Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಏನ್ ಮಾಡೋಕೆ ಆಗುತ್ತೆ. ಎಲ್ರಿಗೂ ನಾವೇ ಚೂರಿ ಹಾಕ್ತೀವಿ : ಹೆಚ್ ಡಿ ಕುಮಾರಸ್ವಾಮಿ

02:06 PM Jun 25, 2022 IST | suddionenews
Advertisement

 

Advertisement

ತುಮಕೂರು : ಜೆಡಿಎಸ್ ನಿಂದ ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ಉಚ್ಚಾಟನೆ ವಿಚಾರವಾಗಿ ನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿದ್ದು, ಅದು ಮುಗಿದುಹೋದ ಕಥೆ, ಅದರ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ಹೆಚ್ಡಿಕೆ ನನ್ನ ಬೆನ್ನಿಗೆ ಚೂರಿ ಹಾಕಿದ್ರು ಅಂತಾ ಆರೋಪ ಮಾಡಿದ್ದ ಶ್ರೀನಿವಾಸ್‌ ಮಾತಿಗೆ ಉತ್ತರ ನೀಡಿರುವ ಕುಮಾರಸ್ವಾಮಿ, ಅವರ ಬೆನ್ನಿಗೆ ಚೂರಿ ಹಾಕಿದ್ದು ನಾನೇ, ಏನ್ ಮಾಡೋಕೆ ಆಗುತ್ತೆ. ಎಲ್ರಿಗೂ ನಾವೇ ಚೂರಿ ಹಾಕ್ತೀವಿ ಎಂದು ಟಾಂಗ್ ಕೊಟ್ಟಿದ್ದಾರೆ. ಅದು ಮುಗಿದು ಹೋದ ಅಧ್ಯಾಯ, ಮತ್ತೆ ಚರ್ಚೆ ಮಾಡೋಕೆ ಹೋಗಲ್ಲಾ. ಯಾರ್ಯಾರು ಏನ್ ಮಾಡಿದ್ದಾರೆ ಅಂತಾ ಜನ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.

Advertisement

ಅಗ್ನಿಪಥ್ ಯೋಜನೆ ವಿಚಾರವಾಗಿ ಮಾತನಾಡಿ, ಪರ ಹಾಗೂ ವಿರೋಧ ಎರಡೂ ಕೇಳಿ ಬರ್ತಿದೆ. ಈ ಹೊಸ ಪ್ರಯೋಗದಲ್ಲಿ ಇರುವ ಸಂಶಯಗಳನ್ನ ಸರಿಪಡಿಸಬೇಕು. ಕೆಲ ಅನುಮಾನಗಳನ್ನ ಸರಿಪಡಿಸಿಕೊಂಡ್ರೇ ಸುಗಮವಾಗಿ ಸರಿಯಾಗುತ್ತೆ ಅನ್ನೋದು ನನ್ನ ಅಭಿಪ್ರಾಯ. ಸಂಶಯಗಳನ್ನ ಸರಿಪಡಿಸೋದು ಕೇಂದ್ರ ಸರ್ಕಾರದ ಹೊಣೆ ಎಂದಿದ್ದಾರೆ.

ಇನ್ನು ಪಠ್ಯಪುಸ್ತಕ ವಾಪಸ್ ಪಡೆಯುವಂತೆ ದೇವೇಗೌಡರ ಪತ್ರ ವಿಚಾರವಾಗಿ ಮಾತನಾಡಿ, ಕಾಂಗ್ರೆಸ್ ಮತ್ತು ಬಿಜೆಪಿ ಇಬ್ಬರೂ ವಿಭಿನ್ನವಾದ ಹೇಳಿಕೆಗಳನ್ನ ನೀಡುತ್ತಿದ್ದಾರೆ. ನಾನು ಹಳೆಯ ಮತ್ತು ಹೊಸದು ಪಠ್ಯಪುಸ್ತಕಗಳನ್ನ ಓದುತ್ತೇನೆ. ಅದರ ಅಧ್ಯಾಯನದ ಬಳಿಕ ಒಂದು ತೀರ್ಮಾನಕ್ಕೆ ಬರುತ್ತೇನೆ ಎಂದು ತುಮಕೂರಿನಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆ‌ ನೀಡಿದ್ದಾರೆ.

Advertisement
Tags :
hd kumara swamysuddionetumakuruತುಮಕೂರುಸುದ್ದಿಒನ್ಹೆಚ್ ಡಿ ಕುಮಾರಸ್ವಾಮಿ
Advertisement
Next Article