಇಂದು ತುಮಕೂರು ಬಂದ್ ನಡೆಸುತ್ತಿದ್ದಾರೆ. ಇಂದು ಬೆಳಗ್ಗೆಯಿಂದಾನೇ ಪ್ರತಿಭಟನೆ ಶುರುವಾಗಿದೆ. ನಿನ್ನೆಯೆಲ್ಲಾ ಶಾಸಕ ಸುರೇಶ್ ಗೌಡರು ಕೂಡ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇಂದು ತುಮಕೂರು ಬಂದ್ ಗೆ ಕರೆ ನೀಡಲಾಗಿದೆ. ಹೋರಾಟ ಸಮಿತಿ ಬಂದ್ ಮಾಡಲು ಕರೆ ನೀಡಿದ್ದು, ಅದರಂತೆ ಕಾರ್ಯಕರ್ತರು ಕೂಡ ಬೀದಿಗೆ ಇಳಿದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿದ್ದಾರೆ.
ಇಂದಿನ ಬಂದ್ ಗೆ ವಿವಿಧ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಮಠಾಧೀಶರು, ವರ್ತಕರು, ವಕೀಲ ಸಂಘದವರು ಕೂಡ ಬೆಂಬಲ ಘೋಷಿಸಿವೆ. ಇಂದು ಹತ್ತು ತಾಲೂಕುಗಳಲ್ಲಿ ಬಂದ್ ಗೆ ಸಿದ್ಧತೆ ಮಾಡಿಕೊಂಡಿದ್ದು, ಆಯಾ ತಾಲೂಕು ಕೇಂದ್ರದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ.
ತುಮಕೂರಿನ ಟೌನ್ ಹಾಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಲಿದ್ದಾರೆ. ಜಿಲ್ಲೆಯಾದ್ಯಂತ ಪೊಲೀಸ್ ಇಲಾಖೆ ಬಿಗಿ ಭದ್ರತೆ ನೋಡಿಕೊಂಡಿದೆ. ಗುಬ್ಬಿ, ತುರುವೆಕೆರೆ, ತುಮಕೂರಿನಲ್ಲಿ ಬಂದ್ ತೀವ್ರ ಸ್ವರೂಪ ಪಡೆಯಬಹುದು. ಹೀಗಾಗಿ ಹೇಮಾವತಿ ನಾಲಾ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿದ್ದಾರೆ.
ತುಮಕೂರು ಬಂದ್ ಹಿನ್ನೆಲೆ ಸ್ವಯಂಪ್ರೇರಿತ ಬೆಂಬಲ ನೀಡಲಾಗಿದೆ. ಆಸ್ಪತ್ರೆ, ಮೆಡಿಕಲ್ ಶಾಪ್, ಆಂಬ್ಯುಲೆನ್ಸ್ ಸೇವೆ ಇರಲಿದೆ. ಅಂಗಡಿ ಮುಂಗಟ್ಟುಗಳು ಬಹುತೇಕ ಮುಚ್ಚಲಾಗಿದೆ. ಆದರೆ ಸರ್ಕಾರಿ ಶಾಲೆ, ಸಾರಿಗೆ ವ್ಯವಸ್ಥೆಗಳು ಕೂಡ ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ರೂಪ್ಸಾ ಬಂದ್ ಗೆ ಬೆಂಬಲ ನೀಡಿದ್ದು, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹೇಮಾವತಿ ನದಿಯ ಗೋರೂರು ಡ್ಯಾಮ್ ನಿರೀಗಾಗಿ ತುಮಕೂರು ಜಿಲ್ಲೆ ಹಾಗೂ ರಾಮನಗರ ಜಿಲ್ಲೆಯ ನಡುವೆ ಕಿತ್ತಾಟ ಶುರುವಾಗಿದೆ.