For the best experience, open
https://m.suddione.com
on your mobile browser.
Advertisement

ಹೇಮಾವತಿ ನೀರಿಗಾಗಿ ತುಮಕೂರು-ರಾಮನಗರ ಜನರ ನಡುವೆ ಕಿತ್ತಾಟ..!

03:18 PM Jun 23, 2024 IST | suddionenews
ಹೇಮಾವತಿ ನೀರಿಗಾಗಿ ತುಮಕೂರು ರಾಮನಗರ ಜನರ ನಡುವೆ ಕಿತ್ತಾಟ
Advertisement

ತುಮಕೂರು: ಹೇಮಾವತಿ ನೀರಿಗಾಗಿ ಜಿಲ್ಲೆ ಜಿಲ್ಲೆಯ ಜನರೇ ಕಿತ್ತಾಡಿಕೊಳ್ಳುತ್ತಿರುವ ಪ್ರಸಂಗ ನಡೆಯುತ್ತಿದೆ. ಹೇಮಾವತಿ ನದಿಯ ಗೋರೂರು ಡ್ಯಾಮ್ ಗಾಗಿ ತುಮಕೂರು ಹಾಗೂ ರಾಮನಗರ ಮಂದಿ ಕಿತ್ತಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರ ಹೇಮಾವತಿ ನೀರನ್ನು ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಮೂಲಕ ತುಮಕೂರಿನ ಗುಬ್ಬಿಯಿಂದ ಸೀದಾ ಕುಣಿಗಲ್ ಮೂಲಕ ಮಾಗಡಿ ತಾಲೂಕಿಗೆ ಹರಿಸಲು ನಿರ್ಧಾರ ಮಾಡಿದೆ. ಹೀಗಾಗಿ ಈ ನೀರಿನ ವಿಚಾರ ತುಮಕೂರು ರಾಜಕಾರಣಿಗಳು ಹಾಗೂ ರಾಮನಗರ ಮುಖಂಡರ ನಡುವೆ ಗಲಭೆ ಶುರುವಾಗಿದೆ.

Advertisement

ಮಾಗಡಿ ತಾಲೂಕಿನ ಶ್ರೀರಂಗ ಏತ ನೀರಾವರಿಗೆ ಬಜೆಟ್ ನಲ್ಲಿ ಒಂದು ಸಾವಿರ ಕೋಟಿ ರೂಪಾಯಿ ಹಂಚಿಕೆ ಮಾಡಲಾಗಿದೆ. ಕ್ಯಾಬಿನೆಟ್ ನಲ್ಲೂ ಇದಕ್ಕೆ ಈಗಾಗಲೇ ಒಪ್ಪಿಗೆ ಸೂಚಿಸಲಾಗಿದೆ. ಗುಬ್ಬಿ ತಾಲೂಕಿನಿಂದ ಪೈಪ್ ಲೈನ್ ಕೆಲಸವೂ ಶುರುವಾಗಿದೆ. ಕುಣಿಗಲ್ ತಾಲ್ಲೂಕಿನ ಡಿ.ರಾಂಪೂರ ತಾಲೂಕಿನಿಂದಾನೂ ಪೈಪ್ ಲೈನ್ ಕಾಮಗಾರಿ ಆರಂಭವಾಗಿದೆ‌. ಈ ಯೋಜನೆಗೆ ತುಮಕೂರಿನ ರಾಜಕಾರಣಿಗಳು, ರೈತರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

Advertisement

ಗೊರೂರು ಡ್ಯಾಂನಿಂದ ವರ್ಷಕ್ಕೆ 24 TMC ನೀರನ್ನು ತುಮಕೂರು ಜಿಲ್ಲೆಗೆ ಹರಿಸಬೇಕೆಂದು ರಾಜ್ಯ ಸರ್ಕಾರ ನೀರು ಹಂಚಿಕೆ ಮಾಡಿದೆ. ಈಗ ಮಾಗಡಿ ತಾಲ್ಲೂಕಿಗೆ ಪ್ರತ್ಯೇಕವಾಗಿ ಹೊಸದಾಗಿ ನೀರು ಹಂಚಿಕೆ ಮಾಡಿಸಿಕೊಳ್ಳದೇ 0.75 ಟಿಎಂಸಿ ನೀರನ್ನು ಹರಿಸಲು ಪೈಪ್‌ಲೇನ್ ಕಾಮಗಾರಿ ನಡೆಸಲಾಗುತ್ತಿದೆ ಅನ್ನೋದು ತುಮಕೂರು ಜಿಲ್ಲೆಯ ರಾಜಕಾರಣಿಗಳ ಆಕ್ಷೇಪ. ನೈಸರ್ಗಿಕವಾಗಿ ನಾಲೆಯ ಮೂಲಕವೇ ಕುಣಿಗಲ್ ಮೂಲಕ ಮಾಗಡಿಗೆ ನೀರು ತೆಗೆದುಕೊಂಡು ಹೋಗಬಹುದಿತ್ತು. ಇದರ ಬದಲು ಸ್ಟೀಲ್ ಪೈಪ್‌ಗಳನ್ನು ಹಾಕಿ ಮಾಗಡಿಗೆ ಹೇಮಾವತಿ ನೀರು ಹರಿಸಿದರೆ ಕುಣಿಗಲ್ ತಾಲ್ಲೂಕಿಗೆ ನೀರು ಸಿಗದಂತಾಗುತ್ತೆ. ತುಮಕೂರು ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ನೀರು ಕಡಿಮೆಯಾಗುತ್ತೆ ಎಂಬ ಆತಂಕ ತುಮಕೂರು ಜಿಲ್ಲೆಯ ರಾಜಕಾರಣಿಗಳದ್ದು.

Tags :
Advertisement