Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ವಾಣಿಜ್ಯ ವಿಭಾಗದಲ್ಲಿ ತುಮಕೂರಿನ ಗಾನವಿ ಟಾಪರ್ : ಉಳಿದ ಮಾಹಿತಿ ಇಲ್ಲಿದೆ

11:45 AM Apr 10, 2024 IST | suddionenews
Advertisement

 

Advertisement

ಬೆಂಗಳೂರು: ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಮೊದಲ ಸ್ಥಾನವನ್ನು ದಕ್ಷಿಣ ಕನ್ನಡ ಭದ್ರವಾಗಿ ಉಳಿಸಿಕೊಂಡಿದೆ. ಉಡುಪಿ ಎರಡನೇ ಸ್ಥಾನ ಪಡೆದರೆ ವಿಜಯಪುರ ಮೂರನೇ ಸ್ಥಾನ ಪಡೆದುಕೊಂಡಿದೆ. ಉಳಿದಂತೆ ಟಾಪರ್ ಗಳ ಲೀಸ್ಟ್ ಇಲ್ಲಿದೆ. ಯಾವೆಲ್ಲಾ ಜಿಲ್ಲೆಯಲ್ಲಿ, ಯಾವೆಲ್ಲಾ ವಿಭಾಗದಲ್ಲಿ ಟಾಪರ್ ಆಗಿದ್ದಾರೆ ಎಂಬ ಕಂಪ್ಲೀಟ್ ಡಿಟೈಲ್ ಇಲ್ಲಿದೆ.

 

Advertisement

ಕಲಾ ವಿಭಾಗದಲ್ಲಿ ಬೆಂಗಳೂರಿನ ಜಯನಗರದ NMKRV ಕಾಲೇಜಿನ ಮೇಧಾ 596 ಅಂಕಗಳನ್ನು ಪಡೆಯುವ ಮೂಲಜ ಪ್ರಥಮ ಸ್ಥಾನ, ವಿಜಯಪುರದ ಎಸ್ ಎಸ್ ಕಾಲೇಜಿನ ವೇದಾಂತ್ 596, ಬಳ್ಳಾರಿಯ ಇಂದು ಕಾಲೇಜಿನ ಕವಿತಾ ಬಿವಿ 596, ಧಾರವಾಡದ ಕೆಇಬಿ ಕಾಲೇಜಿನ ರವೀನಾ ಸೋಮಪ್ಪ ಲಮಾಣಿ 595 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಇನ್ನು ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲಿಯೇ ಒಂದು ಹುಡುಗಿ ಮಾತ್ರ ಫಸ್ಟ್ ರ್ಯಾಂಕ್ ಪಡೆದಿದ್ದಾರೆ. ತುಮಕೂರಿನ ವಿದ್ಯಾನಿಧಿ ಕಾಲೇಜಿನ ಗಾನವಿ 597 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಫಸ್ಟ್ ಬಂದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನೂತನ್ ಆರ್ ಗೌಡ - 595, ಉಡುಪಿಯ ಕಾರ್ಕಳ ಜ್ಞಾನ ಸುಧಾ ಕಾಲೇಜಿನ ಸಮ್ಯಕ್ ಆರ್ ಪ್ರಭು -595 ಅಂಕ, ಬೆಂಗಳೂರಿನ ಅಶೋಕ್ ಪಿಯು ಕಾಲೇಜಿನ ಅಮೋದ್ ನಾಯ್ಕ್ -595 ಅಂಕ, ಶಿವಮೊಗ್ಗದ ಕುಮದ್ವತಿ ಕಾಲೇಜಿನ ಪವನ್ 596 ಅಂಕ, ಉಡುಪಿಯ ಪೂರ್ಣಪ್ರಜ್ಞಾ ಕಾಲೀಜಿನ ಹರ್ಷಿತ್ 596 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ಇನ್ನು ಚಿತ್ರದುರ್ಗ 72.92 ಶೇಕಡವಾರು ಪಡೆಯುವ ಮೂಲಕ 31ನೇ ಸ್ಥಾನ ಪಡೆದಿದೆ.

Advertisement
Tags :
bengaluruCategorychitradurgaCommerceGanaviinformationsuddionesuddione newstoppertumkurಗಾನವಿಚಿತ್ರದುರ್ಗಟಾಪರ್ತುಮಕೂರುಬೆಂಗಳೂರುಮಾಹಿತಿವಾಣಿಜ್ಯ ವಿಭಾಗಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article