ಪರಮೇಶ್ವರ್ ಸಿಎಂ ಆಗ್ತಾರೆ ಅನ್ನೋ ವಿಚಾರ ಅಸತ್ಯವಾಗಲ್ಲ : ಕೆ ಎನ್ ರಾಜಣ್ಣ
ತುಮಕೂರು: ಸಚಿವ ಕೆ ಎನ್ ರಾಜಣ್ಣ ಆಗಾಗ ಕೆಲವೊಂದು ವಿಚಾರಗಳನ್ನು ಹೇಳಿ ಸುದ್ದಿಯಾಗುತ್ತಲೆ ಇರುತ್ತಾರೆ. ಇದೀಗ ಸಚಿವ ಜಿ ಪರಮೇಶ್ವರ್ ಸಿಎಂ ಆಗ್ತಾರೆ ಎಂಬ ವಿಚಾರದಲ್ಲಿ ಮತ್ತೆ ಸ್ಪಷ್ಟನೆ ನೀಡಿದ್ದಾರೆ.
ಜಿ ಪರಮೇಶ್ವರ್ ಸಿಎಂ ಆಗುವ ವಿಚಾರದಲ್ಲಿ ಮಾತನಾಡಿದ ಅವರು, ನನ್ನ ಜೀವಮಾನದಲ್ಲಿ ಏನು ಹೇಳಿದ್ದೇನೋ ಅದ್ಯಾವುದು ಸುಳ್ಳಾಗಿಲ್ಲ. ನಾನು ಹೇಳಿದ ಯಾವ ಸತ್ಯವೂ ಅಸತ್ಯವಾಗಿಲ್ಲ. ಡಾ.ಪರಮೇಶ್ವರ್ ಸಿಎಂ ಆಗ್ತಾರೆ ಎಂಬ ವಿಚಾರವೂ ಅಸತ್ಯವಾಗಲ್ಲ. ಸಿದ್ದರಾಮಯ್ಯ ಅವರು ಯಾವಾಗ ಬಿಡುತ್ತಾರೋ ಅಂದು ಜಿ ಪರಮೇಶ್ವರ್ ಸಿಎಂ ಆಗುತ್ತಾರೆ ಎಂದಿದ್ದಾರೆ. ಇದರ ಜೊತೆಗೆ ನಾನು ಸಚುವನಾಗಿರೋದೆ ಸಾಕು ಡಿಸಿಎಂ ಹುದ್ದೆ ಬೇಡ ಎಂದೇ ಹೇಳಿದ್ದಾರೆ.
ದಲಿತ ಸಿಎಂ ಎಂಬ ವಿಚಾರ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲಾ ಚರ್ಚೆಗೆ ಬರುತ್ತೆ. ಸಾಕಷ್ಟು ಒತ್ತಡಗಳು ಕೇಳಿ ಬರುತ್ತವೆ. ಆದರೆ ದಲಿತ ಸಿಎಂ ಇನ್ನು ಚಾಲ್ತಿಗೆ ಬಂದಿಲ್ಲ. ಇದೀಗ ಕೆ ಎನ್ ರಾಜಣ್ಣ ನೀಡಿದ ಸ್ಪಷ್ಟನೆ ಹಲವು ಚರ್ಚೆಗಳಿಗೆ ಗ್ರಾಸವಾಗಬಹುದು. ಪರಮೇಶ್ವರ್ ಅವರಿಗೂ ಸಿಎಂ ಆಗಬೇಕಮಬ ಅಭಿಲಾಷೆ ಇದೆ. ಇದೆ ಬೆನ್ನಲ್ಲೇ ರಾಜಣ್ಣ ಕೂಡ ಪರಮೇಶ್ವರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿಯೇ ಸಿಎಂ ಹುದ್ದೆಗಾಗಿ ಕಿತ್ತಾಟ ನಡೆಯುತ್ತಿದೆ. ಇದರ ಮಧ್ಯೆ ದಲಿತ ಸಿಎಂ ವಿಚಾರ ಯಾವ ರೀತಿ ವಾಲುತ್ತೋ ಗೊತ್ತಿಲ್ಲ.