ಸಿದ್ದರಾಮಯ್ಯರ ವಿರುದ್ಧ ಧಿಕ್ಕಾರ ಕೂಗಿದವರಿಗೆ ಒಂದು ಲಕ್ಷ ಬಹುಮಾನ : ತುಮಕೂರು ಶಾಸಕ ಸುರೇಶ್ ಗೌಡ..!
ತುಮಕೂರು: ಸಿಎಂ ಸಿದ್ದರಾಮಯ್ಯ ಅವರು ನಾನಾ ಅಭಿವೃದ್ಧಿಗಳಿಗೆ ಚಾಲನೆ ನೀಡುವುದಕ್ಕೆ ಡಿಸೆಂಬರ್2 ರಂದು ತುಮಕೂರಿಗೆ ಬರ್ತಾ ಇದಾರೆ. ಈ ವೇಳೆ ಅವರ ವಿರುದ್ಧ ಧಿಕ್ಕಾರ ಕೂಗುವುದಕ್ಕೆ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅವರು ಜನ ರೆಡಿ ಮಾಡಿದ್ದಾರೆ. ಇಂಥದ್ದೊಂದು ಆರೋಪದ ಆಡೊಯೋ ಎಲ್ಲೆಡೆ ವೈರಲ್ ಆಗಿದೆ. ಮಾಜಿ ಶಾಸಕರಾದ ಗೌರಿ ಶಂಕರ್ ಈ ಆಡಿಯೋ ರಿಲೀಸ್ ಮಾಡಿದ್ದಾರೆ.
ಸುರೇಶ್ ಗೌಡರದ್ದೇ ಎನ್ನಲಾದ ಈ ಆಡಿಯೋದಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಧಿಕ್ಕಾರ ಕೂಗಿದರೆ ಅವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ಆ ಆಡಿಯೋದಲ್ಲಿ ಹೇಳಿದ್ದಾರೆ. ಅಷ್ಟೇ ಅಲ್ಲ ಬಸ್ ನಲ್ಲಿ ಜನ ಹೋಗಬೇಕು, ಸಿದ್ದರಾಮಯ್ಯ ಮುಂದೆ ಕಪ್ಪು ಬಾವುಟ ಪ್ರದರ್ಶನ ಮಾಡಬೇಕು. ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿ ಎಂದು ಪ್ತಚೋದನೆ ನೀಡರುವುದು ಆ ಆಡಿಯೋದಲ್ಲಿ ಕೇಳಿಸುತ್ತಾ ಇದೆ. ಈ ಆಡಿಯೋ ಇದೀಗ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ.
ಕಾಂಗ್ರೆಸ್ ನಾಯಕ ಗೌರಿ ಶಂಕರ್ ಇಂದು ಸುದ್ದಿಗೋಷ್ಟಿ ನಡೆಸಿ, ಈ ಆಡಿಯೋವನ್ನು ಕೇಳಿಸಿದ್ದಾರೆ. ಶಾಸಕ ಸುರೇಶ್ ಗೌಡ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ಸಿಎಂ ಬಂದಾಗ ಪ್ರತಿಭಟನೆ ನಡೆಸುವಂತೆ ಎತ್ತಿ ಕಟ್ಟುತ್ತಿದ್ದಾರೆ. ಆರ್ ಎಸ್ ಎಸ್ ಇದೇನಾ ಹೇಳಿಕೊಟ್ಟಿರುವುದು..? ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು, ತನಿಖೆ ನಡೆಯಬೇಕು. ಪ್ರತಿಭಟನೆ ಮಾಡಲಿ ಅದು ಎಲ್ಲರ ಹಕ್ಕು. ಆದರೆ ಪ್ರತಿಭಟನೆ ಮಾಡುವುದಕ್ಕೇನೆ ಹಣ ನೀಡುವುದು ದೊಡ್ಡ ತಪ್ಪು ಎಂದು ಗೌರಿ ಶಂಕರ್ ಕಿಡಿಕಾರಿದ್ದಾರೆ.