For the best experience, open
https://m.suddione.com
on your mobile browser.
Advertisement

ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಮಾಜಿ ಶಾಸಕ ಮಸಾಲ ಜಯರಾಮ್ ರಿಂದ ಚಾಲನೆ

05:19 PM Sep 24, 2024 IST | suddionenews
ಬಿಜೆಪಿ ಸದಸ್ಯತಾ ಅಭಿಯಾನಕ್ಕೆ ಮಾಜಿ ಶಾಸಕ ಮಸಾಲ ಜಯರಾಮ್ ರಿಂದ ಚಾಲನೆ
Advertisement

ವರದಿ ಮತ್ತು ಫೋಟೋ ಕೃಪೆ
ರಂಗಸ್ವಾಮಿ, ಗುಬ್ಬಿ
ಮೊ : +91 99019 53364

Advertisement
Advertisement

ಸುದ್ದಿಒನ್, ಗುಬ್ಬಿ, ಸೆಪ್ಟೆಂಬರ್. 24 : ಕೇಂದ್ರ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸದಸ್ಯತ್ವ ನೋಂದಣಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಿಕಟ ಪೂರ್ವ ತುರುವೇಕೆರೆ ಶಾಸಕ ಮಸಾಲ ಜಯರಾಮ್ ತಿಳಿಸಿದರು.

ತಾಲೂಕಿನ ಸಿ ಎಸ್ ಪುರ ಗ್ರಾಮದ ಎಸ್ ಎಲ್ ಎನ್ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ 2024 ಚಾಲನೆ ನೀಡಿ ಮಾತನಾಡಿ, ಬಿಜೆಪಿ ಪಕ್ಷದ ಬಹಳ ಮಹತ್ವಪೂರ್ಣವಾದ ಅಭಿಯಾನವಾಗಿದ್ದು. ಕ್ಷೇತ್ರದಲ್ಲಿ 1 ಲಕ್ಷ ಸದಸ್ಯತ್ವ ಮಾಡುವ ಗುರಿಯನ್ನು ಇಟ್ಟುಕೊಂಡಿದ್ದು. ಹೋಬಳಿ ಭಾಗದ ಅಧ್ಯಕ್ಷರು ಪದಾಧಿಕಾರಿಗಳು ಸಹಕರಿಸಬೇಕು. ಸದಸ್ಯತ್ವ ಹೊಂದುವ ಮಾಹಿತಿಯನ್ನು ಅರ್ಥವಾಗುವ ರೀತಿಯಲ್ಲಿ ಜನರಿಗೆ ತಿಳಿಸಬೇಕು.

Advertisement
Advertisement

ಬಿಜೆಪಿ ಸದಸ್ಯತ್ವ ಪಡೆಯಲು 8800002024 ನಂಬರಿಗೆ ಮಿಸ್ ಕಾಲ್ ನೀಡಿ ಸದಸ್ಯತ್ವಕ್ಕಾಗಿ ಎಸ್ಎಂಎಸ್ ಮೂಲಕ ಸ್ವೀಕರಿಸಿದ ಲಿಂಕ್ ಬಳಸಿ ಪೂರ್ಣ ವಿವರವನ್ನು ಭರ್ತಿ ಮಾಡಿ ಎಸ್ಎಮ್ಎಸ್ ಮೂಲಕ ಸದಸ್ಯತ್ವದ ಪಡೆಯಬಹುದು. ಸ್ಮಾರ್ಟ್ ಫೋನ್ ಇಲ್ಲದಿದ್ದಲ್ಲಿ ಸದಸ್ಯತ್ವ ಹೊಂದಿದವರ ಸಹಾಯದ ಮೂಲಕ ಸದಸ್ಯತ್ವದ ಅರ್ಜಿಯ ಲಿಂಕ್ ಅನ್ನು ಕ್ಲಿಕ್ ಮಾಡಬಹುದು ಎಂದು ತಿಳಿಸಿದರು.

ಈ ವೇಳೆ ಮಂಡಲದ ಅಧ್ಯಕ್ಷ ಕೆವಿ ಮೃತ್ಯುಂಜಯ, ಭಾನುಪ್ರಕಾಶ್, ಜಿ ವಿ ಪ್ರಕಾಶ್, ಮಾದೇಶ್, ದಂಡಿನ ಶಿರ ಹೋಬಳಿ ಅಧ್ಯಕ್ಷ ಸಿದ್ದಪ್ಪಾಜಿ, ಲೋಕೇಶ್ ಮುಂತಾದವರಿದ್ದರು.

Advertisement
Tags :
Advertisement