Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸಚಿವ ಮಧು ಬಂಗಾರಪ್ಪ ಕಾರಿಗೆ ತುಮಕೂರಿನಲ್ಲಿ ಲಾರಿ ಡಿಕ್ಕಿ

11:26 AM Dec 28, 2023 IST | suddionenews
Advertisement

 

Advertisement

ಸುದ್ದಿಒನ್, ತುಮಕೂರು, ಡಿಸೆಂಬರ್. 28 : ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ತುಮಕೂರಿನ ಕ್ಯಾತಸಂದ್ರದ ಬಳಿ ಈ ದುರ್ಘಟನೆ ನಡೆದಿದೆ. ನಿನ್ನೆ ರಾತ್ರಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ. ಸದ್ಯ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ.

ಸಚಿವ ಮಧು ಬಂಗಾರಪ್ಪ ಅವರಿದ್ದ ಕಾರು ಬೆಂಗಳೂರಿನ ಕಡೆಗೆ ಚಲಿಸುತ್ತಿತ್ತು. ಈ ವೇಳೆ ತಡರಾತ್ರಿ ಅಪಘಾತವಾಗಿದೆ. ಕ್ಯಾತ್ಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಕಾರಿನ ಮುಂಭಾಗ ಅಪಘಾತದಿಂದ ಹಾನಿಯಾಗಿದೆ.

Advertisement

ಈ ಸಂಬಂಧ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯಾರಿಗೂ ಯಾವುದೇ ರೀತಿಯ ಪ್ರಾಣಪಾಯವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.

Advertisement
Tags :
carfeaturedMinister Madhu Bangarappasuddionetumakurutumkurಕಾರುಡಿಕ್ಕಿತುಮಕೂರುಲಾರಿಸಚಿವ ಮಧು ಬಂಗಾರಪ್ಪಸುದ್ದಿಒನ್
Advertisement
Next Article