Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಸರ್ಕಾರದಿಂದ ಕೊಬ್ಬರಿಗೆ ಬೆಂಬಲ ಬೆಲೆ ಫಿಕ್ಸ್ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು ?

07:26 PM Jan 21, 2024 IST | suddionenews
Advertisement

 

Advertisement

ತುಮಕೂರು: ಕೊಬ್ಬರಿ ಬೆಂಬಲ ಬೆಲೆ ಇಳಿಕೆಯಿಂದಾಗಿ ತೆಂಗು ಬೆಳಗಾರರು ಚಿಂತೆಗೀಡಾಗಿದ್ದರು. ಕಳೆದ ಡಿಸೆಂಬರ್ ನಲ್ಲಿಯೇ ಕೊಬ್ಬರಿಗೆ ಬೆಂಬಲ‌ ಬೆಲೆ ನೀಡುತ್ತೇವೆ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ಆದರೆ ಇಲ್ಲಿಯವರೆಗೂ ಅದು ಆದೇಶವಾಗಿಯೇ ಉಳಿದುಬಿಟ್ಟಿತ್ತು. ಇದೀಗ ರೈತರಿಗೆ ಖುಷಿ ಕೊಡುವಂತ ಸುದ್ದಿಯೊಂದನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ತುಮಕೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೊಬ್ಬರಿಗೆ ಬೆಂಬಲ ಬೆಲೆ ಎಷ್ಟೆಂದು ಅಧಿಕೃತ ಘೋಷಣೆ ಮಾಡಿದ್ದಾರೆ. ಕೊಬ್ಬರಿಗೆ ಪ್ರತಿ ಕ್ವಿಂಟಾಲ್ ಗೆ ರಾಜ್ಯ ಸರ್ಕಾರ 1,500 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲಿದೆ ಎಂದು ಘೋಷಣೆ ಮಾಡಿದೆ. ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆಯನ್ನು 300 ರೂಪಾಯಿ ಹೆಚ್ಚಿಸಿ ಡಿಸೆಂಬರ್ ತಿಂಗಳಾಂತ್ಯದಲ್ಲಿ ಆದೇಶಿಸಿತ್ತು. ಅಲ್ಲದೆ, ಉಂಡೆ ಕೊಬ್ಬರಿಗೆ 250 ರೂ. ಹೆಚ್ಚಿಸಿತ್ತು. ಆ ಮೂಲಕ ಬೆಲೆ ಇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ನೆರವಿಗೆ ಧಾವಿಸಿತ್ತು.

Advertisement

ಸಿದ್ದರಾಮಯ್ಯ ಅವರ ಈ ನಿರ್ಧಾರದಿಂದ ತೆಂಗು ಬೆಳೆಗಾರರು ಸಮಾಧಾನಗೊಂಡಿದ್ದಾರೆ. ಬೆಳೆದ ಬೆಲೆಗೆ ಬೆಂಬಲ ಸಿಕ್ಕರೆ ರೈತರಿಗೂ ಒಂದಷ್ಟು ಧೈರ್ಯ ಸಿಗಲಿದೆ. ಸಾಲಾ ಸೋಲ ಮಾಡಿ ರೈತರು ಕೃಷಿ ಮಾಡುತ್ತಾರೆ. ಬೆಂಬಲ ಬೆಲೆ ಸಿಕ್ಕಾಗ ರೈತರು ಸಂತಸಗೊಂಡಿದ್ದಾರೆ.

Advertisement
Tags :
CM SiddaramaiahfixesGovernmentPricesupportಕೊಬ್ಬರಿಫಿಕ್ಸ್ಬೆಂಬಲ ಬೆಲೆಸರ್ಕಾರಸಿಎಂ ಸಿದ್ದರಾಮಯ್ಯಸಿದ್ದರಾಮಯ್ಯ
Advertisement
Next Article