Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ನೂತನ ಶಾಲಾ ಕಟ್ಟಡ ಉದ್ಘಾಟನೆ ಹಾಗೂ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

07:23 PM Aug 24, 2024 IST | suddionenews
Advertisement

ಸುದ್ದಿಒನ್, ಗುಬ್ಬಿ, ಆಗಸ್ಟ್. 23 : ದೇಶ ಅಭಿವೃದ್ಧಿ ಪಥದಲ್ಲಿ ಸಾಗಬೇಕಾದರೆ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಕೆ ಎಸ್ ಆರ್ ಟಿ ಸಿ ನಿಗಮ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

Advertisement

ತಾಲೂಕಿನ ಹೊದಲೂರು ಗ್ರಾಮದ ಸರ್ಕಾರಿ ಶಾಲೆ ನೂತನ ಕಟ್ಟಡ ಉದ್ಘಾಟನೆ ಹಾಗೂ ಹಳೆ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕವಾಗಿ ಎಲ್ಲ ವಿದ್ಯಾವಂತರಾದರೆ ಉತ್ತಮ ಸಮಾಜ ಕಟ್ಟಬಹುದು.

ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ದೇಶ ಮಾತ್ರ ಅಭಿವೃದ್ಧಿ ಹೊಂದಲು ಸಾಧ್ಯ ವಾಗುತ್ತದೆ. ಉತ್ತಮ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯಲ್ಲಿ ಸಿಗುತ್ತಿದೆ. ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಬೇಕು ತಿಳಿಸಿದರು.

Advertisement

ಕೆಎಎಸ್ ಅಧಿಕಾರಿ ಸೋಮಶೇಖರ್ ಮಾತನಾಡಿ ನಾವು ಹುಟ್ಟಿದ ಊರಿಗೆ ಏನಾದರೂ ಸಹಕಾರ ಮಾಡಬೇಕು ಎಂದು ಶಾಲೆಯನ್ನ ದತ್ತು ತೆಗೆದುಕೊಂಡು ಗ್ರಾಮ ಪಂಚಾಯಿತಿ ಗ್ರಾಮಸ್ಥರ ಸಹಕಾರದಿಂದ ಅಭಿವೃದ್ಧಿ ಮಾಡಲು ಮುಂದಾಗಿದ್ದೇವೆ ಪ್ರತಿ ಗ್ರಾಮದಲ್ಲೂ ಸಹ ಇಂತಹ ಸರಕಾರಿ ಶಾಲೆಯ ಕನ್ನಡ ಶಾಲೆಗಳನ್ನು ಉಳಿಸುವುದಕ್ಕೆ ತಾವೆಲ್ಲರೂ ಬದ್ಧರಾಗಬೇಕು ಇದರಿಂದ ಆರ್ಥಿಕವಾಗಿ ಹಿಂದುಳಿದಿರುವಂತಹ ರೈತರ ಮಕ್ಕಳಿಗೆ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ, ಗ್ರಾಮ ಪಂಚಾಯತಿಯ ಉಪಾಧ್ಯಕ್ಷ ಬಿಸ್ಮಿಸ್ ಖಾನ್, ಶಿವಪ್ಪ, ಎಸ್ ಟಿ ಎಂ ಸಿ ಅಧ್ಯಕ್ಷ ಚೆನ್ನಿಗರಾಮಯ್ಯ, ಬಿ ಆರ್ ಸಿ ಮಧುಸೂಧನ್, ದಿನೇಶ್, ಗ್ರಾಮ ಪಂಚಾಯಿತಿಯ ಎಲ್ಲಾ ಸದಸ್ಯರುಗಳು ಗಾಯಕ ಕಂಬದರಂಗಯ್ಯ, ವಸುಶ್ರೀ, ಸೇರಿದಂತೆ ಶಾಲೆಯ ಶಿಕ್ಷಕರು ಪೋಷಕರು ವಿದ್ಯಾರ್ಥಿಗಳು ಹಾಜರಿದ್ದರು.

Advertisement
Tags :
bengaluruchitradurgaGuruvandana programinaugurationschoolsuddionesuddione newstumakuruಉದ್ಘಾಟನೆಗುರುವಂದನಾ ಕಾರ್ಯಕ್ರಮಚಿತ್ರದುರ್ಗತುಮಕೂರುಬೆಂಗಳೂರುವಿದ್ಯಾರ್ಥಿಗಳುಶಾಲಾ ಕಟ್ಟಡಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article