ಹುಲಿ ಉಗುರು ಧರಿಸಿದ್ದ ತುಮಕೂರಿನ ಧನಂಜಯ ಸ್ವಾಮೀಜಿ ವಿಚಾರಣೆ..!
ವರ್ತೂರ್ ಸಂತೋಷ್ ಅರೆಸ್ಟ್ ಆಗಿದ್ದೆ ತಡ ಹುಲಿ ಉಗುರಿನ ಬಗ್ಗೆ ಸಾಕಷ್ಟು ಪ್ರಕರಣಗಳು ಹೊರಗೆ ಬರುತ್ತಿವೆ. ಇದೀಗ ಧನಂಜಯ ಗುರೂಜಿಯೂ ಲಾಕ್ ಆಗಿದ್ದಾರೆ. ಹುಲಿ ಉಗುರಿನ ಸರ ಧರಿಸಿದ್ದರಿಂದ ತನಿಖೆ ನಡೆಸುತ್ತಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಬಿದನಗೆರೆಯ ಶನಿಮಹಾತ್ಮದ ಅರ್ಚಕ ಧನಂಜಯ ಗುರೂಜಿ ಈಗ ಅರಣ್ಯಾಧಿಕಾರಿಗಳಿಗೆ ಲಾಕ್ ಆಗಿದ್ದಾರೆ. ಮಠದ ಸ್ವಾಮೀಜಿಯಾದ ಬಳಿಕ ಮೈತುಂಬ ಒಡವೆ ಹಾಕುತ್ತಿದ್ದರು. ಕೊರಳಿನಲ್ಲಿ ಯಾವಾಗಲೂ ಹುಲಿ ಉಗುರು ಇರುತ್ತಿತ್ತು. ಈ ಫೋಟೋ ವೈರಲ್ ಆಗುತ್ತಿದ್ದಂತೆ ಅರಣ್ಯ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಆದರೆ ತನಿಖೆಯಲ್ಲಿ ಹುಲಿ ಉಗುರಿನ ಪೆಂಡೆಂಟ್ ಮಾತ್ರ ಸಿಕ್ಕಿಲ್ಲ. ಚಿನ್ನದ ಚೈನ್ ಗಳನ್ನೆಲ್ಲಾ ತನಿಖೆ ನಡೆಸಿದ್ದಾರೆ.
ಅದು ಆರ್ಟಿಫಿಶಿಯಲ್ ತುಂಬಾ ದಿನದಿಂದ ಹಾಕುತ್ತಿದ್ದರಿಂದ ಕಪ್ಪು ಬಣ್ಣಕ್ಕೆ ತಿರುಗಿತ್ತು. ಹೀಗಾಗಿ ಬಿಸಾಡಿದ್ದೇನೆ ಎಂದಿದ್ದಾರಂತೆ. ಆದರೆ ಇಷ್ಟೆಲ್ಲ ಚಿನ್ನದ ಒಡವೆಗಳನ್ನು ಹಾಕಿಕೊಳ್ಳುವ ಗುರೂಜಿ ಈಗ ಆರ್ಟಿಫಿಶಿಯಲ್ ಪೆಂಡೆಂಟ್ ಹಾಕುತ್ತಾರಾ ಎಂದು ಚರ್ಚೆಗಳು ಶುರುವಾಗಿದೆ. ಇನ್ನು ಜಿಲ್ಲಾಧಿಕಾರಿ ಅನುಪಮಾ ಕೂಡ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆರ್ಟಿಫಿಶಿಯಲ್ ಉಗುರನ್ನು ಪರಿಶೀಲನೆ ಮಾಡುತ್ತಿದ್ದಾರೆ. ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಇದು ಒರಿಜಿನಲ್ ಅಥವಾ ಡೂಪ್ಲಿಕೇಟ್ ಹ ಎಂಬುದನ್ನು ಪರೀಕ್ಷೆ ಮಾಡಲಾಗುತ್ತದೆ.